ಐಪಿಎಲ್ ಮೆಗಾ ಹರಾಜಿನಲ್ಲಿ 1.10 ಕೋಟಿ ರೂಗಳಿಗೆ ಬಿಕರಿಯಾಗಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದ 13 ವರ್ಷದ ವೈಭವ್ ಸೂರ್ಯವಂಶಿ ಇದೀಗ ತನ್ನ ಸ್ಫೋಟಕ ಆಟದಿಂದಲೇ ವಿಶ್ವ ಕ್ರಿಕೆಟ್ನಲ್ಲಿ ಮನೆ ಮಾತಾಗಿದ್ದಾರೆ. ಇತ್ತಿಚೆಗಷ್ಟೇ ಮುಕ್ತಾಯಗೊಂಡ 19 ವರ್ಷದೊಳಗಿನವರ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ವೈಭವ್ ಹೊಡಿಬಡಿ ಆಟದ ಮೂಲಕವೇ ಎದುರಾಳಿ ತಂಡದ ನಿದ್ದೆಗೆಡಿಸಿದ್ದರು. ವಯಸ್ಸು ಕೇವಲ 13 ವರ್ಷಗಳಿದ್ದರೂ ವೈಭವ್ ಅವರ ಆಟವನ್ನು ನೋಡಿದವರು ಮಾತ್ರ ಈ ಪೋರನ ಕ್ರಿಕೆಟ್ ಪ್ರತಿಭೆಗೆ ಸಲ್ಯೂಟ್ ಹೊಡೆದಿದ್ದರು. ಆದರೀಗ ವೈಭವ್ ಅವರ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಈತ ವಯಸ್ಸಿನ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
ಅಂಡರ್ 19 ವಿಶ್ವಕಪ್ನಲ್ಲಿ ವೈಭವ್ ತನ್ನ ಆಟದಿಂದ ಎಷ್ಟು ಪ್ರಸಿದ್ಧರಾಗಿದ್ದರೋ ಅವರ ಬಿಗ್ ಹಿಟ್ ಸಾಮರ್ಥ್ಯದಿಂದಲೂ ಸುದ್ದಿಯಾಗಿದ್ದರು. ವಾಸ್ತವವಾಗಿ ವೈಭವ್ ಸೂರ್ಯವಂಶಿ ಅಂಡರ್-19 ಏಷ್ಯಾಕಪ್‌ನಲ್ಲಿ 12 ಭರ್ಜರಿ ಸಿಕ್ಸರ್‌ಗಳೊಂದಿಗೆ ಒಟ್ಟು 176 ರನ್ ಕಲೆಹಾಕಿದ್ದರು. ಇದರಲ್ಲಿ 2 ಅರ್ಧಶತಕಗಳು ಸೇರಿದ್ದವು. ಈ ಎರಡು ಅರ್ಧಶತಕಗಳಲ್ಲಿ ಒಂದು ಅರ್ಧಶತಕ ಯುಎಇ ವಿರುದ್ಧ ಸಿಡಿದಿತ್ತು, ಈ ಇನ್ನಿಂಗ್ಸ್ನಲ್ಲಿ ಅವರು 6 ಭರ್ಜರಿ ಸಿಕ್ಸರ್‌ಗಳನ್ನು ಹೊಡೆದಿದ್ದರು. ಇದಲ್ಲದೆ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧವೂ 5 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದೀಗ ವೈಭವ್ ಅವರ ಸಿಕ್ಸ್ ಹಿಟ್ಟಿಂಗ್ ಸಾಮರ್ಥ್ಯದ ಬಗ್ಗೆ ಪಾಕಿಸ್ತಾನಿ ಕ್ರಿಕೆಟಿಗ ಜುನೈದ್ ಖಾನ್ ಅನುಮಾನ ವ್ಯಕ್ತಪಡಿಸಿದ್ದು, ಪ್ರಶ್ನೆಗಳನ್ನು ಎತ್ತಿದ್ದಾರೆ.
Vaibhav Sooryavanshi is making the Lankans tremble 💪
The 13-year-old scores 3️⃣1️⃣ runs in the 2️⃣nd over against 🇱🇰 in the #ACCMensU19AsiaCup Semi-Final 🔥
Watch #SLvIND, LIVE on #SonyLIV 📲 pic.twitter.com/ppIdd1BXA8
— Sony LIV (@SonyLIV) December 6, 2024
ಇಡೀ ಪಂದ್ಯಾವಳಿಯಲ್ಲಿ ವೈಭವ್ ಬಾರಿಸಿದ 12 ಸಿಕ್ಸರ್ಗಳಲ್ಲಿ ಭಾಗಶಃ ಸಿಕ್ಸರ್ಗಳು 90 ಮೀಟರ್ಗೂ ಅಧಿಕ ದೂರ ಹೋಗಿ ಬಿದ್ದಿದ್ದವು. ಹೀಗಾಗಿ ವೈಭವ್ ಅವರ ಈ ಪವರ್ ಹಿಟ್ಟಿಂಗ್ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪಾಕಿಸ್ತಾನದ ಕ್ರಿಕೆಟಿಗ ಜುನೈದ್ ಖಾನ್ ಅವರು 13 ವರ್ಷದ ಹುಡುಗ ಇಷ್ಟು ಉದ್ದದ ಸಿಕ್ಸರ್‌ಗಳನ್ನು ಬಾರಿಸಲು ಸಾಧ್ಯವೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಯ ಜೊತೆಗೆ ಅಂಡರ್-19 ಏಷ್ಯಾಕಪ್‌ನಲ್ಲಿ ಅವರು ಬಾರಿಸಿದ ಸಿಕ್ಸರ್‌ನ ವೀಡಿಯೊವನ್ನು ಸಹ ಪೋಸ್ಟ್ ಮಾಡಿದ್ದಾರೆ.
ಜುನೈದ್ ಖಾನ್ ಎತ್ತಿರುವ ಪ್ರಶ್ನೆಯಿಂದ ವೈಭವ್ ಸೂರ್ಯವಂಶಿಯ ವಯಸ್ಸಿನ ಬಗ್ಗೆ ಅವರಿಗೆ ಆಕ್ಷೇಪವಿದೆ ಎಂಬುದನ್ನು ನಾವು ಅರಿಯಬಹುದಾಗಿದೆ. ಅಂದಹಾಗೆ, ವೈಭವ್ ಅವರ ವಯಸ್ಸಿನ ಬಗ್ಗೆ ಈ ಹಿಂದೆಯೂ ಪ್ರಶ್ನೆಗಳನ್ನು ಎತ್ತಲಾಗಿತ್ತು. ಆದರೆ, ಟಿವಿ9 ಹಿಂದಿಯೊಂದಿಗೆ ಮಾತನಾಡಿದ ಅವರ ಕೋಚ್ ಮನೀಶ್ ಓಜಾ, ಬಿಸಿಸಿಐ ಮೂಳೆ ಪರೀಕ್ಷೆಯ ಮೂಲಕ ವೈಭವ್ ಅವರ ವಯಸ್ಸನ್ನು ಪರಿಶೀಲಿಸಿದೆ. ಹಾಗಾಗಿ ವೈಭವ್ ಅವರ ವಯಸ್ಸಿನ ಬಗ್ಗೆ ಯಾವುದೇ ಅನುಮಾನವಿಲ್ಲ. ವೈಭವ್ ಎತ್ತರದಲ್ಲಿ ದೊಡ್ಡದಾಗಿ ಕಾಣಿಸಬಹುದು ಆದರೆ ಅವರಿಗೆ ಇನ್ನೂ ಮೀಸೆ ಕೂಡ ಚಿಗುರಿಲ್ಲ ಎಂದು ಕೋಚ್ ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:27 pm, Tue, 10 December 24