VHT 2025: ಕರ್ನಾಟಕ- ಹರಿಯಾಣ ನಡುವೆ ಸೆಮಿಫೈನಲ್; ಪಂದ್ಯ ಯಾವಾಗ, ಎಷ್ಟು ಗಂಟೆಗೆ ಆರಂಭ?
Karnataka Vs Haryana Vijay Hazare Trophy 2024-25, Semi-final: ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್‌ನಲ್ಲಿ ಕರ್ನಾಟಕ ಮತ್ತು ಹರಿಯಾಣ ತಂಡಗಳು ಮುಖಾಮುಖಿಯಾಗಲಿವೆ. ಜನವರಿ 15, ಬುಧವಾರ, ವಡೋದರದ ಕೊಟಂಬಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ಮತ್ತು ಅಂಕಿತ್ ಕುಮಾರ್ ನೇತೃತ್ವದ ಹರಿಯಾಣ ತಂಡಗಳ ನಡುವಿನ ಈ ನಿರ್ಣಾಯಕ ಪಂದ್ಯವನ್ನು ಸ್ಪೋರ್ಟ್ಸ್ 18 ಮತ್ತು ಜಿಯೋ ಸಿನಿಮಾದಲ್ಲಿ ಲೈವ್ ವೀಕ್ಷಿಸಬಹುದು.
ದೇಶೀ ಟೂರ್ನಿ ವಿಜಯ್ ಹಜಾರೆ ಟ್ರೋಫಿ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು ಸೆಮಿಫೈನಲ್ ಸುತ್ತಿಗೆ ಒಟ್ಟು 4 ತಂಡಗಳು ಅರ್ಹತೆ ಪಡೆದುಕೊಂಡಿವೆ. ಅದರಲ್ಲಿ ಬುಧವಾರ ನಡೆಯಲ್ಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಹರಿಯಾಣ ತಂಡ ಎದುರಾಳಿಯಾಗಿದೆ. ವಡೋದರದ ಕೊಟಂಬಿ ಕ್ರೀಡಾಂಗಣದಲ್ಲಿ ನಡೆಯಲ್ಲಿರುವ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಫೈನಲ್ಗೆ ಅರ್ಹತೆಗಿಟ್ಟಿಸಿಕೊಂಡರೆ, ಇತ್ತ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಉಭಯ ತಂಡಗಳಿಗೂ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಇದಕ್ಕೂ ಮುನ್ನ ನಡೆದಿದ್ದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಬರೋಡಾ ತಂಡವನ್ನು ಐದು ರನ್ಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದರೆ, ಇತ್ತ ಹರಿಯಾಣ ತಂಡ ಗುಜರಾತ್ ತಂಡವನ್ನು ಮಣಿಸಿ ಸೆಮೀಸ್ಗೆ ಟಿಕೆಟ್ ಪಡೆದುಕೊಂಡಿತ್ತು. ಕರ್ನಾಟಕವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸಿದರೆ, ಹರಿಯಾಣ ತಂಡವನ್ನು ಅಂಕಿತ್ ಕುಮಾರ್ ಮುನ್ನಡೆಸುತ್ತಿದ್ದಾರೆ.
ಸೆಮಿಫೈನಲ್ ಪಂದ್ಯದ ಪೂರ್ಣ ವಿವರ ಇಲ್ಲಿದೆ
ಕರ್ನಾಟಕ ಮತ್ತು ಹರಿಯಾಣ ನಡುವಿನ ಮೊದಲ ಸೆಮಿಫೈನಲ್ ಯಾವಾಗ ನಡೆಯಲಿದೆ?
ಕರ್ನಾಟಕ ಮತ್ತು ಹರಿಯಾಣ ನಡುವಿನ ಮೊದಲ ಸೆಮಿಫೈನಲ್ ಪಂದ್ಯ ಬುಧವಾರ ಅಂದರೆ ಜನವರಿ 15 ರಂದು ನಡೆಯಲಿದೆ.
ಕರ್ನಾಟಕ ಮತ್ತು ಹರಿಯಾಣ ನಡುವಿನ ಮೊದಲ ಸೆಮಿಫೈನಲ್ ಎಲ್ಲಿ ನಡೆಯಲಿದೆ?
ಕರ್ನಾಟಕ ಮತ್ತು ಹರಿಯಾಣ ನಡುವಿನ ಸೆಮಿಫೈನಲ್ ಪಂದ್ಯ ವಡೋದರದ ಕೊಟಂಬಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕರ್ನಾಟಕ ಮತ್ತು ಹರಿಯಾಣ ನಡುವಿನ ಮೊದಲ ಸೆಮಿಫೈನಲ್ ಎಷ್ಟು ಗಂಟೆಗೆ ಆರಂಭವಾಗಲಿದೆ?
ಕರ್ನಾಟಕ ಮತ್ತು ಹರಿಯಾಣ ನಡುವಿನ ಮೊದಲ ಸೆಮಿಫೈನಲ್ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 1.30 ಕ್ಕೆ ಪ್ರಾರಂಭವಾಗಲಿದೆ. ಟಾಸ್ ಅರ್ಧ ಗಂಟೆ ಮುಂಚಿತವಾಗಿ ಅಂದರೆ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.
ಕರ್ನಾಟಕ ಮತ್ತು ಹರಿಯಾಣ ನಡುವಿನ ಸೆಮಿಫೈನಲ್ ಪಂದ್ಯವನ್ನು ನೀವು ಎಲ್ಲಿ ವೀಕ್ಷಿಸಬಹುದು?
ಕರ್ನಾಟಕ ಮತ್ತು ಹರಿಯಾಣ ನಡುವಿನ ಮೊದಲ ಸೆಮಿಫೈನಲ್ ಪಂದ್ಯವನ್ನು ಟಿವಿಯಲ್ಲಿ ಸ್ಪೋರ್ಟ್ಸ್ 18 ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು.
ಕರ್ನಾಟಕ ಮತ್ತು ಹರಿಯಾಣ ನಡುವಿನ ಮೊದಲ ಸೆಮಿಫೈನಲ್‌ನ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬೇಕು?
ಕರ್ನಾಟಕ ಮತ್ತು ಹರಿಯಾಣ ನಡುವಿನ ಮೊದಲ ಸೆಮಿಫೈನಲ್‌ನ ಲೈವ್ ಸ್ಟ್ರೀಮಿಂಗ್ ಅನ್ನು ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು.
ಉಭಯ ತಂಡಗಳು
ಕರ್ನಾಟಕ ತಂಡ: ನಿಕಿನ್ ಜೋಸ್, ಮಯಾಂಕ್ ಅಗರವಾಲ್(ನಾಯಕ), ಅನೀಶ್ ಕೆವಿ, ಸ್ಮರಣ್ ರವಿಚಂದ್ರನ್, ಕೃಷ್ಣನ್ ಶ್ರೀಜಿತ್(ವಿಕೆಟ್ ಕೀಪರ್), ಅಭಿನವ್ ಮನೋಹರ್, ಹಾರ್ದಿಕ್ ರಾಜ್, ಶ್ರೇಯಸ್ ಗೋಪಾಲ್, ಅಭಿಲಾಷ್ ಶೆಟ್ಟಿ, ವಿದ್ಯಾಧರ್ ಪಾಟೀಲ್, ವಾಸುಕಿ ಕೌಶಿಕ್, ಮನೋಜ್ ಭಾಂಡಗೆ, ಲುವ್ನಿತ್ ಸಿಸೋಡಿಯಾ, ಕಿಶನ್ ಬೇಡರೆ, ವಿಜಯ್‌ಕುಮಾರ್ ವೈಶಾಕ್, ಪ್ರವೀಣ್ ದುಬೆ.
ಹರಿಯಾಣ ತಂಡ: ಅರ್ಶ್ ರಂಗ, ಹಿಮಾಂಶು ರಾಣಾ, ಅಂಕಿತ್ ಕುಮಾರ್(ನಾಯಕ), ಪಾರ್ಥ್ ವಾಟ್ಸ್, ನಿಶಾಂತ್ ಸಿಂಧು, ರಾಹುಲ್ ತೆವಾಟಿಯಾ, ದಿನೇಶ್ ಬನಾ(ವಿಕೆಟ್ ಕೀಪರ್), ಸುಮಿತ್ ಕುಮಾರ್, ಅಂಶುಲ್ ಕಾಂಬೋಜ್, ಅಮಿತ್ ರಾಣಾ, ಅಮನ್ ಕುಮಾರ್, ಅಶೋಕ್ ಮೆನಾರಿಯಾ, ಹರ್ಷಲ್ ಪಟೇಲ್, ಜಯಂತ್ ಯಾದವ್, ಕಪಿಲ್ ಹೂಡಾ, ಯುವರಾಜ್ ಯೋಗೇಂದರ್ ಸಿಂಗ್, ಮಯಾಂಕ್ ಶಾಂಡಿಲ್ಯ, ವೇದಾಂತ್ ಭಾರದ್ವಾಜ್, ಧೀರು ಸಿಂಗ್, ಆದಿತ್ಯ ದೀಪಕ್ ಕುಮಾರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ