Utkarsha Pawar: ಸಿಎಸ್​ಕೆ ಗೆಲ್ಲುತ್ತಿದ್ದಂತೆ ಓಡಿ ಬಂದು ಧೋನಿಯ ಕಾಲು ಮುಟ್ಟಿ ನಮಸ್ಕರಿಸಿದ ರುತುರಾಜ್ ಭಾವಿ ಪತ್ನಿ ಉತ್ಕರ್ಷ ಪವಾರ್

|

Updated on: Jun 03, 2023 | 8:54 AM

MS Dhoni, CSK vs GT IPL 2023 Final: ಐಪಿಎಲ್ 2023 ಫೈನಲ್ ಪಂದ್ಯ ಮುಗಿದ ಬಳಿಕ ಸಿಎಸ್​ಕೆ ತಂಡದ ಸ್ಟಾರ್ ಓಪನರ್ ರುತುರಾಜ್ ಗಾಯಕ್ವಾಡ್ ಅವರ ಭಾವಿ ಪತ್ನಿ ಉತ್ಕರ್ಷ ಪವಾರ್ ಅವರು ಧೋನಿಯ ಪಾದ ಮುಟ್ಟಿ ನಮಸ್ಕರಿಸುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

Utkarsha Pawar: ಸಿಎಸ್​ಕೆ ಗೆಲ್ಲುತ್ತಿದ್ದಂತೆ ಓಡಿ ಬಂದು ಧೋನಿಯ ಕಾಲು ಮುಟ್ಟಿ ನಮಸ್ಕರಿಸಿದ ರುತುರಾಜ್ ಭಾವಿ ಪತ್ನಿ ಉತ್ಕರ್ಷ ಪವಾರ್
MS Dhoni and Utkarsha Pawar
Follow us on

ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಗೆ (IPL 2023) ತೆರೆ ಬಿದ್ದು ಮೂರು ದಿನಗಳು ಕಳೆದಿವೆ. ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ರಣರೋಚಕ ಫೈನಲ್ ಕದನದಲ್ಲಿ ಚೆನ್ನೈ (CSK vs GT) 5 ವಿಕೆಟ್​ಗಳ ಜಯ ಸಾಧಿಸಿ ಪ್ರಶಸ್ತಿಗೆ ಮುತ್ತಿಕ್ಕಿತು. ಇದಾಗಿ ನಾಲ್ಕು ದಿನ ಆಗುತ್ತಾ ಬಂದರು ಐಪಿಎಲ್ 2023 ಫೀವರ್ ಇನ್ನೂ ಕಡಿಮೆ ಆಗಿಲ್ಲ. ಸಿಎಸ್​ಕೆ, ಧೋನಿ (MS Dhoni) ಕುರಿತು ಒಂದಲ್ಲ ಒಂದು ಸುದ್ದಿ ವೈರಲ್ ಆಗುತ್ತಲೇ ಇದೆ. ಇದೀಗ ಪ್ರೆಸೆಂಟೇಷನ್ ಸೆರಮನಿ ವೇಳೆ ನಡೆದ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿದೆ.

ಸಿಎಸ್​ಕೆ ತಂಡದ ಸ್ಟಾರ್ ಓಪನರ್ ರುತುರಾಜ್ ಗಾಯಕ್ವಾಡ್ ಅವರ ಭಾವಿ ಪತ್ನಿ ಉತ್ಕರ್ಷ ಪವಾರ್ ಅವರು ಧೋನಿಯ ಪಾದ ಮುಟ್ಟಿ ನಮಸ್ಕರಿಸುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಚೆನ್ನೈ ಗೆಲುವು ಸಾಧಿಸಿದ ಬಳಿಕ ಪ್ರೆಸೆಂಟೇಷನ್ ಸೆರಮನಿಗೆಂದು ಎಲ್ಲ ಸಿಎಸ್​ಕೆ ಆಟಗಾರರು ಮೈದಾನದಲ್ಲಿದ್ದರು. ಅಲ್ಲಿ ಧೋನಿ ಕೂಡ ಮಾತುಕತೆಯಲ್ಲಿ ತೊಡಗಿದ್ದರು. ಈ ಸಂದರ್ಭ ಓಡಿ ಬಂದ ರುತುರಾಜ್ ಅವರ ಭಾವಿ ಪತ್ನಿ ಉತ್ಕರ್ಷ ಧೋನಿಯನ್ನು ಅಪ್ಪಿಕೊಂಡಿದ್ದಾರೆ. ಬಳಿಕ ಎಂಎಸ್​ಡಿ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ
NAM vs KAR: ನಮೀಬಿಯಾದಲ್ಲಿ ರಾಜ್ಯದ ಹುಡುಗರ ದರ್ಬಾರ್: ಕರ್ನಾಟಕಕ್ಕೆ 9 ವಿಕೆಟ್​ಗಳ ಜಯ
Junior Men’s Asia Cup Hockey: ಪಾಕ್​ ಮಣಿಸಿ ಕಪ್​ ಗೆದ್ದ ಭಾರತ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
ಓರ್ವ ಮಹಿಳೆಯಾಗಿ ನಾನು…: ಕುಸ್ತಿಪಟುಗಳ ಪ್ರತಿಭಟನೆಗೆ ಮಹಾರಾಷ್ಟ್ರದ ಬಿಜೆಪಿ ಸಂಸದೆ ಬೆಂಬಲ
WTC Final 2023: ಭಾರತದ ವಿರುದ್ಧ ದೈತ್ಯರನ್ನೇ ಕಣಕ್ಕಿಳಿಸಲಿದೆ ಕ್ರಿಕೆಟ್ ಆಸ್ಟ್ರೇಲಿಯಾ; ಹೀಗಿದೆ ಸಂಭಾವ್ಯ ತಂಡ

ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ: ಕುಸ್ತಿಪಟುಗಳಿಗೆ ಕಪಿಲ್ ದೇವ್ ನೇತೃತ್ವದ 1983 ಚಾಂಪಿಯನ್ಸ್ ತಂಡದ ಸದಸ್ಯರ ಕಿವಿಮಾತು

 

ರುತುರಾಜ್ ಗಾಯಕ್ವಾಡ್ ಹಾಗೂ ಉತ್ಕರ್ಷ ಪವಾರ್ ಇಂದು ವೈವಾಹಿಕ ಜೀವನಕ್ಕೇ ಕಾಲಿಡಲಿದ್ದಾರೆ. ಉತ್ಕರ್ಷ ಅವರ ಬಗ್ಗೆ ಹೇಳಬೇಕೆಂದರೆ ಅಕ್ಟೋಬರ್ 13, 1998 ರಂದು ಜನಿಸಿದ ಇವರು ಕೂಡ ಕ್ರಿಕೆಟರ್. ದೇಶೀಯ ಸರ್ಕ್ಯೂಟ್‌ನಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ. 24 ವರ್ಷ ವಯಸ್ಸಿನ ಉತ್ಕರ್ಷ ಅವರು ಆಲ್ ರೌಂಡರ್ ಆಗಿದ್ದು, ಅವರು ಬಲಗೈ ಬ್ಯಾಟರ್ ಮತ್ತು ಬಲಗೈ ಬೌಲರ್ ಕೂಡ ಆಗಿದ್ದಾರೆ. ಸದ್ಯ, ಸುಮಾರು 18 ತಿಂಗಳುಗಳಿಂದ ಕ್ರಿಕೆಟ್​ನಿಂದ ದೂರವಿರುವ ಪವಾರ್, ವರದಿಗಳ ಪ್ರಕಾರ ಪುಣೆಯಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಮತ್ತು ಫಿಟ್‌ನೆಸ್ ಸೈನ್ಸಸ್‌ನಲ್ಲಿ (INFS) ಓದುತ್ತಿದ್ದಾರೆ ಎಂದು ತಿಳಿದುಬಂದಿದೆ.

ಎಂಎಸ್ ಧೋನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ:

ಐಪಿಎಲ್ 2023 ಟೂರ್ನಿ ಆರಂಭದ ವೇಳೆ ಮೊಣಕಾಲು ನೋವಿಗೆ ತುತ್ತಾಗಿದ್ದ ಎಂಎಸ್ ಧೋನಿ, ಫೈನಲ್ ಪಂದ್ಯ ಮುಗಿದ ಕೂಡಲೇ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ಧೋನಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ವರದಿಯಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಧೋನಿಯವರನ್ನು ಭೇಟಿಯಾಗಿದ್ದ ಚೆನ್ನೈ ಸಿಇಒ ಕಾಶಿ ವಿಶ್ವನಾಥ್, ಧೋನಿ ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ವರದಿ ಪ್ರಕಾರ ಧೋನಿ ಸುಮಾರು 2 ತಿಂಗಳಲ್ಲಿ ಸಂಪೂರ್ಣ ಫಿಟ್ ಆಗಲಿದ್ದಾರೆ ಎಂಬುದು ತಿಳಿದುಬಂದಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:49 am, Sat, 3 June 23