ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ತಮ್ಮ ಸರಳ ವ್ಯಕ್ತಿತ್ವದಿಂದಲೇ ಇಡೀ ಕ್ರಿಕೆಟ್ ಲೋಕದ ಗಮನ ಸೆಳೆದವರು. ಅಲ್ಲದೆ ತಮ್ಮ ನಾಯಕತ್ವದಲ್ಲಿ ಟೀಂ ಇಂಡಿಯಾವನ್ನು (Team India) ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದ ಕ್ಯಾಪ್ಟನ್ ಕೂಲ್ಗೆ ಕ್ರಿಕೆಟ್ ಲೋಕದಲ್ಲಿ ಬೇರೆಯದ್ದೇ ಸ್ಥಾನಮಾನಗಳಿವೆ. ಇತ್ತೀಚೆಗಷ್ಟೇ ತಮ್ಮ 42ನೇ ಹುಟ್ಟುಹಬ್ಬವನ್ನು ತಮ್ಮ ಸಾಕುಪ್ರಾಣಿಗಳೊಂದಿಗೆ ಆಚರಿಸಿಕೊಂಡಿದ್ದ ಧೋನಿಯ ಸರಳತೆಗೆ ಇಡೀ ಕ್ರೀಡಾ ಲೋಕವೇ ಸಲಾಂ ಹೊಡೆದಿತ್ತು. ಆದರೀಗ ಸೋಶಿಯಲ್ ಮೀಡಿಯಾದಲ್ಲಿ ಧೋನಿಯ ವಿಡಿಯೋವೊಂದು ವೈರಲ್ ಆಗುತ್ತಿದ್ದು, ತಮ್ಮ ನೆಚ್ಚಿನ ಆಟಗಾರ ಮಾಡಿರುವ ಕೆಲಸವನ್ನು ಅಭಿಮಾನಿಗಳಿಂದ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ವಾಸ್ತವವಾಗಿ ಆಗಿರುವುದೆನೆಂದರೆ, ಎಂಎಸ್ ಧೋನಿ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅದರಲ್ಲಿ ಧೋನಿ ಹುಕ್ಕಾ ಸೇದುತ್ತಿರುವುದನ್ನು ಕಾಣಬಹುದಾಗಿದೆ. ವೀಡಿಯೊದಲ್ಲಿ ಧೋನಿ ತನ್ನ ಸೊಗಸಾದ ಉದ್ದನೆಯ ಕೂದಲಿನೊಂದಿಗೆ ಫಾರ್ಮಲ್ ಸೂಟ್ ಧರಿಸಿರುವುದನ್ನು ನಾವು ಕಾಣಬಹುದಾಗಿದೆ. ಅವರ ಜೊತೆಯಲ್ಲಿ ಇತರರು ಇರುವುದನ್ನು ಕಾಣಬಹುದಾಗಿದೆ. ಗೆಳೆಯರ ಗುಂಪಿನಲ್ಲಿರುವ ಧೋನಿ, ಹುಕ್ಕಾ ಸೇದಿ ಹೊಗೆಬಿಡುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.
We always heard stories of MS Dhoni the hukka addict, now we can see it also!!
Very bad impact on youth of the country, he should avoid such things when he knows how influential he is.
Atleast learn from Virat Kohli!! pic.twitter.com/ZIZulP0jgO
— Aman Choudhary (@choudhary_AmanM) January 7, 2024
ಎಂಎಸ್ ಧೋನಿ ಯುವ ಆಟಗಾರರೊಂದಿಗೆ ಬೆರೆಯಲು ಹುಕ್ಕಾ ಸೆಷನ್‌ಗಳನ್ನು ಮಾಡುತ್ತಿದ್ದರು ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಜಾರ್ಜ್ ಬೈಲಿ ಈ ಹಿಂದೆಯೇ ಹೇಳಿಕೊಂಡಿದ್ದರು. ಬೈಲಿ ಅವರು 2009 ಮತ್ತು 2012 ರ ನಡುವೆ ಸಿಎಸ್ಕೆ ತಂಡದ ಭಾಗವಾಗಿದ್ದರು. ಅಲ್ಲದೆ 2016 ರ ಐಪಿಎಲ್ನಲ್ಲಿ ಧೋನಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದಲ್ಲೂ ಬೈಲಿ ಆಡಿದ್ದರು.
We always heard stories of MS Dhoni the hukka addict, now we can see it also!!
Very bad impact on youth of the country, he should avoid such things when he knows how influential he is.
Atleast learn from Virat Kohli!!pic.twitter.com/1NOzubyjRl
— Rajiv (@Rajiv1841) January 6, 2024
ಆ ವೇಳೆ ಸ್ವತಃ ಬೈಲಿ ಅವರೇ ಧೋನಿ ಹುಕ್ಕಾ ಸೇದುವ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ಧೋನಿ ಹುಕ್ಕಾ ಸೇದಿರುವ ಹೊಸ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ತಮ್ಮ ನೆಚ್ಚಿನ ಆಟಗಾರರನ್ನು ಈ ರೀತಿಯಾಗಿ ನೋಡಿರುವ ಅಭಿಮಾನಿಗಳು ಪರ- ವಿರೋಧದ ಅಭಿಪ್ರಾಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹೊರಹಾಕುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:02 pm, Sun, 7 January 24