ಜೀವರಕ್ಷಕ ವ್ಯವಸ್ಥೆಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರ ಕ್ರಿಸ್ ಕೈರ್ನ್ಸ್
ಭ್ರಷ್ಟಾಚಾರದ ಆರೋಪಗಳು ಆರ್ಥಿಕವಾಗಿಯೂ ಕೈರ್ನ್ಸ್ ಅವರನ್ನು ನುಜ್ಜುಗುಜ್ಜಾಗಿಸಿತ್ತು. ಒಂದು ಹಂತದಲ್ಲಿ ಅವರು ಆಕ್ಲೆಂಡ್ ಕೌನ್ಸಿಲ್ನಲ್ಲಿ ಟ್ರಕ್ ಚಾಲಕರಾಗಿ ಮತ್ತು ಬಸ್ ತಂಗುದಾಣಗಳ ಸ್ವಚ್ಛತೆ ಮಾಡುವ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.
ಸಿಡ್ನಿ: ನ್ಯೂಜೆಲೆಂಡ್ನ ಮಾಜಿ ಆಲ್ರೌಂಡರ್ ಕ್ರಿಸ್ ಕೈರ್ನ್ಸ್ ಆಸ್ಟ್ರೇಲಿಯಾದ ಕೆನ್ಬೆರಾ ಆಸ್ಪತ್ರೆಯಲ್ಲಿ ಜೀವರಕ್ಷಕ ವ್ಯವಸ್ಥೆಯಲ್ಲಿ ದಿನದೂಡುತ್ತಿದ್ದಾರೆ. ಅನಾರೋಗ್ಯದಿಂದಾಗಿ ಅವರು ಇದ್ದಕ್ಕಿದ್ದಂತೆ ಕುಸಿದುಬಿದ್ದ ನಂತರ ಆಸ್ಪತ್ರೆಗೆ ದಾಖಲಿಸಲಾಯಿತು. ಅವರನ್ನು ಶೀಘ್ರ ಸಿಡ್ನಿಯ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಗುವುದು ಎಂದು ನ್ಯೂಜಿಲೆಂಡ್ ಮಾಧ್ಯಮಗಳು ಹೇಳಿವೆ. ಕೈರ್ನ್ಸ್ ಅವರ ರಕ್ತನಾಳದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮುಖ್ಯಅಪಧಮನಿಯಲ್ಲಿ ರಕ್ತಸ್ರಾವವಾಗುತ್ತಿದೆ.
ಹಲವು ಶಸ್ತ್ರಚಿಕಿತ್ಸೆಗಳ ನಂತರವೂ ಕೈರ್ನ್ಸ್ ಅವರ ದೇಹವು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ತಮ್ಮ ಕಾಲಮಾನದ ಅತ್ಯುತ್ತಮ ಕ್ರಿಕೆಟ್ ಆಟಗಾರ ಎನಿಸಿಕೊಂಡಿದ್ದ ಕೈರ್ನ್ಸ್ 62 ಟೆಸ್ಟ್, ಎರಡು ಟಿ20 ಪಂದ್ಯಗಳನ್ನು ಆಡಿದ್ದಾರೆ. 1989ರಿಂದ 2006ರ ಅವಧಿಯಲ್ಲಿ ಅವರು ಕ್ರಿಕೆಟ್ ಆಡುತ್ತಿದ್ದರು. ಕೈರ್ನ್ಸ್ ಅವರ ತಂದೆ ಲ್ಯಾನ್ಸ್ ಕೈರ್ನ್ಸ್ ಸಹ ನ್ಯೂಜಿಲೆಂಡ್ ತಂಡದ ಪರವಾಗಿ ಕ್ರಿಕೆಟ್ ಆಡುತ್ತಿದ್ದರು.
51 ವರ್ಷದ ಕೈರ್ನ್ಸ್ ಮೇಲೆ ಮ್ಯಾಚ್ ಫಿಕ್ಸಿಂಗ್ ಹಗರಣದ ಆರೋಪಗಳು ಕೇಳಿಬಂದಿದ್ದವು. 2008ರಲ್ಲಿ ಇಂಡಿಯನ್ ಕ್ರಿಕೆಟ್ ಲೀಗ್ ಸಹಯೋಗದಲ್ಲಿ ಆಡುತ್ತಿದ್ದಾಗ ಹಲವು ಆರೋಪಗಳನ್ನು ಎದುರಿಸಿದ್ದರು. ತಾವು ನಿರಪರಾಧಿ ಎಂದು ಸಾಬೀತುಪಡಿಸಲು ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು. ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ವಿರುದ್ಧ 2012ರಲ್ಲಿ ಲಂಡನ್ ನ್ಯಾಯಾಲಯದಲ್ಲಿ ಮಾನಹಾನಿ ಮೊಕದ್ದಮೆಯನ್ನು ಕೈರ್ನ್ಸ್ ಜಯಿಸಿದ್ದರು.
ನಂತರದ ದಿನಗಳಲ್ಲಿ ಸಹ ಕ್ರಿಕೆಟ್ ಆಟಗಾರರಾದ ಲ್ಯೂ ವಿನ್ಸೆಂಟ್ ಮತ್ತು ಬ್ರೆನ್ಡನ್ ಮೆಕ್ಲುಹನ್ ಅವರಿಂದಲೂ ಕೈರ್ನ್ಸ್ ಮೋಸದ ಆಟದ ಆರೋಪ ಎದುರಿಸಬೇಕಾಯಿತು. 2015ರ ಲಂಡನ್ ನ್ಯಾಯಾಲಯದ ವಿಚಾರಣೆಯಲ್ಲಿ ಸುಳ್ಳು ಸಾಕ್ಷ್ಯ ಮತ್ತು ನ್ಯಾಯಾಂಗದ ಹಾದಿತಪ್ಪಿಸಿದ ಆರೋಪ ದೃಢಪಟ್ಟಿತ್ತು.
ಭ್ರಷ್ಟಾಚಾರದ ಆರೋಪಗಳು ಆರ್ಥಿಕವಾಗಿಯೂ ಕೈರ್ನ್ಸ್ ಅವರನ್ನು ನುಜ್ಜುಗುಜ್ಜಾಗಿಸಿತ್ತು. ಒಂದು ಹಂತದಲ್ಲಿ ಅವರು ಆಕ್ಲೆಂಡ್ ಕೌನ್ಸಿಲ್ನಲ್ಲಿ ಟ್ರಕ್ ಚಾಲಕರಾಗಿ ಮತ್ತು ಬಸ್ ತಂಗುದಾಣಗಳ ಸ್ವಚ್ಛತೆ ಮಾಡುವ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕಾನೂನು ಹೋರಾಟಗಳನ್ನು ನಿರ್ವಹಿಸಲು ಅಪಾರ ಪ್ರಮಾಣ ಹಣ ವ್ಯಯಿಸಬೇಕಾಯಿತು.
(Veteran New Zealand Cricketer Chris Cairns on life support in Australia)
ಇದನ್ನೂ ಓದಿ: T20 World Cup: ಟಿ-20 ವಿಶ್ವಕಪ್ಗೆ ನ್ಯೂಜಿಲೆಂಡ್ ತಂಡ ಪ್ರಕಟ
ಇದನ್ನೂ ಓದಿ: Olympics: ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಸೇರ್ಪಡೆ ಸಾಧ್ಯತೆ: ನಾವು ರೆಡಿ ಎಂದ ಟೀಮ್ ಇಂಡಿಯಾ