ಇಂಗ್ಲೆಂಡ್ನ ಹೊಡಿಬಡಿ ದಾಂಡಿಗ ಲಿಯಾಮ್ ಲಿವಿಂಗ್ಸ್ಟೋನ್ ಅವರ ಬ್ಯಾಟಿಂಗ್ ಅಬ್ಬರ ಹೇಗಿರುತ್ತೆ ಎಂಬುದನ್ನು ಐಪಿಎಲ್ ನೋಡಿದವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಏಕೆಂದರೆ ಲಾಂಗ್ ಶಾಟ್ಗಳಿಗೆ ಹೆಸರುವಾಸಿಯಾಗಿರುವ ಲಿವಿಂಗ್ಸ್ಟೋನ್ ಇದೀಗ ದಿ ಹಂಡ್ರೆಡ್ ಲೀಗ್ನಲ್ಲೂ ಸಿಕ್ಸ್ಗಳ ಸುರಿಮಳೆಗೈಯ್ಯುತ್ತಿದ್ದಾರೆ. ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಏಕಾಂಗಿಯಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದ ಲಿಯಾಮ್ ಇದೀಗ ಹಂಡ್ರೆಡ್ ಲೀಗ್ನಲ್ಲಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಗೆಲುವಿನಲ್ಲೂ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ಸೋಮವಾರ ಎಡ್ಜ್ಬಾಸ್ಟನ್ನಲ್ಲಿ ನಡೆದ ಟ್ರೆಂಟ್ ವಿರುದ್ಧದ ಪಂದ್ಯದಲ್ಲೂ ಲಿವಿಂಗ್ಸ್ಟೋನ್ ಅಬ್ಬರಿಸಿದ್ದರು. 32 ಎಸೆತಗಳನ್ನು ಎದುರಿಸಿದ ಬಲಗೈ ದಾಂಡಿಗ ಅಜೇಯ 51 ರನ್ ಬಾರಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು. ವಿಶೇಷ ಎಂದರೆ ಈ ವೇಳೆ ಲಿವಿಂಗ್ಸ್ಟೋನ್ 4 ಭರ್ಜರಿ ಸಿಕ್ಸ್ಗಳನ್ನು ಸಿಡಿಸಿದ್ದರು. ಅದಲ್ಲೊಂದು ಒಂದೇ ಕೈಯಲ್ಲಿನ ರಾಕೆಟ್ ಸಿಕ್ಸ್ ಆಗಿತ್ತು.
ಗ್ರೆಗೊರಿ ಎಸೆದ ಫುಲ್-ಟಾಸ್ ಚೆಂಡನ್ನು ಎದುರಿಸಲು ಸಾಕಷ್ಟು ಸಮಯವಿರಲಿಲ್ಲ. ದಿಢೀರಣೆ ತೂರಿದ ಬಂದ ಟಾಸ್ ಬಾಲ್ ಅನ್ನು ಒಂದೇ ಕೈಯಲ್ಲೇ ಲ್ಯಾಂಗ್ ಆನ್ನತ್ತ ಬಾರಿಸುವ ಮೂಲಕ ಲಿವಿಂಗ್ಸ್ಟೋನ್ ಭರ್ಜರಿ ಸಿಕ್ಸ್ ಸಿಡಿಸಿದರು. ಇದೀಗ ಈ ರಾಕೆಟ್ ಸಿಕ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
One-handed six for the win and for 50? ?
Go on then, @liaml4893! #TheHundred pic.twitter.com/YslaAYodYh
— The Hundred (@thehundred) August 15, 2022
ಇನ್ನು ಈ ಪಂದ್ಯದಲ್ಲಿ ಟ್ರೆಂಟ್ ರಾಕೆಟ್ಸ್ ತಂಡ ನೀಡಿದ 146 ರನ್ ಗಳ ಗುರಿಯನ್ನು ಬೆನ್ನತ್ತಿದ ಬರ್ಮಿಂಗ್ ಹ್ಯಾಮ್ ಫೀನಿಕ್ಸ್ ತಂಡಕ್ಕೆ ಲಿವಿಂಗ್ ಸ್ಟೋನ್ ಹಾಗೂ ನಾಯಕ ಮೊಯಿನ್ ಅಲಿ ಆಸರೆಯಾದರು. ಇಬ್ಬರು ಅರ್ಧಶತಕ ಬಾರಿಸುವ ಮೂಲಕ 14 ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆಲ್ಲಿಸಿಕೊಟ್ಟರು.