Venkatesh Iyer: MBA ಪದವೀಧರ, CA ಪಾಸ್: ಕೊನೆಗೂ ಹಠ ಸಾಧಿಸಿದ ವೆಂಕಟೇಶ್ ಅಯ್ಯರ್

| Updated By: ಝಾಹಿರ್ ಯೂಸುಫ್

Updated on: Nov 10, 2021 | 5:24 PM

Team India: ಅಯ್ಯರ್ ಅವರ ಆಲ್​ರೌಂಡರ್ ಪ್ರದರ್ಶನ ಗಮನಿಸಿದ ಟೀಮ್ ಇಂಡಿಯಾ ಆಯ್ಕೆ ಸಮಿತಿ ಟಿ20 ವಿಶ್ವಕಪ್​ಗಾಗಿ ನೆಟ್ ಬೌಲರ್​ ಆಗಿ ಆಯ್ಕೆ ಮಾಡಿಕೊಂಡರು. ಇತ್ತ ಟೀಮ್ ಇಂಡಿಯಾ ಟಿ20 ವಿಶ್ವಕಪ್​ನಲ್ಲಿ ವೈಫಲ್ಯ ಹೊಂದುತ್ತಿದ್ದಂತೆ, ವೆಂಕಟೇಶ್ ಅಯ್ಯರ್​ನಂತಹ ಆಲ್​ರೌಂಡರ್​ಗೆ ತಂಡದಲ್ಲಿ ಸ್ಥಾನ ನೀಡಬೇಕೆಂಬ ಕೂಗುಗಳು ಕೇಳಿ ಬಂದವು.

Venkatesh Iyer: MBA ಪದವೀಧರ, CA ಪಾಸ್: ಕೊನೆಗೂ ಹಠ ಸಾಧಿಸಿದ ವೆಂಕಟೇಶ್ ಅಯ್ಯರ್
Venkatesh Iyer
Follow us on

ನ್ಯೂಜಿಲೆಂಡ್ ವಿರುದ್ದದ ಸರಣಿಗಾಗಿ ಆಯ್ಕೆ ಮಾಡಲಾದ ಟೀಮ್ ಇಂಡಿಯಾದಲ್ಲಿ (Team India) ಯುವ ಆಲ್​ರೌಂಡರ್ ವೆಂಕಟೇಶ್ ಅಯ್ಯರ್ (Venkatesh Iyer) ಸ್ಥಾನ ಪಡೆದಿದ್ದಾರೆ. ಈ ಬಾರಿಯ ಐಪಿಎಲ್​ನ (IPL) ಮೂಲಕ ಬೆಳಕಿ ಬಂದ ಯುವ ಪ್ರತಿಭೆ ಇದೀಗ ಭಾರತ ತಂಡವನ್ನು (Indian Team( ಪ್ರತಿನಿಧಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ವೆಂಕಟೇಶ್ ಅಯ್ಯರ್ ಅವರ ಕ್ರಿಕೆಟ್ ಜರ್ನಿ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ ಎಂಬುದಕ್ಕೆ ಅವರ ವಿದ್ಯಾಭ್ಯಾಸವೇ ಸಾಕ್ಷಿ. ಏಕೆಂದರೆ ಸಾಮಾನ್ಯವಾಗಿ ಕ್ರಿಕೆಟಿಗನಾಗಬೇಕಿದ್ದರೆ ಏನು ಮಾಡಬೇಕು ಎಂದು ಕೇಳಿದ್ರೆ, ಚೆನ್ನಾಗಿ ಕ್ರಿಕೆಟ್ ಅಭ್ಯಾಸ ಮಾಡಬೇಕು ಎಂಬ ಉತ್ತರ ಸಿಗುತ್ತೆ. ಆದರೆ ಅಯ್ಯರ್ ವಿಷಯದಲ್ಲಿ ಕ್ರಿಕೆಟ್​ ಜೊತೆ ಓದು ಕೂಡ ಅಷ್ಟೇ ಮುಖ್ಯವಾಗಿತ್ತು.

ಬಾಲ್ಯದಲ್ಲೇ ಅಯ್ಯರ್ ಕ್ರಿಕೆಟ್ ಹಿಂದೆ ಬಿದ್ದಿದ್ದರೆ, ಮನೆಯವರು ಉತ್ತಮ ವಿದ್ಯಾಭ್ಯಾಸದತ್ತ ಗಮನ ಕೊಡುವಂತೆ ತಿಳಿಸಿದ್ದರು. ಹೀಗಾಗಿ ಎರಡು ಧೋಣಿಯಲ್ಲಿ ಪಯಣಿಸುವ ಸವಾಲು ಅಯ್ಯರ್ ಮುಂದಿತ್ತು. ಆದರೆ ಯಾವುದಾದರೂ ಪದವಿ ಪಡಯಲೇಬೇಕೆಂದು ಮನೆಯಲ್ಲಿ ಸೂಚಿಸಲಾಗಿತ್ತು. ಆ ಬಳಿಕ ನಿನ್ನ ದಾರಿಯನ್ನು ಆಯ್ಕೆ ಮಾಡಲು ಸ್ವಾತಂತ್ರ್ಯ ನೀಡುವುದಾಗಿ ತಿಳಿಸಿದ್ದರು.

ಅದರಂತೆ ವೆಂಕಟೇಶ್ ಅಯ್ಯರ್ ಕ್ರಿಕೆಟ್​ ಜೊತೆ ಓದಿನತ್ತ ಕೂಡ ಗಮನ ನೀಡಿದರು. ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಸಾಗಿದರು. ಅಷ್ಟೇ ಅಲ್ಲದೆ MBA ಪದವಿಯನ್ನು ಪಡೆದರು. ಇದರೊಂದಿಗೆ ಅಯ್ಯರ್ ಕ್ರಿಕೆಟ್ ಕೆರಿಯರ್ ರೂಟ್ ಕ್ಲಿಯರ್ ಆಗಿತ್ತು. ಆದರೆ ಎಂಬಿಎ ಜೊತೆ ಫಿನಾನ್ಸ್​ನಲ್ಲಿ ಚಾರ್ಟೆಟ್ ಅಕೌಂಟ್ ಪಾಸ್ ಮಾಡುವಂತೆ ಕೇಳಲಾಯಿತು. ಅದರಲ್ಲೂ ಕೂಡ ಉತ್ತೀರ್ಣರಾದ ಅಯ್ಯರ್ ಆ ಬಳಿಕ ಹಿಂತಿರುಗಿ ನೋಡಿಲ್ಲ ಎನ್ನಬಹುದು.

ಡಿಗ್ರಿ, ಸಿಎ ಸರ್ಟಿಫಿಕೇಟ್​ಗಳನ್ನು ಹೊಂದಿದ್ದ ಅಯ್ಯರ್​ಗೆ ಬಹುರಾಷ್ಟ್ರೀಯ ಕಂಪನಿ ಡೆಲಾಯ್ಟ್‌ನಿಂದ ಉದ್ಯೋಗದ ಆಫರ್ ನೀಡಲಾಯಿತು. ಆದರೆ ಅಯ್ಯರ್ ಓದಿದ್ದು ಕ್ರಿಕೆಟ್ ಆಡಲು ಮಾತ್ರ ಎಂಬುದು ಆತ ಬಿಗ್ ಆಫರ್​ ಅನ್ನು ರಿಜೆಕ್ಟ್ ಮಾಡಿದಾಗ ಗೊತ್ತಾಯಿತು. ಅದರಂತೆ ಬಾಲ್ಯದ ಕನಸನ್ನು ಈಡೇರಿಸಲು ಮಧ್ಯಪ್ರದೇಶದ ಪರ ದೇಶೀಯ ಕ್ರಿಕೆಟ್​ನಲ್ಲಿ ಅಯ್ಯರ್ ತೊಡಗಿಸಿಕೊಂಡರು. ಸತತ ಪರಿಶ್ರಮದ ಫಲವಾಗಿ ಕೆಕೆಆರ್​ ತಂಡದಲ್ಲಿ ಆಲ್​ರೌಂಡರ್​ ಆಗಿ ಸ್ಥಾನ ಪಡೆದರು.

ಆದರೆ ಐಪಿಎಲ್ 2021ರ ಮೊದಲಾರ್ಧದಲ್ಲಿ ವೆಂಕಟೇಶ್ ಅಯ್ಯರ್ ಎಂಬ ಆಟಗಾರ ಕೆಕೆಆರ್ ತಂಡದಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಕೆಕೆಆರ್ ಆರಂಭಿಕನಾಗಿ ನಿತೀಶ್ ರಾಣಾ ಸತತ ವೈಫಲ್ಯ ಹೊಂದಿದ್ದ ಕಾರಣ ದ್ವಿತಿಯಾರ್ಧದಲ್ಲಿ ಅಯ್ಯರ್ ಅವರನ್ನು ಓಪನರ್​ ಆಗಿ ಕಣಕ್ಕಿಳಿಸಿದ್ದರು. ಸಿಕ್ಕ ಅವಕಾಶವನ್ನು ಬಳಸಿಕೊಂಡ ವೆಂಕಟೇಶ್ ಅಯ್ಯರ್ 370 ರನ್​ ಬಾರಿಸಿ ಅಬ್ಬರಿಸಿದರು. ಬೌಲಿಂಗ್ ಮತ್ತು ಬ್ಯಾಟಿಂಗ್​ನಲ್ಲಿ ತನ್ನ ಪ್ರತಿಭೆಯನ್ನು ಧಾರೆಯೆದರು. ರಾತ್ರೋರಾತ್ರಿ ಮನೆಮಾತಾದರು.

ಅತ್ತ ಅಯ್ಯರ್ ಅವರ ಆಲ್​ರೌಂಡರ್ ಪ್ರದರ್ಶನ ಗಮನಿಸಿದ ಟೀಮ್ ಇಂಡಿಯಾ ಆಯ್ಕೆ ಸಮಿತಿ ಟಿ20 ವಿಶ್ವಕಪ್​ಗಾಗಿ ನೆಟ್ ಬೌಲರ್​ ಆಗಿ ಆಯ್ಕೆ ಮಾಡಿಕೊಂಡರು. ಇತ್ತ ಟೀಮ್ ಇಂಡಿಯಾ ಟಿ20 ವಿಶ್ವಕಪ್​ನಲ್ಲಿ ವೈಫಲ್ಯ ಹೊಂದುತ್ತಿದ್ದಂತೆ, ವೆಂಕಟೇಶ್ ಅಯ್ಯರ್​ನಂತಹ ಆಲ್​ರೌಂಡರ್​ಗೆ ತಂಡದಲ್ಲಿ ಸ್ಥಾನ ನೀಡಬೇಕೆಂಬ ಕೂಗುಗಳು ಕೇಳಿ ಬಂದವು. ಇನ್ನು ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯ ಕೂಡ ಸಂಪೂರ್ಣ ವಿಫಲರಾಗಿದ್ದರು. ಹೀಗಾಗಿ ಟೀಮ್ ಇಂಡಿಯಾಗೆ ಮತ್ತೋರ್ವ ಯುವ ಆಲ್​ರೌಂಡರ್​ನ ಅವಶ್ಯಕತೆಯಿತ್ತು.

ನ್ಯೂಜಿಲೆಂಡ್ ಸರಣಿಗಾಗಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಆಲ್​ರೌಂಡರ್​​ ಹಾರ್ದಿಕ್ ಪಾಂಡ್ಯರನ್ನು ತಂಡದಿಂದ ಕೈಬಿಡಲು ನಿರ್ಧರಿಸಲಾಯಿತು. ಅವರ ಜಾಗಕ್ಕೆ ಸೂಕ್ತ ಆಯ್ಕೆಯಾಗಿ ಅದಾಗಲೇ ವೆಂಕಟೇಶ್ ಅಯ್ಯರ್ ಹೆಸರು ಕಾಣಿಸಿಕೊಂಡಿತು. ಹೀಗಾಗಿ ಟೀಮ್ ಇಂಡಿಯಾದ ಖಾಯಂ ಸದಸ್ಯರಾಗಿದ್ದ ಪಾಂಡ್ಯರನ್ನು ಕೈಬಿಟ್ಟು 26 ವರ್ಷದ ವೆಂಕಟೇಶ್ ಅಯ್ಯರ್ ಅವರನ್ನು ಆಯ್ಕೆ ಮಾಡಲಾಯಿತು. ಇದರೊಂದಿಗೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಬೇಕೆಂಬ ಬಾಲ್ಯದ ಕನಸನ್ನು ವೆಂಕಟೇಶ್ ಅಯ್ಯರ್ ಈಡೇರಿಸಿಕೊಂಡರು. ಅದು ಕೂಡ ಎಂಬಿಎ ಪದವಿ ಹಾಗೂ ಸಿಎ ಪಾಸ್ ಆಗುವ ಮೂಲಕ ಎಂಬುದು ವಿಶೇಷ.

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ

ಇದನ್ನೂ ಓದಿ: India T20 squad: ಟೀಮ್ ಇಂಡಿಯಾಗೆ ಹೊಸ ನಾಯಕ: ಯುವ ಪಡೆಯನ್ನು ಪ್ರಕಟಿಸಿದ ಬಿಸಿಸಿಐ

(Venkatesh Iyer Chose Cricket As Career Option Even When He Had A Job Offer From Deloitte)