Virat Kohli: ಅರ್ಧಶತಕ ಸಿಡಿಸಿದ ತಕ್ಷಣ ವಿರಾಟ್ ಕೊಹ್ಲಿ ಕೋಪದಲ್ಲಿ ಏನು ಮಾಡಿದ್ರು ನೋಡಿ
RCB vs DC, IPL 2023: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 33 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದಾಗ ವಿರಾಟ್ ಕೊಹ್ಲಿ ಆಕ್ರಮಣಕಾರಿ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದರು. ಎಂದಿನಂತೆ ಕೊಹ್ಲಿಯ ಸಂಭ್ರಮ ಈ ಬಾರಿ ಇರಲಿಲ್ಲ.
ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ (RCB vs DC) ನಡುವಣ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಉತ್ತಮ ಆರಂಭ ಪಡೆದುಕೊಂಡ ಬಳಿಕ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡಿತು. ವಿರಾಟ್ ಕೊಹ್ಲಿ (Virat Kohli) ಸಿಡಿಸಿದ ಆಕರ್ಷಕ ಅರ್ಧಶತಕ ತಂಡಕ್ಕೆ ನೆರವಾಯಿತು. ಕೇವಲ 34 ಎಸೆತಗಳಲ್ಲಿ 6 ಫೋರ್, 1 ಸಿಕ್ಸರ್ ಸಿಡಿಸಿ 50 ರನ್ ಚಚ್ಚಿದರು. ಈ ಮೂಲಕ ಐಪಿಎಲ್ 2023 ರಲ್ಲಿ (IPL 2023) ಆಡಿದ ನಾಲ್ಕು ಪಂದ್ಯಗಳಲ್ಲಿ ಕೊಹ್ಲಿ ಮೂರನೇ ಅರ್ಧಶತಕ ಬಾರಿಸಿದರು. ಚಿನ್ನಸ್ವಾಮಿಯಲ್ಲಿ 50 ರನ್ ಸಿಡಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಏನು ಮಾಡಿದ್ರು ನೋಡಿ.
33 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದಾಗ ಕೊಹ್ಲಿ ಆಕ್ರಮಣಕಾರಿ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದರು. ಎಂದಿನಂತೆ ಕೊಹ್ಲಿಯ ಸಂಭ್ರಮ ಈ ಬಾರಿ ಇರಲಿಲ್ಲ. ತಮ್ಮ ಕೈಯನ್ನು ಜೆರ್ಸಿ ಮೇಲಿರುವ ಆರ್ಸಿಬಿ ಲೋಗೋ ಕಡೆ ತೋರಿಸಿ ಅಭಿಮಾನಿಗಳ ಕಡೆ ತಿರುಗಿ ವಿಶೇಷವಾಗಿ ಸೆಲೆಬ್ರೇಷನ್ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಳತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಅರ್ಧಶತಕದೊಂದಿಗೆ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಅತೀ ಹೆಚ್ಚು ಬಾರಿ 50+ ಸ್ಕೋರ್ ಕಲೆಹಾಕಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಶಿಖರ್ ಧವನ್ ಹೆಸರಿನಲ್ಲಿತ್ತು.
King @imVkohli greatest comeback in WC year couldn’t ask for something better than this ??❤️??#ViratKohli? #IPL2023 #RCBvDCpic.twitter.com/zdqnZmhIhY
— Mayur (@133_AT_Hobart) April 15, 2023
ಶಿಖರ್ ಧವನ್ 209 ಐಪಿಎಲ್ ಇನಿಂಗ್ಸ್ಗಳಲ್ಲಿ 49 ಅರ್ಧಶತಕ ಹಾಗೂ 2 ಶತಕದೊಂದಿಗೆ ಒಟ್ಟು 51 ಬಾರಿ 50+ ಸ್ಕೋರ್ ಕಲೆಹಾಕಿದ್ದರು. ಇದೀಗ ಈ ದಾಖಲೆಯನ್ನು ಮುರಿದು ಭಾರತೀಯರ ಪಟ್ಟಿಯಲ್ಲಿ ಕಿಂಗ್ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಕೊಹ್ಲಿ 219 ಐಪಿಎಲ್ ಇನಿಂಗ್ಸ್ಗಳಲ್ಲಿ ಒಟ್ಟು 52 ಬಾರಿ 50+ ಸ್ಕೋರ್ ಕಲೆಹಾಕಿದ್ದಾರೆ. ಈ ವೇಳೆ ಕೊಹ್ಲಿಯ ಬ್ಯಾಟ್ನಿಂದ 5 ಶತಕಗಳು ಹಾಗೂ 47 ಅರ್ಧಶತಕಗಳು ಮೂಡಿಬಂದಿವೆ.
IPL 2023: ಸೌರವ್ ಗಂಗೂಲಿಯನ್ನು ಗುರಾಯಿಸಿದ ವಿರಾಟ್ ಕೊಹ್ಲಿ..!
ಹಸ್ತಲಾಘವ ಮಾಡದ ಕೊಹ್ಲಿ-ಗಂಗೂಲಿ:
ಆರ್ಸಿಬಿ- ಡೆಲ್ಲಿ ಪಂದ್ಯದ ಬಳಿಕ ಉಭಯ ತಂಡಗಳ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳು ಕ್ರೀಡಾಸ್ಫೂರ್ತಿ ತೋರಲು ಹಸ್ತಲಾಘವ ಮಾಡಿದರು. ಆದರೆ, ಈ ವೇಳೆ ವಿರಾಟ್ ಕೊಹ್ಲಿ ಮತ್ತು ಗಂಗೂಲಿ ಕೈಕುಲುಕದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಂಗೂಲಿ ಇತರ ಆಟಗಾರರನ್ನು ಭೇಟಿ ಮಾಡಲು ಸರದಿಯಲ್ಲಿ ಮುಂದೆ ಸಾಗಿದಾಗ ವಿರಾಟ್ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದರು. ಈ ವೇಳೆ ಗಂಗೂಲಿ ವಿರಾಟ್ ಕೊಹ್ಲಿಯನ್ನು ಬಿಟ್ಟು ಮುಂದೆ ಸಾಗಿ ಇತರೆ ಆಟಗಾರರಿಗೆ ಶೇಕ್ ಹ್ಯಾಂಡ್ ನೀಡಿದರು.
ಇದೀಗ ಈ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕೆಲವು ಅಭಿಮಾನಿಗಳು ಕೊಹ್ಲಿ ಉದ್ದೇಶಪೂರ್ವಕವಾಗಿ ಗಂಗೂಲಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:09 am, Sun, 16 April 23