Junior Men’s Asia Cup Hockey: ಪಾಕ್ ಮಣಿಸಿ ಕಪ್ ಗೆದ್ದ ಭಾರತ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
ಇಂದು ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಸೋಲಿಸುವ ಮೂಲಕ ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡ ಜೂನಿಯರ್ ಏಷ್ಯಾಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಇಂದು ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಸೋಲಿಸುವ ಮೂಲಕ ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡ ಜೂನಿಯರ್ ಏಷ್ಯಾಕಪ್ ಟೂರ್ನಿ (Junior Men’s Asia Cup Hockey) ಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಂಗದ್ ಬೀರ್ ಸಿಂಗ್ ಮತ್ತು ಅರೈಜೀತ್ ಸಿಂಗ್ ಹುಂಡಾಲ್ ಅವರ ಗೋಲುಗಳ ನೆರವಿನಿಂದ ಭಾರತ 2-1 ಗೋಲುಗಳಿಂದ ಎದುರಾಳಿ ಪಾಕಿಸ್ತಾನವನ್ನು ಮಣಿಸಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಗೆದ್ದ ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆ ಕೋರಿದ್ದಾರೆ.
ಟ್ವೀಟ್ ಮೂಲಕ ಶುಭ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ಪುರುಷರ ಜೂನಿಯರ್ ಏಷ್ಯಾ ಕಪ್ನಲ್ಲಿ ಅದ್ಭುತ ಗೆಲುವು ಸಾಧಿಸಿದ ನಮ್ಮ ಜೂನಿಯರ್ ಪುರುಷರ ಹಾಕಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಗೆಲುವು ಬೆಳೆಯುತ್ತಿರುವ ಯುವಕರಲ್ಲಿ ಪ್ರತಿಭೆ ಮತ್ತು ದೃಢನಿಶ್ಚಯವನ್ನು ಪ್ರತಿಬಿಂಬಿಸುತ್ತದೆ. ಅವರು ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದಿದ್ದಾರೆ.
Heartiest congratulations to our Junior Men’s Hockey Team for their splendid victory at the Men’s Junior Asia Cup. Their triumph reflects the burgeoning talent and determination that our youth hold. They have made India very proud. pic.twitter.com/r5tdlfduH3
— Narendra Modi (@narendramodi) June 2, 2023
ಇದನ್ನೂ ಓದಿ: WTC Final 2023: ಡಬ್ಲ್ಯುಟಿಸಿ ಫೈನಲ್ ಗೆದ್ದರೆ ಕ್ರಿಕೆಟ್ ದುನಿಯಾದಲ್ಲಿ ಹೊಸ ಇತಿಹಾಸ ಬರೆಯಲಿದೆ ಟೀಂ ಇಂಡಿಯಾ..!
ನಾಲ್ಕನೇ ಭಾರಿ ಪ್ರಶಸ್ತಿ ಗೆದ್ದ ಭಾರತ
ಪಂದ್ಯಾವಳಿಯ ಪ್ರತಿ ಹಂತವನ್ನು ಗೆದ್ದ ಭಾರತೀಯ ಜೂನಿಯರ್ ತಂಡವು ರಿಪಬ್ಲಿಕ್ ಆಫ್ ಕೊರಿಯಾವನ್ನು 9-1 ಗೋಲುಗಳಿಂದ ಸೋಲಿಸಿ ಪಾಕಿಸ್ತಾನವನ್ನು ಸೋಲಿಸಿ ಫೈನಲ್ಗೆ ಪ್ರವೇಶಿಸಿತು. 2004, 2008 ಮತ್ತು 2015 ರಲ್ಲಿ ಗೆಲುವು ಸಾಧಿಸಿದ ನಂತರ, ಭಾರತೀಯ ಜೂನಿಯರ್ ತಂಡವು ಜೂನಿಯರ್ ಏಷ್ಯಾ ಕಪ್ನ ಅತ್ಯಂತ ಯಶಸ್ವಿ ತಂಡವಾಗಿದೆ.
ಇದನ್ನೂ ಓದಿ: ಎಸಿಸಿ ಉದಯೋನ್ಮುಖ ಮಹಿಳಾ ಏಷ್ಯಾಕಪ್ಗೆ ಭಾರತ ‘ಎ’ ತಂಡ ಪ್ರಕಟ; ಶ್ವೇತಾ ಸೆಹ್ರಾವತ್ಗೆ ನಾಯಕತ್ವ
ತಲಾ 2ಲಕ್ಷ ರೂ. ಬಹುಮಾನ
ಏಷ್ಯಾ ಕಪ್ ಗೆದ್ದ ಭಾರತ ತಂಡದ ಸದಸ್ಯರಿಗೆ ಹಾಕಿ ಇಂಡಿಯಾ ತಲಾ 2 ಲಕ್ಷ ರೂ. ಹಾಗೂ ಕೋಚಿಂಗ್ ಸಿಬ್ಬಂದಿಗೆ ತಲಾ 1 ಲಕ್ಷ ರೂ, ನಗದು ಬಹುಮಾನವನ್ನು ಪ್ರಕಟಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
