‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಚಿತ್ರದಲ್ಲಿದೆ 8 ಹಾಡು; ಸಿನಿಮಾದ ಒಟ್ಟು ಅವಧಿ 2 ಗಂಟೆ 24 ನಿಮಿಷ

Kisi Ka Bhai Kisi Ki Jaan Songs: ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಚಿತ್ರದಲ್ಲಿ ಫ್ಯಾಮಿಲಿ ಕಹಾನಿ ಇದೆ. ಹೆಚ್ಚಿನ ಕಡೆಗಳಲ್ಲಿ ಕತ್ತರಿ ಹಾಕಲು ಸೆನ್ಸಾರ್​ ಮಂಡಳಿ ಸೂಚಿಸಿಲ್ಲ. ಈ ಚಿತ್ರಕ್ಕೆ ‘ಯು/ಎ’ ಪ್ರಮಾಣಪತ್ರ ಸಿಕ್ಕಿದೆ.

‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಚಿತ್ರದಲ್ಲಿದೆ 8 ಹಾಡು; ಸಿನಿಮಾದ ಒಟ್ಟು ಅವಧಿ 2 ಗಂಟೆ 24 ನಿಮಿಷ
ಸಲ್ಮಾನ್ ಖಾನ್
Follow us
ಮದನ್​ ಕುಮಾರ್​
|

Updated on:Apr 16, 2023 | 3:16 PM

ನಟ ಸಲ್ಮಾನ್​ ಖಾನ್​ (Salman Khan) ಅವರು ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾ ಮೂಲಕ ಒಂದು ಗೆಲುವು ಪಡೆಯಲು ಕಾದಿದ್ದಾರೆ. ಏಪ್ರಿಲ್​ 21ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈದ್​ ಹಬ್ಬದ ಪ್ರಯುಕ್ತ ರಿಲೀಸ್​ ಆಗುತ್ತಿರುವುದರಿಂದ ಭರ್ಜರಿ ಕಮಾಯಿ ಮಾಡುವ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಅನೇಕ ಇಂಟರೆಸ್ಟಿಂಗ್​ ವಿಚಾರಗಳಿವೆ. ಹಾಗಾಗಿ ಹೈಪ್​ ಹೆಚ್ಚಾಗಿದೆ. ಈಗ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ (Kisi Ka Bhai Kisi Ki Jaan) ಸಿನಿಮಾದ ಸೆನ್ಸಾರ್​ ಪ್ರಕ್ರಿಯೆ ಕೂಡ ಮುಕ್ತಾಯ ಆಗಿದ್ದು, ಚಿತ್ರದಲ್ಲಿ ಏನುಂಟು-ಏನಿಲ್ಲ ಎಂಬ ವಿವರ ಲಭ್ಯವಾಗಿದೆ. ‘ಪಿಂಕ್​ವಿಲ್ಲಾ’ ವರದಿ ಪ್ರಕಾರ ಈ ಸಿನಿಮಾದಲ್ಲಿ ಬರೋಬ್ಬರಿ 8 ಹಾಡುಗಳಿವೆ. ಇದು ಸಿನಿಮಾಗೆ ಹೊರೆಯಾಗಲೂಬಹುದು. ಚಿತ್ರದ ಒಟ್ಟು ಅವಧಿ 2 ಗಂಟೆ 24 ನಿಮಿಷ ಎನ್ನಲಾಗಿದೆ. ಈ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಮತ್ತು ಪೂಜಾ ಹೆಗ್ಡೆ (Pooja Hegde) ಅವರು ಜೋಡಿಯಾಗಿ ನಟಿಸಿದ್ದಾರೆ. ಫರ್ಹಾದ್​ ಸಮ್ಜಿ ಅವರು ನಿರ್ದೇಶನ ಮಾಡಿದ್ದಾರೆ.

ಭಾರತೀಯ ಸಿನಿಮಾಗಳಲ್ಲಿ ಹಾಡಿಗೆ ಹೆಚ್ಚು ಮಹತ್ವ ಇರುತ್ತದೆ. ಹಾಡುಗಳಿಂದಲೇ ಸಿನಿಮಾ ಗೆದ್ದ ಉದಾಹರಣೆಗಳು ಸಾಕಷ್ಟಿವೆ. ಆದರೆ ಕೆಲವೊಮ್ಮೆ ಕಥೆಯ ಓಟಕ್ಕೆ ಹಾಡುಗಳಿಂದ ತೊಂದರೆ ಆಗಬಹುದು. ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾದಲ್ಲಿ 8 ಹಾಡುಗಳು ಇವೆ ಎಂಬುದು ಅಭಿಮಾನಿಗಳ ಚಿಂತೆಗೆ ಕಾರಣ ಆಗಿದೆ. 5 ಹಾಡುಗಳು ಕಥೆಯ ನಡುವೆ ಪ್ರತ್ಯೇಕವಾಗಿ ಬರಲಿವೆ. ಇನ್ನುಳಿದ ಮೂರು ಹಾಡುಗಳು ಹಿನ್ನೆಲೆಯಲ್ಲಿ ಸಾಗಲಿವೆ ಎಂದು ವರದಿ ಆಗಿದೆ.

Salman Khan: ಈದ್​ಗೆ ಸಲ್ಮಾನ್​ ಖಾನ್​ ಕಡೆಯಿಂದ ಮನರಂಜನೆಯ ರಸದೌತಣ; ಇಲ್ಲಿದೆ ನೋಡಿ ಸ್ಯಾಂಪಲ್​

ಇದನ್ನೂ ಓದಿ
Image
ಸೆಟ್​​ನಲ್ಲಿ ಸಲ್ಲುನ ಭೇಟಿ ಮಾಡೋಕೆ ಬಂದ ರಾಮ್​ ಚರಣ್​ಗೆ ಸಿಕ್ತು ಹಿಂದಿ ಸಿನಿಮಾ ಆಫರ್
Image
ತಂಗಿ ಗಂಡನ ಜೊತೆಗೆ ಸಲ್ಮಾನ್​ ಖಾನ್​ ಕಿರಿಕ್​; ಭಾವನ ಸಿನಿಮಾದಿಂದಲೇ ಹೊರನಡೆದ ಆಯುಷ್​ ಶರ್ಮಾ?
Image
ಬಹಿರಂಗ ವೇದಿಕೆಯಲ್ಲಿ ಸಲ್ಲು ಇದೆಂಥಾ ಕೆಲಸ; ಪೂಜಾ ಹೆಗ್ಡೆ ವಿಚಾರದಲ್ಲಿ ಸಿಕ್ಕಾಪಟ್ಟೆ ಮುಜುಗರ
Image
ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

ಈ ಬಾರಿ ಸಲ್ಮಾನ್ ಖಾನ್​ ಅವರು ಕೌಟುಂಬಿಕ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಚಿತ್ರದಲ್ಲಿ ಫ್ಯಾಮಿಲಿ ಕಹಾನಿ ಇದೆ. ಆದರೆ ಮಾಸ್​ ಅಂಶಗಳು ಕೂಡ ಭರ್ಜರಿ ಆಗಿವೆ. ಅದಕ್ಕೆ ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಸಾಹಸ ದೃಶ್ಯಗಳನ್ನು ಇಷ್ಟಪಡುವವರಿಗೂ ಸಖತ್​ ಮನರಂಜನೆ ಸಿಗಲಿದೆ. ಹೆಚ್ಚಿನ ಯಾವುದೇ ದೃಶ್ಯಗಳಿಗೂ ಕತ್ತರಿ ಹಾಕಲು ಸೆನ್ಸಾರ್​ ಮಂಡಳಿ ಸೂಚಿಸಿಲ್ಲ. ಈ ಚಿತ್ರಕ್ಕೆ ‘ಯು/ಎ’ ಪ್ರಮಾಣಪತ್ರ ಸಿಕ್ಕಿದೆ.

ಸಲ್ಮಾನ್​ ಖಾನ್​ ಪಂಚೆ ಧರಿಸಿ ಕುಣಿದಿದ್ದಕ್ಕೆ ಎದುರಾಯ್ತು ಕಿರಿಕ್​; ಸಿನಿಮಾ ಬ್ಯಾನ್​ ಮಾಡಲು ಒತ್ತಾಯ

‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡುವುದರ ಜೊತೆಗೆ ನಿರ್ಮಾಣದ ಹೊಣೆಯನ್ನೂ ಸಲ್ಮಾನ್​ ಖಾನ್​ ಅವರೇ ನಿಭಾಯಿಸಿದ್ದಾರೆ. ಅವರ ಹೋಮ್​ ಬ್ಯಾನರ್​ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ. ಟಾಲಿವುಡ್​ನ ಖ್ಯಾತ ನಟ ದಗ್ಗುಬಾಟಿ ವೆಂಕಟೇಶ್​ ಅವರು ಕೂಡ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ವಿಲನ್​ ಆಗಿ ಜಗಪತಿ ಬಾಬು ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:45 pm, Sun, 16 April 23

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?