Faf Duplessis: ಡೆಲ್ಲಿ ವಿರುದ್ಧದ ಗೆಲುವಿನ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಸ್ ಏನಂದ್ರು ನೋಡಿ

RCB vs DC, IPL 2023: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​ಸಿಬಿ ಪರ ಬ್ಯಾಟಿಂಗ್​ನಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರೆ, ಬೌಲಿಂಗ್​ನಲ್ಲಿ ವಿಜಯಕುಮಾರ್ ವೈಶಾಖ್ 3 ವಿಕೆಟ್ ಕಿತ್ತರು. ಮೊಹಮ್ಮದ್ ಸಿರಾಜ್ ಕೂಡ ನೆರವಾದರು.

Vinay Bhat
|

Updated on:Apr 16, 2023 | 10:13 AM

ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತು. ಈ ಮ್ಯಾಚ್​ನಲ್ಲಿ ಆರ್​ಸಿಬಿ 23 ರನ್​ಗಳ ಜಯ ಸಾಧಿಸುವ ಮೂಲಕ ಹ್ಯಾಟ್ರಿಕ್ ಸೋಲಿನಿಂದ ಪಾರಾಯಿತು.

1 / 7
ಬ್ಯಾಟಿಂಗ್​ನಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರೆ, ಬೌಲಿಂಗ್​ನಲ್ಲಿ ಕರ್ನಾಟಕದ ಪ್ಲೇಯರ್ ವಿಜಯಕುಮಾರ್ ವೈಶಾಖ್ 3 ವಿಕೆಟ್ ಕಿತ್ತು ಮಾರಕ ದಾಳಿ ಸಂಘಟಿಸಿದರು. ಮೊಹಮ್ಮದ್ ಸಿರಾಜ್ ಕೂಡ ನೆರವಾದರು.

2 / 7
ಇದೀಗ ಪಾಯಿಂಟ್ ಟೇಬಲ್​ನಲ್ಲಿ ಬೆಂಗಳೂರು ತಲಾ ಎರಡು ಗೆಲುವು-ಸೋಲು ಕಂಡು 4 ಪಾಯಿಂಟ್​ನೊಂದಿಗೆ ಏಳನೇ ಸ್ಥಾನದಲ್ಲಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

3 / 7
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಫಾಪ್ ಡುಪ್ಲೆಸಿಸ್, ನಮ್ಮ ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ನಮಗೆ ಈ ಗೆಲುವು ಬೇಕಿತ್ತು. ಮುಖ್ಯವಾಗಿ ಬೌಲಿಂಗ್ ವಿಭಾಗದಲ್ಲಿ. ನಾವು ಕೆಲವು ಪಂದ್ಯಗಳನ್ನು ಗೆಲ್ಲಲೇ ಬೇಕಾಗಿದೆ. ಅದು ಇಂಥಹ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುಲಭವಲ್ಲ ಎಂದು ಹೇಳಿದ್ದಾರೆ.

4 / 7
ನಮ್ಮ ಬೌಲರ್​ಗಳ ಪ್ರದರ್ಶನ ಹೆಮ್ಮೆ ತಂದಿದೆ. ಇದು ನಮ್ಮ ಮೊದಲ ಹಗಲು ಪಂದ್ಯ. ಹಗಲು ಪಂದ್ಯದಲ್ಲಿ 175 ರನ್ ಗಳಿಸಿದ್ದು ಉತ್ತಮ ಸ್ಕೋರ್. ಆದರೆ ಹೊಸ ನಿಯಮದಿಂದ ಕೆಲವು ಅನಿಶ್ಚಿತತೆ ಇದೆ. ಇದು ಸರಿಯಾದ ಸ್ಕೋರ್ ಎಂದು ಸಾಬೀತಾಯಿತು - ಫಾಫ್ ಡುಪ್ಲೆಸಿಸ್.

5 / 7
ಮೊದಲ ಆರು ಓವರ್‌ಗಳಲ್ಲಿ ನಾವು ಬೌಲಿಂಗ್ ಮಾಡಿದ ರೀತಿ ಅತ್ಯುತ್ತಮವಾಗಿತ್ತು. ಇಂದು ಮಾತ್ರವಲ್ಲ ಎಲ್ಲಾ ಪಂದ್ಯಗಳಲ್ಲಿ ನಾವು ಪವರ್ ಪ್ಲೇನಲ್ಲಿ ಉತ್ತಮ ಬೌಲಿಂಗ್ ಮಾಡಿದ್ದೇವೆ. ಸಿರಾಜ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.

6 / 7
ಮೊದಲ ಆರು ಓವರ್​ಗಳು ಪಂದ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಎಲ್ಲರು ಪಾಸಿಟಿವ್​ನಿಂದ ಬ್ಯಾಟಿಂಗ್ ಮಾಡಲು ಮುಂದಾಗುತ್ತಾರೆ. ಆದರೆ, ನಮ್ಮ ಬೌಲರ್​ಗಳು ನೀಡಿದ ಪ್ರದರ್ಶನ ಅದ್ಭುತವಾಗಿತ್ತು. ಎಲ್ಲ ಕ್ರೆಡಿಟ್ ಮೊದಲ ಆರು ಓವರ್ ಬೌಲಿಂಗ್ ಮಾಡಿದ ವೇಗಿಗಳಿಗೆ ಸಲ್ಲಬೇಕು ಎಂದು ಫಾಫ್ ಡುಪ್ಲೆಸಿಸ್ ಹೇಳಿದ್ದಾರೆ.

7 / 7

Published On - 10:13 am, Sun, 16 April 23

Follow us