IPL 2022: ಅಭ್ಯಾಸದ ವೇಳೆ ಎದುರೆದುರಾದ ಧೋನಿ-ಕೊಹ್ಲಿ: ಈ ಸಂದರ್ಭ ಏನಾಯಿತು ನೋಡಿ

| Updated By: Vinay Bhat

Updated on: Mar 26, 2022 | 11:38 AM

Virat Kohli and MS Dhoni: ಸಿಎಸ್​ಕೆ ತಂಡ ಮುಂಬೈಯ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಪ್ರ್ಯಾಕ್ಟೀಸ್ ನಡೆಸುತ್ತಿದೆ. ಈ ಸಂದರ್ಭ ಚೆನ್ನೈ ಮಾಜಿ ನಾಯಕ ಎಂ ಎಸ್ ಧೋನಿ ಹಾಗೂ ಆರ್​ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಮುಖಾಮುಖಿ ಆದರು.

IPL 2022: ಅಭ್ಯಾಸದ ವೇಳೆ ಎದುರೆದುರಾದ ಧೋನಿ-ಕೊಹ್ಲಿ: ಈ ಸಂದರ್ಭ ಏನಾಯಿತು ನೋಡಿ
Virat Kohli MS Dhoni IPL 2022
Follow us on

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಐಪಿಎಲ್ 2022 (IPL 2022) ಫೀವರ್ ಶುರುವಾಗಿದ್ದು ಅಭಿಮಾನಿಗಳಂತು ರೋಚಕ ಕ್ರಿಕೆಟ್​ನ ಅನುಭವ ಪಡೆಯಲು ಕಾದುಕುಳಿತಿದ್ದಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಈ ಮಿಲಿಯನ್ ಡಾಲರ್ ಟೂರ್ನಿ ಆರಂಭವಾಗಲಿದೆ. ಈ ಬಾರಿಯ ಐಪಿಎಲ್ ಟೂರ್ನಿ ಸಾಕಷ್ಟು ಭಿನ್ನತೆಯಿಂದ ಕೂಡಿದೆ. ಎರಡು ಹೊಸ ತಂಡಗಳು ಸೇರಿ ಒಟ್ಟು 10 ತಂಡಗಳು ಒಂದು ಟ್ರೋಫಿಗಾಗಿ ಕಾದಾಟ ನಡೆಸಲಿದೆ. ಇಂದು ಈ ಚುಟುಕು ಸಮಯಕ್ಕೆ ಚಾಲನೆ ಸಿಗಲಿದ್ದು ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡ ಸೆಣೆಸಾಟ ನಡೆಸಲಿದೆ. ಉಭಯ ತಂಡಗಳೂ ಗೆಲುವಿಗಾಗಿ ಭರ್ಜರಿ ಅಭ್ಯಾಸದಲ್ಲಿ ನಿರತವಾಗಿದೆ. ಸಿಎಸ್​ಕೆ ತಂಡ ಮುಂಬೈಯ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಪ್ರ್ಯಾಕ್ಟೀಸ್ ನಡೆಸುತ್ತಿದೆ. ಈ ಸಂದರ್ಭ ಚೆನ್ನೈ ಮಾಜಿ ನಾಯಕ ಎಂ ಎಸ್ ಧೋನಿ ಹಾಗೂ ಆರ್​ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಮುಖಾಮುಖಿ ಆದರು.

ಹೌದು, ಸಿಎಸ್​ಕೆ ತಂಡ ಅಭ್ಯಾಸ ನಡೆಸುತ್ತಿರುವ ವೇಳೆ ಅಲ್ಲಿಗೆ ಕಿಂಗ್ ಕೊಹ್ಲಿಯ ಎಂಟ್ರಿ ಆಗಿದೆ. ಮೈದಾನದಲ್ಲಿ ಎಂ ಎಸ್ ಧೋನಿ ಕೂಡ ಇದ್ದರು. ಕೊಹ್ಲಿ ಅವರು ಧೋನಿ ಅಭ್ಯಾಸ ನಡೆಸುತ್ತಿರುವ ಕಡೆ ತೆರಳಿ ತಬ್ಬಿಕೊಂಡರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಆರ್​ಸಿಬಿ ಹಾಗೂ ಸಿಎಸ್​ಕೆ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಇವರಿಬ್ಬರ ಫೋಟೋವನ್ನು ಹಂಚಿಕೊಂಡು ಲೆಜೆಂಡ್​ಗಳು ಒಂದೇ ಕಡೆ ಸೇರಿಕೊಂಡಿದ್ದಾರೆ ಎಂದು ಬರೆದುಕೊಂಡಿದೆ.

 

ಎರಡು ದಿನಗಳ ಹಿಂದೆಯಷ್ಟೆ ಎಂಎಸ್ ಧೋನಿ ಸಿಎಸ್​ಕೆ ತಂಡದ ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿದು ರವೀಂದ್ರ ಜಡೇಜಾಗೆ ತಮ್ಮ ಸ್ಥಾನವನ್ನು ನೀಡಿದ್ದರು. ಈ ಬಗ್ಗೆ ಟ್ವಿಟರ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಕೊಹ್ಲಿ, ಚೆನ್ನೈ ತಂಡದ ದಿಗ್ಗಜ ನಾಯಕ ಎಂಎಸ್‌ಡಿಗೆ ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ. “ಹಳದಿ ತಂಡದ ದಿಗ್ಗಜ ನಾಯಕನ ಅಭಿಯಾನ. ಈ ಅಧ್ಯಾಯವನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಎಂಎಸ್‌ ಧೋನಿ ನಿಮ್ಮ ಮೇಲಿನ ಗೌರವ ಸದಾ ಇರಲಿದೆ,” ಎಂದು ಕ್ಯಾಪ್ಟನ್‌ ಕೂಲ್‌ ಅವರನ್ನು ಅಪ್ಪಿಕೊಂಡಿರುವ ಫೋಟೊ ಒಂದನ್ನು ಹಂಚಿಕೊಳ್ಳುವುದರ ಜೊತೆಗೆ ಕೊಹ್ಲಿ ತಮ್ಮ ಟ್ವಿಟರ್‌ ಗೋಡೆಯ ಮೇಲೆ ಮನಮುಟ್ಟುವ ಸಂದೇಶ ಬರೆದುಕೊಂಡಿದ್ದಾರೆ.

 

ಹಾಲಿ ಚಾಂಪಿಯನ್ ಸಿಎಸ್​ಕೆ ಇಂದು ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್ ತಂಡವನ್ನು ಎದುರಿಸುತ್ತಿದೆ. ಚೆನ್ನೈ ತಂಡದಲ್ಲಿ ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಡ್ವೆನ್ ಬ್ರಾವೊ ಅವರಂತಹ ಅನುಭವಿಗಳು ಮತ್ತು ಋತುರಾಜ್ ಗಾಯಕ್ವಾಡ್, ಶಿವಂ ದುಬೆ ಮತ್ತು ರಾಜವರ್ಧನ್ ಹಂಗರ್ಗೆಕರ್ ಅವರಂತಹ ಯುವ ಪ್ರತಿಭೆಗಳೂ ಇದ್ದಾರೆ. ಆದ್ದರಿಂದ ಕಣಕ್ಕಿಳಿಯುವ ಹನ್ನೊಂದರ ಬಳಗದ ಆಯ್ಕೆ ಮಾಡುವಲ್ಲಿ ಜಡೇಜ ಯಾವ ರೀತಿ ಯೋಜನೆ ರೂಪಿಸುವರು ಎಂಬುದೇ ಈಗ ಕುತೂಹಲದ ಸಂಗತಿ. ಆಡಂ ಮಿಲ್ನೆ ವೇಗದ ಬೌಲಿಂಗ್ ವಿಭಾಗದ ಸಾರಥ್ಯ ವಹಿಸಲಿದ್ದಾರೆ. ಕ್ರೀಸ್ ಜೋರ್ಡಾನ್ ಹಾಗೂ ಆಲ್ರೌಂಡರ್ ಡ್ವೇನ್ ಬ್ರಾವೊ ಮಿಲ್ನೆಗೆ ಸಾಥ್ ನೀಡಲಿದ್ದಾರೆ.

ಇತ್ತ ನಾಯಕತ್ವ ಗುಣಗಳನ್ನು ಅನಾವರಣಗೊಳಿಸುವ ದೃಷ್ಟಿಯಿಂದ ಶ್ರೇಯಸ್ ಪಾಲಿಗೆ ಈ ಲೀಗ್ ವೈಯಕ್ತಿಕವಾಗಿ ಸವಾಲಾಗಿದೆ. ಬಹುತೇಕ ಹೊಸ ತಂಡವಾಗಿ ಕಣಕ್ಕಿಳಿಯಲಿದೆ. ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿರುವ ಅಜಿಂಕ್ಯಾ ರಹಾನೆಗೆ ಸ್ಫೋಟಿಸಲು ಉತ್ತಮ ಅವಕಾಶ ಲಭಿಸಿದೆ. ಕಳೆದ ಆವೃತ್ತಿಯ 2ನೇ ಚರಣದಲ್ಲಿ ಸ್ಫೋಟಿಸಿದ ಪರಿಣಾಮ ರಾಷ್ಟ್ರೀಯ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡ ವೆಂಕಟೇಶ್ ಅಯ್ಯರ್ ಹಾಗೂ ರಹಾನೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್, ಆಂಡ್ರೆ ರಸೆಲ್ ತಂಡದ ಭರವಸೆಯ ಬ್ಯಾಟರ್‌ಗಳಾಗದ್ದಾರೆ.

CSK vs KKR, IPL 2022: ವಾಂಖೆಡೆ ಪಿಚ್ ಯಾರಿಗೆ ಹೆಚ್ಚು ಸಹಕಾರಿ?: ಟಾಸ್ ಗೆದ್ದ ತಂಡ ಏನನ್ನು ಆಯ್ಕೆ ಮಾಡಿಕೊಳ್ಳಬೇಕು?

IPL 2022: ಮೊದಲ ಓವರ್​ನಲ್ಲೇ ಅತಿ ಹೆಚ್ಚು ವಿಕೆಟ್ ಕಿತ್ತ ಡೇಂಜರಸ್ ಬೌಲರ್​ಗಳು ಯಾರು ಗೊತ್ತೇ?