IND vs WI: ಬಯೋ ಬಬಲ್ ಮುರಿದು ಮನೆಗೆ ವಾಪಸ್ಸಾದ ಕೊಹ್ಲಿ! ಅಂತಿಮ ಟಿ20 ಪಂದ್ಯಕ್ಕೆ ಅಲಭ್ಯ

| Updated By: ಪೃಥ್ವಿಶಂಕರ

Updated on: Feb 19, 2022 | 10:41 AM

IND vs WI: ಹೌದು, ಶನಿವಾರ ಬೆಳಗ್ಗೆ ಕೊಹ್ಲಿ ಅವರ ಮನೆಗೆ ವಾಪಸ್ಸಾಗಿದ್ದಾರೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

IND vs WI: ಬಯೋ ಬಬಲ್ ಮುರಿದು ಮನೆಗೆ ವಾಪಸ್ಸಾದ ಕೊಹ್ಲಿ! ಅಂತಿಮ ಟಿ20 ಪಂದ್ಯಕ್ಕೆ ಅಲಭ್ಯ
ವಿರಾಟ್ ಕೊಹ್ಲಿ
Follow us on

2ನೇ ಟಿ20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ತಂಡದ ಗೆಲುವಿಗೆ ನೆರವಾಗಿದ್ದ ವಿರಾಟ್ ಕೊಹ್ಲಿ (Virat Kohli)ಬಯೋ ಬಬಲ್ (bio bubble)​ ಮುರಿದು ಮನೆಗೆ ವಾಪಸ್ಸಾಗಿದ್ದಾರೆ. ಭಾರತ-ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದಿಂದ ( India vs West Indies T20 Series ) ಅವರಿಗೆ ವಿಶ್ರಾಂತಿ ನೀಡಲಾಗಿದೆ. ಬಯೋ ಬಬಲ್ ಕಾರಣ ಬಿಸಿಸಿಐ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿದೆ. ಕೊಹ್ಲಿ 10 ದಿನಗಳ ಕಾಲ ವಿಶ್ರಾಂತಿ ಪಡೆದಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಈ ಹಿಂದೆ ಫೆಬ್ರವರಿ 24 ರಿಂದ ಶ್ರೀಲಂಕಾ ವಿರುದ್ಧ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಕೂಡ ಭಾಗವಹಿಸುವುದಿಲ್ಲ ಎಂದು ವರದಿಯಾಗಿದೆ. ಈ ಸರಣಿಯು ಲಕ್ನೋದಲ್ಲಿ ಪ್ರಾರಂಭವಾಗಲಿದೆ. ಇದರ ನಂತರ, ಉಳಿದ ಎರಡು ಪಂದ್ಯಗಳು ಫೆಬ್ರವರಿ 26 ಮತ್ತು 27 ರಂದು ಧರ್ಮಶಾಲಾದಲ್ಲಿ ನಡೆಯಲಿವೆ.

ಹೌದು, ಶನಿವಾರ ಬೆಳಗ್ಗೆ ಕೊಹ್ಲಿ ಅವರ ಮನೆಗೆ ವಾಪಸ್ಸಾಗಿದ್ದಾರೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಭಾರತ ಈಗಾಗಲೇ ಸರಣಿ ಗೆದ್ದಿದೆ. ಎಲ್ಲಾ ಮಾದರಿಗಳಲ್ಲಿ ಆಡುವ ಎಲ್ಲಾ ಸಾಮಾನ್ಯ ಆಟಗಾರರು ತಮ್ಮ ಕೆಲಸದ ಹೊರೆಯನ್ನು ನಿರ್ವಹಿಸಲು ಮತ್ತು ಅವರ ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳಲು ಕಾಲಕಾಲಕ್ಕೆ ಬಯೋ ಬಬಲ್‌ನಿಂದ ವಿರಾಮವನ್ನು ನೀಡಲಾಗುವುದು ಎಂದು ಬಿಸಿಸಿಐ ನಿರ್ಧರಿಸಿತ್ತು.

ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾ ಇನ್ನೂ ಪ್ರಕಟವಾಗಿಲ್ಲ

ಭಾರತ ಮತ್ತು ಶ್ರೀಲಂಕಾ ನಡುವಿನ ಸರಣಿಗೆ ಟೀಂ ಇಂಡಿಯಾ ಇನ್ನೂ ಆಯ್ಕೆಯಾಗಿಲ್ಲ. ಫೆಬ್ರವರಿ 19 ರಂದು ರಾತ್ರಿಯೊಳಗೆ ತಂಡವನ್ನು ಪ್ರಕಟಿಸಬಹುದು ಎಂದು ಊಹಿಸಲಾಗಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಅಡಿಯಲ್ಲಿ ಎರಡು ಪಂದ್ಯಗಳು ಸಹ ನಡೆಯಲಿವೆ. ಈ ಪಂದ್ಯಗಳು ಮೊಹಾಲಿ ಮತ್ತು ಬೆಂಗಳೂರಿನಲ್ಲಿ ನಡೆಯಲಿವೆ. ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯಲ್ಲಿ ಆಡಲಿದ್ದಾರೆ.

ಮುಂಬರುವ ದಿನಗಳಲ್ಲಿ ಭಾರತ ನಿರಂತರವಾಗಿ ಕ್ರಿಕೆಟ್ ಆಡಬೇಕಿದೆ. ಶ್ರೀಲಂಕಾ ಸರಣಿಯ ನಂತರ ಅಫ್ಘಾನಿಸ್ತಾನದ ಸರಣಿಯ ಸುದ್ದಿಯೂ ಇದೆ. ನಂತರ ಐಪಿಎಲ್ ಇದೆ. ಐಪಿಎಲ್ ನಂತರ, ಭಾರತ ಟೆಸ್ಟ್‌ಗಾಗಿ ಇಂಗ್ಲೆಂಡ್‌ಗೆ ಹೋಗಬೇಕಾಗಿದೆ, ನಂತರ ದಕ್ಷಿಣ ಆಫ್ರಿಕಾ ತಂಡವು ಸೀಮಿತ ಓವರ್‌ಗಳ ಸರಣಿಗಾಗಿ ಭಾರತಕ್ಕೆ ಭೇಟಿ ನೀಡಲಿದೆ. ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಿಂದ ಟಿ20 ವಿಶ್ವಕಪ್ ಮತ್ತು ಸರಣಿಯೂ ಇದೆ.

ಇದನ್ನೂ ಓದಿ:ಅರ್ಜುನ್ ಮ್ಯಾಚ್ ನೋಡಲು ನಾನು ಹೋಗಲ್ಲ.. ಹೋದರೂ ಗುಟ್ಟಾಗಿ ನೋಡಿ ಬಂದು ಬಿಡುತ್ತೇನೆ; ಸಚಿನ್ ತೆಂಡೂಲ್ಕರ್