Kamaal R Khan: ‘ವಿರಾಟ್​ ಕೊಹ್ಲಿಗೆ ಐಟಂ ಡ್ಯಾನ್ಸ್​ ಮಾಡುವ ಚಾನ್ಸ್​ ಕೊಡ್ತೀನಿ’ ಎಂದ ‘ದೇಶದ್ರೋಹಿ’ ನಟ

Deshdrohi 2: ‘ನಿನ್ನ ಸಿನಿಮಾದಲ್ಲಿ ವಿರಾಟ್​ ಕೊಹ್ಲಿ ಡ್ಯಾನ್ಸ್​ ಮಾಡಿದರೆ ಅವರಿಗೆ ಸಂಭಾವನೆ ನೀಡಲು ನಿನ್ನ ಆಸ್ತಿ ಮಾರಿಕೊಳ್ಳಬೇಕಾಗುತ್ತದೆ’ ಎಂದು ನೆಟ್ಟಿಗರೊಬ್ಬರು ಖಡಕ್​ ಆಗಿ ಕಮೆಂಟ್​ ಮಾಡಿದ್ದಾರೆ.

Kamaal R Khan: ‘ವಿರಾಟ್​ ಕೊಹ್ಲಿಗೆ ಐಟಂ ಡ್ಯಾನ್ಸ್​ ಮಾಡುವ ಚಾನ್ಸ್​ ಕೊಡ್ತೀನಿ’ ಎಂದ ‘ದೇಶದ್ರೋಹಿ’ ನಟ
ವಿರಾಟ್ ಕೊಹ್ಲಿ, ಕಮಾಲ್ ಆರ್. ಖಾನ್
Follow us
|

Updated on:Apr 16, 2023 | 8:59 AM

ವಿರಾಟ್​ ಕೊಹ್ಲಿಯ (Virat Kohli) ಬ್ಯಾಟಿಂಗ್​ ಪರಾಕ್ರಮವನ್ನು ಎಲ್ಲರೂ ನೋಡಿದ್ದಾರೆ. ನಟನೆಯಲ್ಲೂ ಅವರು ಕಮ್ಮಿಯೇನಿಲ್ಲ ಎಂಬುದಕ್ಕೆ ಅನೇಕ ಜಾಹೀರಾತುಗಳೇ ಸಾಕ್ಷಿ. ಇನ್ನು ಡ್ಯಾನ್ಸ್​? ಪ್ರಯತ್ನಿಸಿದರೆ ಅದನ್ನೂ ಅವರು ಚೆನ್ನಾಗಿಯೇ ಮಾಡುತ್ತಾರೆ. ಹಾಗಾಗಿ ಅವರಿಗೆ ಹೊಸ ಸಿನಿಮಾದಲ್ಲಿ ಐಟಂ ಡ್ಯಾನ್ಸ್​ ಮಾಡಲು ಅವಕಾಶ ನೀಡುವುದಾಗಿ ಕಮಾಲ್​ ಆರ್​. ಖಾನ್​ (Kamaal R Khan) ಹೇಳಿದ್ದಾರೆ. ಈ ಬಗ್ಗೆ ಅವರು ಟ್ವೀಟ್​ ಮಾಡಿದ್ದಾರೆ. ಅದಕ್ಕೆಲ್ಲ ಕಾರಣ ಆಗಿರುವುದು ಒಂದು ವೈರಲ್​ ವಿಡಿಯೋ. ವಿರಾಟ್​ ಕೊಹ್ಲಿ ಅವರು ಮೈದಾನದಲ್ಲಿ ಖುಷಿಯಾಗಿ ಹೆಜ್ಜೆ ಹಾಕಿದ ಕೆಲವು ಕ್ಷಣಗಳನ್ನು ಜೋಡಿಸಿ, ಅದರ ಹಿನ್ನೆಲೆಯಲ್ಲಿ ‘ಮಾರ್​ ಡಾಲಾ..’ ಹಾಡನ್ನು ಸೇರಿಸಿ ವೈರಲ್​ ಮಾಡಲಾಗಿದೆ. ಅದನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಕಮಾಲ್​ ಆರ್​. ಖಾನ್​ ಅಲಿಯಾಸ್​ ಕೆಆರ್​ಕೆ ಅವರು ವಿರಾಟ್​ ಕೊಹ್ಲಿಗೆ ‘ದೇಶದ್ರೋಹಿ 2’ (Deshdrohi 2) ಚಿತ್ರದಲ್ಲಿ ಐಟಂ ಡ್ಯಾನ್ಸ್​ ಮಾಡಲು ಅವಕಾಶ ನೀಡುವುದಾಗಿ ಹೇಳಿದ್ದಾರೆ.

‘ವಿರಾಟ್​ ಕೊಹ್ಲಿಯ ಡ್ಯಾನ್ಸ್​ ಕೌಶಲ ನೋಡಿ ನಾನು ಇಂಪ್ರೆಸ್​ ಆಗಿದ್ದೇನೆ. ಹಾಗಾಗಿ ನನ್ನ ‘ದೇಶದ್ರೋಹಿ 2’ ಸಿನಿಮಾದಲ್ಲಿ ಅವರಿಗೆ ಐಟಂ ಡ್ಯಾನ್ಸ್​ ಮಾಡಲು ಚಾನ್ಸ್​ ನೀಡುತ್ತೇನೆ’ ಎಂದು ಕಮಾಲ್​ ಆರ್​. ಖಾನ್​ ಟ್ವೀಟ್​ ಮಾಡಿದ್ದಾರೆ. ಇದು ವಿರಾಟ್​ ಕೊಹ್ಲಿ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ. ಈ ಟ್ವೀಟ್​ಗೆ ಕಮೆಂಟ್​ ಮಾಡಿರುವ ಅನೇಕರು ಕಮಾಲ್​ ಆರ್​. ಖಾನ್​ಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ
Image
RRR ಕಲೆಕ್ಷನ್​ ರಿಪೋರ್ಟ್​ ಸುಳ್ಳು ಎಂದ ಕಮಾಲ್​ ಆರ್​ ಖಾನ್​; ಸಾಬೀತು ಮಾಡುವುದಾಗಿ ಘೋಷಣೆ
Image
‘ಭಕ್ತರ ಭಕ್ತ ಮಹಾಭಕ್ತ’, ‘ಕಾಶ್ಮೀರದ ಶರ್ಮಾ’: ಖಾನ್​ ಚಿತ್ರಕ್ಕೆ ಹೊಸ ಹೆಸರು ಸೂಚಿಸಿದ ಇನ್ನೊಬ್ಬ ಖಾನ್​
Image
‘ಈ ನಟರಿಗೆ ಅಹಂಕಾರ ಜಾಸ್ತಿ’; ವಿಡಿಯೋ ಮೂಲಕ ಎಳೆ ಎಳೆಯಾಗಿ ವಿವರಿಸಿದ ಕಮಾಲ್​ ಆರ್.​ ಖಾನ್​
Image
ಸಲ್ಮಾನ್​ ಖಾನ್​ ವಿರುದ್ಧ ಯಾವುದೇ ಹೇಳಿಕೆ ನೀಡಬೇಡಿ; ಕಮಾಲ್​ ಆರ್​ ಖಾನ್​ಗೆ ಕೋರ್ಟ್​ ಆದೇಶ

‘ನಿನ್ನ ಸಿನಿಮಾದಲ್ಲಿ ವಿರಾಟ್​ ಕೊಹ್ಲಿ ಡ್ಯಾನ್ಸ್​ ಮಾಡಿದರೆ ಅವರಿಗೆ ಸಂಭಾವನೆ ನೀಡಲು ಇಡೀ ನಿನ್ನ ಆಸ್ತಿ ಪಾಸ್ತಿ ಮಾರಿಕೊಳ್ಳಬೇಕಾಗುತ್ತದೆ ಹುಷಾರ್​’ ಎಂದು ನೆಟ್ಟಿಗರೊಬ್ಬರು ಖಡಕ್​ ಆಗಿ ಕಮೆಂಟ್​ ಮಾಡಿದ್ದಾರೆ. ‘ಮೊದಲು ನಿನ್ನ ಯೋಗ್ಯತೆ ನೋಡಿಕೋ’ ಎಂದು ಕೂಡ ಅನೇಕರು ಕೆಆರ್​ಕೆಗೆ ಚಾಟಿ ಬೀಸಿದ್ದಾರೆ. ‘ದಯವಿಟ್ಟು ನೀನು ‘ದೇಶದ್ರೋಹಿ 2’ ಸಿನಿಮಾ ಮಾಡಲೇಬೇಡ’ ಎಂದು ಹಲವರು ಕೈ ಮುಗಿದಿದ್ದಾರೆ.

ಇದನ್ನೂ ಓದಿ: KRK: ‘ಆಮಿರ್​ ಖಾನ್​ಗೆ ನಿರ್ಮಾಪಕರೇ ಸಿಕ್ತಿಲ್ಲ, ಕರೆ​ ಮಾಡಿದ್ರೆ ಯಾರೂ ರಿಸೀವ್​ ಮಾಡ್ತಿಲ್ಲ’: ಕೆಆರ್​ಕೆ ವ್ಯಂಗ್ಯ

2008ರಲ್ಲಿ ‘ದೇಶದ್ರೋಹಿ’ ಸಿನಿಮಾ ತೆರೆಕಂಡಿತ್ತು. ಆ ಚಿತ್ರದಲ್ಲಿ ಕಮಾಲ್​ ಆರ್​. ಖಾನ್​ ಮುಖ್ಯಭೂಮಿಕೆ ನಿಭಾಯಿಸಿದ್ದರು. ನಿರ್ಮಾಣ ಕೂಡ ಅವರದ್ದೇ. ಆ ಸಿನಿಮಾ ಅತಿ ಕೆಟ್ಟ ವಿಮರ್ಶೆ ಪಡೆದುಕೊಂಡಿತ್ತು. ಪ್ರೇಕ್ಷಕರಿಗೂ ಕಿಂಚಿತ್ತೂ ಹಿಡಿಸಲಿಲ್ಲ. ಹೀನಾಯವಾಗಿ ಸೋತರೂ ಕಮಾಲ್​ ಆರ್​. ಖಾನ್​ಗೆ ಬುದ್ಧಿ ಬಂದಿಲ್ಲ. ಈಗ ಅವರು ‘ದೇಶದ್ರೋಹಿ 2’ ಸಿನಿಮಾ ಮಾಡುವ ಉತ್ಸಾಹದಲ್ಲಿದ್ದಾರೆ.

ಇದನ್ನೂ ಓದಿ: KRK: ಶ್ರದ್ಧಾ ಕಪೂರ್​ಗೆ ಬಾಡಿ ಶೇಮಿಂಗ್​ ಮಾಡಿದ ಕಾಂಟ್ರವರ್ಸಿ ವಿಮರ್ಶಕ ಕಮಾಲ್​ ಆರ್​. ಖಾನ್​

2022ರ ಏಪ್ರಿಲ್​ 18ರಂದು ಕಮಾಲ್​ ಆರ್​. ಖಾನ್​ ಅವರು ‘ದೇಶದ್ರೋಹಿ 2’ ಚಿತ್ರದ ಹೊಸ ಪೋಸ್ಟರ್​ ಶೇರ್​ ಮಾಡಿಕೊಂಡಿದ್ದರು. ಸಿನಿಮಾದ ಶೂಟಿಂಗ್ ಸದ್ಯದಲ್ಲೇ ಆರಂಭ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದರು. ಎಷ್ಟೇ ಟ್ರೋಲ್​ ಆದರೂ ಕೂಡ ಅವರು ತಮ್ಮ ಹುಚ್ಚಾಟವನ್ನು ನಿಲ್ಲಿಸುತ್ತಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:59 am, Sun, 16 April 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ