VIDEO: ವಾಟ್ ಎ ಶಾಟ್…ಭರ್ಜರಿ ಸಿಕ್ಸ್ ಸಿಡಿಸಿ ಧೋನಿಯನ್ನು ನೆನಪಿಸಿದ ಅಫ್ಘಾನ್ ಆಟಗಾರ
Pakistan Super League: ಪಿಎಸ್ಎಲ್ ಪಂದ್ಯದಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಮತ್ತು ಪೇಶಾವರ್ ಝಲ್ಮಿ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಸೋತ ಪೇಶಾವರ್ ಝಲ್ಮಿ ತಂಡ ಮೊದಲು ಬ್ಯಾಟ್ ಮಾಡಿ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು.
ಮಹೇಂದ್ರ ಸಿಂಗ್ ಧೋನಿ (MS Dhoni) ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದಾರೆ. ಇದಾಗ್ಯೂ ಅವರು ತಮ್ಮ ವೃತ್ತಿಜೀವನದಲ್ಲಿ ಕ್ರಿಯೇಟ್ ಮಾಡಿದ್ದ ಹವಾ ಇನ್ನೂ ಕೂಡ ಕಡಿಮೆಯಾಗಿಲ್ಲ ಎಂಬುದಕ್ಕೆ ಯುವ ಆಟಗಾರರ ಹೊಡೆತಗಳೇ ಸಾಕ್ಷಿ. ಹೌದು, ಅಂದಿಗೂ ಇಂದಿಗೂ ಕ್ರಿಕೆಟ್ ಮೈದಾನದಲ್ಲಿ ಹೆಲಿಕಾಪ್ಟರ್ ಶಾಟ್ಗಳಿಗೆ ವಿಶೇಷ ಸ್ಥಾನವಿದೆ. ಈ ಹೊಡೆತವನ್ನು ಕರಗತ ಮಾಡಿಕೊಂಡಿರುವುದು ಕೆಲವೇ ಕೆಲವು ಆಟಗಾರರು ಮಾತ್ರ. ಅದರಲ್ಲಿ ಭಾರತದ ಹಾರ್ದಿಕ್ ಪಾಂಡ್ಯ ಹಾಗೂ ಅಫ್ಘಾನಿಸ್ತಾನದ ರಶೀದ್ ಖಾನ್ ಮುಂಚೂಣಿಯಲ್ಲಿದ್ದಾರೆ. ಆದರೆ ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ರಹಮಾನುಲ್ಲಾ ಗುರ್ಬಾಜ್. ಅಫ್ಘಾನಿಸ್ತಾನದ ಆಟಗಾರ ಗುರ್ಬಾಜ್ ಇದೀಗ ಪಾಕಿಸ್ತಾನ್ ಸೂಪರ್ ಲೀಗ್ (PSL 2022) ಆಡುತ್ತಿದ್ದಾರೆ. ಈ ವೇಳೆ ಅವರು ಸಿಡಿಸಿದ ಹೆಲಿಕಾಪ್ಟರ್ ಶಾಟ್ ಸಿಕ್ಸ್ ಧೋನಿಯ ಹೊಡೆತವನ್ನು ಮತ್ತೆ ನೆನಪಿಸಿದೆ.
ಪಿಎಸ್ಎಲ್ ಪಂದ್ಯದಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಮತ್ತು ಪೇಶಾವರ್ ಝಲ್ಮಿ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಸೋತ ಪೇಶಾವರ್ ಝಲ್ಮಿ ತಂಡ ಮೊದಲು ಬ್ಯಾಟ್ ಮಾಡಿ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನತ್ತಿದ ಇಸ್ಲಾಮಾಬಾದ್ ತಂಡಕ್ಕೆ ಪಾಲ್ ಸ್ಟಿರ್ಲಿಂಗ್ ಮತ್ತು ಅಲೆಕ್ಸ್ ಹೇಲ್ಸ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್‌ಗೆ 112 ರನ್ ಪೇರಿಸಿದ್ದರು. ಆ ಬಳಿಕ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಹಮಾನುಲ್ಲಾ ಗುರ್ಬಾಜ್ ಸ್ಪೋಟಕ ಬ್ಯಾಟಿಂಗ್ ಮಾಡಿ ತಂಡಕ್ಕೆ 9 ವಿಕೆಟ್‌ಗಳ ಜಯ ತಂದುಕೊಟ್ಟರು.
ಗುರ್ಬಾಜ್ 16 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 1 ಬೌಂಡರಿ ನೆರವಿನಿಂದ 27 ರನ್ ಗಳಿಸಿ ಅಜೇಯರಾಗಿ ಉಳಿದರು. ಇದೇ ವೇಳೆ ಹೆಲಿಕಾಪ್ಟರ್ ಶಾಟ್ ಮೂಲಕ ಸಿಕ್ಸ್ ಸಿಡಿಸಿದ್ದು ವಿಶೇಷ. ಇದೀಗ ಗುರ್ಬಾಜ್ ಅವರ ಹೆಲಿಕಾಪ್ಟರ್ ಶಾಟ್‌ನ ವಿಡಿಯೋ ವೈರಲ್ ಆಗಿದೆ. ಈ ಶಾಟ್‌ನ ಬೆನ್ನಲ್ಲೇ ಈ ಅದ್ಭುತ ಹೊಡೆತದ ಹರಿಕಾರ ಮಹೇಂದ್ರ ಸಿಂಗ್ ಹೆಸರು ಕೂಡ ರಾರಾಜಿಸಲಾರಂಭಿಸಿದೆ.
whats up with afghanistan and the helicopter pic.twitter.com/kdyLmXAd1P
— Jazib (@JazibChaudry) January 30, 2022
ಇದನ್ನೂ ಓದಿ: IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!
ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ
ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್
Published On - 3:58 pm, Mon, 31 January 22