KRK: ‘ಆಮಿರ್ ಖಾನ್ಗೆ ನಿರ್ಮಾಪಕರೇ ಸಿಕ್ತಿಲ್ಲ, ಕರೆ ಮಾಡಿದ್ರೆ ಯಾರೂ ರಿಸೀವ್ ಮಾಡ್ತಿಲ್ಲ’: ಕೆಆರ್ಕೆ ವ್ಯಂಗ್ಯ
Aamir Khan: ಟ್ವಿಟರ್ನಲ್ಲಿ ಕಮಾಲ್ ಆರ್. ಖಾನ್ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ಸೆಲೆಬ್ರಿಟಿಗಳ ಬಗ್ಗೆ ವಿವಾದಾತ್ಮಕ ರೀತಿಯಲ್ಲಿ ಪೋಸ್ಟ್ ಮಾಡಿ ಸುದ್ದಿ ಆಗುತ್ತಾರೆ.
ನಟ ಆಮಿರ್ ಖಾನ್ (Aamir Khan) ಅವರು ಒಂದು ಕಾಲದಲ್ಲಿ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರ ಅದೃಷ್ಟ ಕೈ ಕೊಟ್ಟಿದೆ. ಆಮಿರ್ ಖಾನ್ ಮಾಡಿದ ಸಿನಿಮಾಗಳೆಲ್ಲ ಸೋಲುತ್ತಿವೆ. ಕಳೆದ ವರ್ಷ ‘ಲಾಲ್ ಸಿಂಗ್ ಚಡ್ಡಾ’ ಚಿತ್ರ ತೆರೆಕಂಡು ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಲು ವಿಫಲವಾಯಿತು. ಅದನ್ನೇ ಗುರಿಯಾಗಿಟ್ಟುಕೊಂಡು ಅನೇಕರು ಟ್ರೋಲ್ ಮಾಡುತ್ತಿದ್ದಾರೆ. ಬಾಲಿವುಡ್ನ ಕಿರಿಕ್ ವಿಮರ್ಶಕ ಎನಿಸಿಕೊಂಡಿರುವ ಕಮಾಲ್ ಆರ್. ಖಾನ್ (Kamaal R Khan) ಕೂಡ ಈಗ ಆಮಿರ್ ಖಾನ್ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. ಆಮಿರ್ ಖಾನ್ ಜೊತೆ ಸಿನಿಮಾ ಮಾಡಲು ಯಾವ ನಿರ್ಮಾಪಕರೂ ಮುಂದೆ ಬರುತ್ತಿಲ್ಲ ಎಂದು ಕೆಆರ್ಕೆ (KRK) ಹೇಳಿದ್ದಾರೆ. ಪದೇಪದೇ ಅವರ ಇಂಥ ಟ್ವೀಟ್ ಮಾಡುವುದರಿಂದ ಕೆಲವರು ಅವರನ್ನು ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ.
ಟ್ವಿಟರ್ನಲ್ಲಿ ಕಮಾಲ್ ಆರ್. ಖಾನ್ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ವಿವಾದಾತ್ಮಕ ರೀತಿಯಲ್ಲಿ ಪೋಸ್ಟ್ ಮಾಡಿ ಸುದ್ದಿ ಆಗುತ್ತಾರೆ. ಹಿಂದಿ ಚಿತ್ರರಂಗದ ಬಹುತೇಕ ಎಲ್ಲ ಸೆಲೆಬ್ರಿಟಿಗಳನ್ನೂ ಅವರು ಎದುರು ಹಾಕಿಕೊಂಡಿದ್ದಾರೆ. ಅದೇ ವಿಚಾರವಾಗಿ ಅವರು ಜೈಲು ಊಟವನ್ನೂ ತಿಂದು ಬಂದಿದ್ದಾರೆ. ಆದರೂ ಕೂಡ ಕಮಾಲ್ ಆರ್. ಖಾನ್ ಬುದ್ಧಿ ಬದಲಾಗಿಲ್ಲ. ಈಗ ಅವರು ಆಮಿರ್ ಖಾನ್ ಬಗ್ಗೆ ಕುಹಕವಾಡಿದ್ದಾರೆ.
‘ಲಾಲ್ ಸಿಂಗ್ ಚಡ್ಡಾ’ ಸೋತಿದ್ದಕ್ಕೆ ಆಮಿರ್ ಖಾನ್ನ ಟೀಕೆ ಮಾಡಿದ ಜಸ್ಪ್ರೀತ್ ಬುಮ್ರಾ; ನಟನ ಉತ್ತರ ಏನು?
‘ಘಜಿನಿ 2’ ಮತ್ತು ‘ಸರ್ಫರೋಷ್ 2’ ಚಿತ್ರಗಳನ್ನು ಮಾಡಲು ಆಮಿರ್ ಖಾನ್ ನಿರ್ಮಾಪಕರನ್ನು ಹುಡುಕುತ್ತಿದ್ದಾರೆ. ಆದರೆ ಅವರ ಜೊತೆ ಸಿನಿಮಾ ಮಾಡಲು ಯಾವುದೇ ನಿರ್ಮಾಪಕರು ಮುಂದೆಬರುತ್ತಿಲ್ಲ. ಅವರು ಕಾಲ್ ಮಾಡಿದರೆ ಆದಿತ್ಯ ಚೋಪ್ರಾ ರಿವೀವ್ ಮಾಡುತ್ತಿಲ್ಲ’ ಎಂದು ಕಮಾಲ್ ಆರ್. ಖಾನ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಆಮಿರ್ ಖಾನ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.
Aamir Khan is approaching many producers to make #Gajani2 #Sarfrosh2 etc. But no producer is ready to work with him. Aditya Chopra is not taking his calls also.
— KRK (@kamaalrkhan) April 12, 2023
ಕಮಾಲ್ ಆರ್. ಖಾನ್ ಅವರು ತಮ್ಮದೇ ರೀತಿಯಲ್ಲಿ ಸಿನಿಮಾಗಳ ವಿಮರ್ಶೆ ಮಾಡುತ್ತಾರೆ. ಅದರಿಂದ ಅವರು ಟೀಕೆಗೂ ಒಳಗಾಗುತ್ತಾರೆ. ಆ ಬಗ್ಗೆಯೂ ಅವರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ‘ನಾನು ವಿಮರ್ಶೆ ಮಾಡಿದರೆ ನಿರ್ಮಾಪಕರಿಗೆ ದೊಡ್ಡ ಸಮಸ್ಯೆ ಆಗುತ್ತದೆ ಎಂಬುದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ಟ್ವೀಟ್ ಮತ್ತು ವಿಮರ್ಶೆಯಿಂದಾಗಿ ತಮಗೆ 100 ಕೋಟಿ ರೂಪಾಯಿ ನಷ್ಟ ಆಯ್ತು ಎಂದು ಒಬ್ಬ ನಿರ್ಮಾಪಕರು ನ್ಯಾಯಾಲಯದಲ್ಲಿ ಹೇಳಿದ್ದರು. ಹಾಗಾಗಿ ನಾನು ಅವರ ಸಿನಿಮಾದ ವಿಮರ್ಶೆ ಮಾಡುವಂತಿಲ್ಲ’ ಎಂದು ಕಮಾಲ್ ಆರ್. ಖಾನ್ ಟ್ವೀಟ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:52 pm, Thu, 13 April 23