Video: ವಾಂಖೇಡೆಯಲ್ಲಿ ಪಾಂಡ್ಯನ ತೆಗಳಿದವರ ಬಾಯಲ್ಲೇ ಚಿಯರ್​ಅಪ್ ಮಾಡಿಸಿದ ಕೊಹ್ಲಿ

|

Updated on: Apr 12, 2024 | 7:39 AM

ಮೈದಾನದಲ್ಲಿ ಯಾವುದಾದರೂ ಆಟಗಾರರನ್ನು ಪ್ರೇಕ್ಷರು ತೆಗಳಿದರೆ ವಿರಾಟ್ ಕೊಹ್ಲಿಗೆ ಅದು ಇಷ್ಟ ಆಗುವುದಿಲ್ಲ. ನೆರೆದಿರುವವರತ್ತ ತಿರುಗಿ ಅವರು ಚಿಯರ್​ಅಪ್​ ಮಾಡುವಂತೆ ಕೋರುತ್ತಾರೆ. ಈ ಮೊದಲು ಕೊಹ್ಲಿ ಅನೇಕ ಬಾರಿ ಇದನ್ನು ಮಾಡಿದ್ದಾರೆ. ಗುರುವಾರದ ಮ್ಯಾಚ್​ನಲ್ಲೂ ಕೊಹ್ಲಿ ಹಿಗೆಯೇ ಮಾಡಿದ್ದಾರೆ

Video: ವಾಂಖೇಡೆಯಲ್ಲಿ ಪಾಂಡ್ಯನ ತೆಗಳಿದವರ ಬಾಯಲ್ಲೇ ಚಿಯರ್​ಅಪ್ ಮಾಡಿಸಿದ ಕೊಹ್ಲಿ
ಹಾರ್ದಿಕ್-ಕೊಹ್ಲಿ
Follow us on

ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Virat Kohli) ಸದ್ಯ ಐಪಿಎಲ್​ನಲ್ಲಿ ಬ್ಯುಸಿ ಇದ್ದಾರೆ. ಹೆಚ್ಚು ರನ್ ಕಲೆ ಹಾಕಿ ಆರೆಂಜ್ ಕ್ಯಾಪ್ ಧರಿಸಿದ್ದಾರೆ. ಅವರು ಮೈದಾನದಲ್ಲಿ ಅಗ್ರೆಸ್​ ಆಗಿದ್ದರೂ ಕೆಲವೊಮ್ಮೆ ಅವರು ತೋರುವ ಸ್ವೀಟ್ ಗೆಸ್ಚರ್ ಅನೇಕರಿಗೆ ಇಷ್ಟ ಆಗುತ್ತದೆ. ಮುಂಬೈ ಇಂಡಿಯನ್ಸ್ ಹಾಗೂ ಆರ್​ಸಿಬಿ ನಡುವಿನ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಅವರು ನಡೆದುಕೊಂಡ ರೀತಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಮುಂಬೈ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರನ್ನು ತೆಗಳಿದವರಿಂದಲೇ ಚಿಯರ್ ಅಪ್ ಮಾಡಿಸಿದ್ದಾರೆ. ಇದಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಮೈದಾನದಲ್ಲಿ ಯಾವುದಾದರೂ ಆಟಗಾರರನ್ನು ಪ್ರೇಕ್ಷರು ತೆಗಳಿದರೆ ವಿರಾಟ್ ಕೊಹ್ಲಿಗೆ ಅದು ಇಷ್ಟ ಆಗುವುದಿಲ್ಲ. ನೆರೆದಿರುವವರತ್ತ ತಿರುಗಿ ಅವರು ಚಿಯರ್​ಅಪ್​ ಮಾಡುವಂತೆ ಕೋರುತ್ತಾರೆ. ಈ ಮೊದಲು ಕೊಹ್ಲಿ ಅನೇಕ ಬಾರಿ ಇದನ್ನು ಮಾಡಿದ್ದಾರೆ. ಗುರುವಾರದ (ಏಪ್ರಿಲ್ 11) ಮ್ಯಾಚ್​ನಲ್ಲೂ ಕೊಹ್ಲಿ ಹಿಗೆಯೇ ಮಾಡಿದ್ದಾರೆ. ಇದನ್ನು ನೋಡಿ ಅನೇಕರಿಗೆ ಖುಷಿ ಆಗಿದೆ. ಕೊಹ್ಲಿ ಕ್ರೀಡಾ ಸ್ಫೂರ್ತಿ ನೋಡಿ ಮುಂಬೈ ಮಂದಿಗೂ ಖುಷಿ ಆಗಿದೆ.

ಇದನ್ನೂ ಓದಿ: IPL 2024: 61, 50, 53; ಮುಂಬೈ ವಿರುದ್ಧ ಅಬ್ಬರಿಸಿದ ಆರ್​ಸಿಬಿ ಬ್ಯಾಟರ್ಸ್​..!

ಇಷ್ಟು ವರ್ಷ ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಿದ್ದರು. ಆದರೆ, ಈ ಬಾರಿ ಹಾರ್ದಿಕ್ ಪಾಂಡ್ಯಾಗೆ ಕ್ಯಾಪ್ಟನ್ಸಿ ನೀಡಲಾಗಿದೆ. ರೋಹಿತ್ ಅವರಿಂದ ನಾಯಕತ್ವವನ್ನು ಹಾರ್ದಿಕ್ ಕಿತ್ತುಕೊಂಡರು ಎಂಬುದು ಅನೇಕರ ಆರೋಪ. ಇದನ್ನು ರೋಹಿತ್ ಅಭಿಮಾನಿಗಳು ಸಹಿಸುತ್ತಿಲ್ಲ. ಹೀಗಾಗಿ, ಹಾರ್ದಿಕ್ ಮೈದಾನಕ್ಕೆ ಇಳಿದ ತಕ್ಷಣ ಅಸಮಾಧಾನ ಹೊರಹಾಕುತ್ತಾರೆ. ಹಾರ್ದಿಕ್ ವಿರುದ್ಧ ಧ್ವನಿ ಎತ್ತುತ್ತಾರೆ. ಗುರುವಾರದ ಪಂದ್ಯದಲ್ಲೂ ಹಾಗೆಯೇ ಆಗಿದೆ. ಇದು ಕೊಹ್ಲಿಗೆ ಇಷ್ಟ ಆಗಿಲ್ಲ.

ಹಾರ್ದಿಕ್ ಪಾಂಡ್ಯ ಅವರು ಬ್ಯಾಟಿಂಗ್​​ಗೆ ಇಳಿದಾಗ ಅಲ್ಲಿದ್ದವರು ಕೂಗಾಟ ಶುರು ಮಾಡಿದರು. ಹಾರ್ದಿಕ್ ಪಾಂಡ್ಯ ವಿರುದ್ಧ ಘೋಷಣೆ ಕೂಗಿದರು. ಇದನ್ನು ನೋಡಿ ವಿರಾಟ್ ಕೊಹ್ಲಿಗೆ ಬೇಸರ ಆಗಿದೆ. ‘ಅವರೂ ಇಂಡಿಯಾದವರು. ಚಿಯರ್​ಅಪ್ ಮಾಡಿ’ ಎಂದು ಸನ್ನೆ ಮಾಡಿ ತೋರಿಸಿದರು. ಇದನ್ನು ನೋಡಿ ಮೈದಾನದಲ್ಲಿದ್ದವರು, ‘ಪಾಂಡ್ಯ ಪಾಂಡ್ಯ’ ಎಂದು ಚಿಯರ್​ಅಪ್ ಮಾಡಿದರು. ಇದು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:39 am, Fri, 12 April 24