IPL 2021: ಮುಂಬೈ ಬ್ಯಾಟಿಂಗ್, ತಂಡಕ್ಕೆ ಮರಳಿದ ರೋಹಿತ್; ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಹೀಗಿದೆ
IPL 2021: ರೋಹಿತ್ ಆಗಮನದ ನಂತರ ಅನ್ಮೋಲ್ಪ್ರೀತ್ ಸಿಂಗ್ ಹೊರಗುಳಿದಿದ್ದಾರೆ. ಅವರು ಚೆನ್ನೈ ವಿರುದ್ಧ ರೋಹಿತ್ ಬದಲಿಗೆ ತಂಡಕ್ಕೆ ಬಂದು ಪಾದಾರ್ಪಣೆ ಮಾಡಿದರು. ಇದರ ಹೊರತಾಗಿ, ಮುಂಬೈ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.
ಐಪಿಎಲ್ 2021 ರ ಇಂದಿನ ಪಂದ್ಯದಲ್ಲಿ, ಪ್ರಸ್ತುತ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎರಡು ಬಾರಿ ವಿಜೇತ ಕೋಲ್ಕತಾ ನೈಟ್ ರೈಡರ್ಸ್ ಅನ್ನು ಎದುರಿಸುತ್ತಿದೆ. ಅಬುಧಾಬಿಯ ಶೇಖ್ ಜಾಯೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ಕೆಕೆಆರ್ ದ್ವಿತೀಯಾರ್ಧದ ಐಪಿಎಲ್ನ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿತು. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ಎರಡನೇ ಹಂತದ ಮೊದಲ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ, ಕೆಕೆಆರ್ ಗೆಲ್ಲುವ ಮೂಲಕ ತಮ್ಮ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಲು ಪ್ರಯತ್ನಿಸುತ್ತದೆ. ಆದರೆ ಮುಂಬೈ ಗೆಲುವಿನ ಟ್ರ್ಯಾಕ್‌ಗೆ ಮರಳಲು ಯತ್ನಿಸುತ್ತಿದೆ.
ಮುಂಬೈಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡಲಿಲ್ಲ ಮತ್ತು ಕೀರನ್ ಪೊಲ್ಲಾರ್ಡ್ ತಂಡದ ನಾಯಕತ್ವ ವಹಿಸಿದ್ದರು. ಈ ಪಂದ್ಯದಲ್ಲಿ ರೋಹಿತ್ ಮರಳಿದ್ದಾರೆ. ಟಾಸ್ ಗೆದ್ದ ಕೋಲ್ಕತ್ತಾ ನಾಯಕ ಇಯಾನ್ ಮಾರ್ಗನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮಾರ್ಗನ್ ತನ್ನ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.
ಮುಂಬೈ ತಂಡದಲ್ಲಿ ಒಂದು ಬದಲಾವಣೆ ರೋಹಿತ್ ಆಗಮನದ ನಂತರ ಅನ್ಮೋಲ್ಪ್ರೀತ್ ಸಿಂಗ್ ಹೊರಗುಳಿದಿದ್ದಾರೆ. ಅವರು ಚೆನ್ನೈ ವಿರುದ್ಧ ರೋಹಿತ್ ಬದಲಿಗೆ ತಂಡಕ್ಕೆ ಬಂದು ಪಾದಾರ್ಪಣೆ ಮಾಡಿದರು. ಇದರ ಹೊರತಾಗಿ, ಮುಂಬೈ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.
ಹಾರ್ದಿಕ್ ಪಾಂಡ್ಯ ಗೈರು ರೋಹಿತ್ ತಂಡಕ್ಕೆ ಮರಳಿದ್ದಾರೆ ಆದರೆ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಿಲ್ಲ. ಇಂಜುರಿಯಿಂದಾಗಿ ಪಾಂಡ್ಯ ಆಡುತ್ತಿಲ್ಲ. ಈ ಪಂದ್ಯದಲ್ಲಿ ಪಾಂಡ್ಯ ಮರಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಅವರು ತಂಡದಿಂದ ಹೊರಗುಳಿದಿದ್ದಾರೆ. ಟಿ 20 ವಿಶ್ವಕಪ್‌ಗಾಗಿ ಪಾಂಡ್ಯ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ ಆದರೆ ಅವರ ಗಾಯವು ತಂಡದ ಕಾಳಜಿಯನ್ನು ಹೆಚ್ಚಿಸಿದೆ.
ತಂಡಗಳು ಈ ಕೆಳಗಿನಂತಿವೆ ಮುಂಬೈ ಇಂಡಿಯನ್ಸ್- ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಸೌರಭ್ ತಿವಾರಿ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಆಡಮ್ ಮಿಲ್ನೆ, ರಾಹುಲ್ ಚಾಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್
ಕೋಲ್ಕತ್ತಾ ನೈಟ್ ರೈಡರ್ಸ್- ಇಯಾನ್ ಮಾರ್ಗನ್ (ಕ್ಯಾಪ್ಟನ್), ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್, ಆಂಡ್ರೆ ರಸೆಲ್, ಸುನಿಲ್ ನರೈನ್, ಲಾಕಿ ಫರ್ಗ್ಯೂಸನ್, ವರುಣ್ ಚಕ್ರವರ್ತಿ, ಪ್ರಸಿದ್ದ್ ಕೃಷ್ಣ
Published On - 7:19 pm, Thu, 23 September 21