Ind vs SL: ಲಂಕಾ ವಿರುದ್ಧದ ಟಿ20 ಸರಣಿಗೆ ಕೊಹ್ಲಿ ಅಲಭ್ಯ! ಜಡೇಜಾ, ಬುಮ್ರಾ ತಂಡಕ್ಕೆ ವಾಪಸ್

Ind vs SL: ಕ್ರಿಕ್‌ಬಜ್ ವರದಿ ಪ್ರಕಾರ ವಿರಾಟ್ ಕೊಹ್ಲಿ ಶ್ರೀಲಂಕಾ ಟಿ20 ಸರಣಿಯಲ್ಲಿ ಆಡದೇ ಇರಬಹುದು. ವಿರಾಟ್ ಕೊಹ್ಲಿ ಸರಣಿಯಲ್ಲಿ ವಿಶ್ರಾಂತಿ ಪಡೆಯಬಹುದು. ಆದರೆ, ಅವರು ಟೆಸ್ಟ್ ಸರಣಿಯಲ್ಲಿ ಆಡಲು ಸಜ್ಜಾಗಿದ್ದಾರೆ.

Ind vs SL: ಲಂಕಾ ವಿರುದ್ಧದ ಟಿ20 ಸರಣಿಗೆ ಕೊಹ್ಲಿ ಅಲಭ್ಯ! ಜಡೇಜಾ, ಬುಮ್ರಾ ತಂಡಕ್ಕೆ ವಾಪಸ್
ಜಡೇಜಾ, ಕೊಹ್ಲಿ
Follow us
TV9 Web
| Updated By: ಪೃಥ್ವಿಶಂಕರ

Updated on: Feb 18, 2022 | 4:39 PM

ಟೀಂ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅಭಿಮಾನಿಗಳಿಗೆ ಸಂತಸದ ಸುದ್ದಿಯಿದೆ. ರವೀಂದ್ರ ಜಡೇಜಾ ಅವರು ಸಂಪೂರ್ಣ ಫಿಟ್ ಆಗಿದ್ದು ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ Sri Lanka tour of India 2022) ಆಡಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಜಡೇಜಾ ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಮತ್ತು 3 ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದ್ದಾರೆ. ಜಡೇಜಾ ಕೊನೆಯದಾಗಿ ನ್ಯೂಜಿಲೆಂಡ್ ವಿರುದ್ಧ ಕಾನ್ಪುರ ಟೆಸ್ಟ್‌ನಲ್ಲಿ ಆಡಿದ್ದರು. ಗಾಯಗೊಂಡ ಜಡೇಜಾ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಮ್ಮ ಫಿಟ್‌ನೆಸ್‌ಗಾಗಿ ಕೆಲಸ ಮಾಡುತ್ತಿದ್ದರು. ಇದೀಗ ಜಡೇಜಾ ಫಿಟ್ ಆಗಿದ್ದು, ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿರುವ ಲಕ್ನೋಗೆ ಆಗಮಿಸಿದ್ದಾರೆ.

ಕ್ರಿಕ್‌ಬಜ್ ವರದಿಯ ಪ್ರಕಾರ, ಜಡೇಜಾ ಜೊತೆಗೆ ಜಸ್ಪ್ರೀತ್ ಬುಮ್ರಾ ಕೂಡ ಈ ಸರಣಿಯಲ್ಲಿ ಮರಳಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ODI ಮತ್ತು T20 ಸರಣಿಗೆ ಇಬ್ಬರೂ ಆಟಗಾರರನ್ನು ಆಯ್ಕೆ ಮಾಡಲಾಗಿಲ್ಲ. ಜಸ್ಪ್ರೀತ್ ಬುಮ್ರಾ, ಜಡೇಜಾ ಮತ್ತು ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಜಡೇಜಾ ಮೊಣಕಾಲು ಗಾಯದಿಂದ ಬಳಲುತ್ತಿದ್ದರು.

ವಿರಾಟ್ ಕೊಹ್ಲಿ ವಿರಾಮ ತೆಗೆದುಕೊಳ್ಳಲಿದ್ದಾರೆ

ಕ್ರಿಕ್‌ಬಜ್ ವರದಿ ಪ್ರಕಾರ ವಿರಾಟ್ ಕೊಹ್ಲಿ ಶ್ರೀಲಂಕಾ ಟಿ20 ಸರಣಿಯಲ್ಲಿ ಆಡದೇ ಇರಬಹುದು. ವಿರಾಟ್ ಕೊಹ್ಲಿ ಸರಣಿಯಲ್ಲಿ ವಿಶ್ರಾಂತಿ ಪಡೆಯಬಹುದು. ಆದರೆ, ಅವರು ಟೆಸ್ಟ್ ಸರಣಿಯಲ್ಲಿ ಆಡಲು ಸಜ್ಜಾಗಿದ್ದಾರೆ. ವಿರಾಟ್ ಕೊಹ್ಲಿ ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಮೊಹಾಲಿಯಲ್ಲಿ ಆಡಲಿದ್ದಾರೆ. ಒಂದು ವೇಳೆ ವಿರಾಟ್ ಮೊದಲ ಟೆಸ್ಟ್‌ನಲ್ಲಿ ಆಡದೇ ಇದ್ದರೆ ಅವರ 100ನೇ ಟೆಸ್ಟ್ ಬೆಂಗಳೂರಿನಲ್ಲಿ ನಡೆಯಬಹುದು.

ರೋಹಿತ್ ಶರ್ಮಾ ಟೆಸ್ಟ್ ನಾಯಕರಾಗಲಿದ್ದಾರೆ

ಸುದ್ದಿ ಪ್ರಕಾರ ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನವೇ ಟೀಂ ಇಂಡಿಯಾದ ನೂತನ ಟೆಸ್ಟ್ ನಾಯಕನ ಘೋಷಣೆಯಾಗಲಿದೆ. ರೋಹಿತ್ ಶರ್ಮಾ ಮುಂದಿನ ಟೆಸ್ಟ್ ನಾಯಕರಾಗುತ್ತಾರೆ ಎಂದು ನಂಬಲಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ನಾಯಕತ್ವವನ್ನು ತೊರೆದಿದ್ದರು. ಶ್ರೀಲಂಕಾ ಸರಣಿಗೆ ತಂಡದ ಆಯ್ಕೆಗೂ ಮುನ್ನ ಟೆಸ್ಟ್ ನಾಯಕನ ಆಯ್ಕೆ ನಡೆಯಲಿದ್ದು, ನಂತರ ತಂಡದೊಂದಿಗೆ ಹೊಸ ನಾಯಕನನ್ನು ಪ್ರಕಟಿಸಲಾಗುವುದು.

ಭಾರತ-ಶ್ರೀಲಂಕಾ ಸರಣಿ ವೇಳಾಪಟ್ಟಿ

ಭಾರತ ಮತ್ತು ಶ್ರೀಲಂಕಾ ನಡುವಿನ T20 ಸರಣಿಯು ಫೆಬ್ರವರಿ 24 ರಿಂದ ಪ್ರಾರಂಭವಾಗಲಿದೆ. ಮೊದಲ ಪಂದ್ಯವು ಲಕ್ನೋದಲ್ಲಿ ನಡೆಯಲಿದೆ. ಎರಡನೇ ಪಂದ್ಯ ಫೆಬ್ರವರಿ 26 ರಂದು ಧರ್ಮಶಾಲಾದಲ್ಲಿ ನಡೆಯಲಿದೆ. ಫೆಬ್ರವರಿ 27 ರಂದು ಧರ್ಮಶಾಲಾದಲ್ಲಿಯೇ ಮೂರನೇ ಟಿ20 ನಡೆಯಲಿದೆ. ಮೊದಲ ಟೆಸ್ಟ್ ಮಾರ್ಚ್ 4 ರಂದು ಮತ್ತು ಎರಡನೇ ಟೆಸ್ಟ್ ಮಾರ್ಚ್ 12 ರಂದು ನಡೆಯಲಿದೆ. ಮೊದಲ ಟೆಸ್ಟ್ ಮೊಹಾಲಿಯಲ್ಲಿ ಮತ್ತು ಎರಡನೇ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ.

ಇದನ್ನೂ ಓದಿ:Ravindra Jadeja: ಸ್ಟಾರ್ ಆಲ್​ರೌಂಡರ್ ಜಡೇಜಾ ತಂಡದಿಂದ ಔಟ್: ಆಯ್ಕೆಯಾಗದಿರಲು ಇದುವೇ ಕಾರಣ..!