NZ W vs IND W: ಕಿವೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲೂ ಸೋತ ಭಾರತ ಮಹಿಳಾ ತಂಡ; ಕೈತಪ್ಪಿದ ಸರಣಿ

TV9 Digital Desk

| Edited By: ಪೃಥ್ವಿಶಂಕರ

Updated on: Feb 18, 2022 | 4:12 PM

NZ W vs IND W: ನ್ಯೂಜಿಲೆಂಡ್ ಮಹಿಳೆಯರ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ಭಾರತ ಮಹಿಳಾ ಕ್ರಿಕೆಟ್ ತಂಡ ಸೋತಿದೆ. ಇದು ಮಾಡು ಇಲ್ಲವೆ ಮಡಿ ಹೋರಾಟವಾಗಿತ್ತು. ಏಕೆಂದರೆ, ಇದರಲ್ಲಿ ಸೋತ ನಂತರ ಈಗ 5 ಪಂದ್ಯಗಳ ಸರಣಿಯನ್ನೂ ಕಳೆದುಕೊಳ್ಳಬೇಕಾಗಿದೆ.

NZ W vs IND W: ಕಿವೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲೂ ಸೋತ ಭಾರತ ಮಹಿಳಾ ತಂಡ; ಕೈತಪ್ಪಿದ ಸರಣಿ
ಭಾರತ- ನ್ಯೂಜಿಲೆಂಡ್ ಮಹಿಳಾ ತಂಡ

ನ್ಯೂಜಿಲೆಂಡ್ ಮಹಿಳೆಯರ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ಭಾರತ ಮಹಿಳಾ ಕ್ರಿಕೆಟ್ ತಂಡ (Indian Women’s Cricket Team)ಸೋತಿದೆ. ಇದು ಮಾಡು ಇಲ್ಲವೆ ಮಡಿ ಹೋರಾಟವಾಗಿತ್ತು. ಏಕೆಂದರೆ, ಇದರಲ್ಲಿ ಸೋತ ನಂತರ ಈಗ 5 ಪಂದ್ಯಗಳ ಸರಣಿಯನ್ನೂ ಕಳೆದುಕೊಳ್ಳಬೇಕಾಗಿದೆ. ಆತಿಥೇಯ ಕಿವೀಸ್ ತಂಡ 3-0 ಮುನ್ನಡೆ ಸಾಧಿಸುವ ಮೂಲಕ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ. ಭಾರತ ಮಹಿಳಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ 5 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು. ಏಕದಿನ ಸರಣಿಯಲ್ಲಿನ ಈ ಸೋಲಿನ ನಂತರ, ಭಾರತದ ವಿಶ್ವಕಪ್ ಅಭಿಯಾನವೂ ಹಿನ್ನಡೆ ಅನುಭವಿಸಿದೆ, ಅದು ನ್ಯೂಜಿಲೆಂಡ್‌ನಲ್ಲಿಯೇ ನಡೆಯಲಿದೆ.

ಮೂರನೇ ಏಕದಿನ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ಎದುರು 280 ರನ್‌ಗಳ ಗುರಿಯನ್ನು ನೀಡಿತ್ತು, ಆತಿಥೇಯರು 49.1 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಸಾಧಿಸಿದರು. ಇದಕ್ಕೂ ಮೊದಲು ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯದಲ್ಲಿ 62 ರನ್‌ಗಳಿಂದ ಮತ್ತು ಎರಡನೇ ಏಕದಿನದಲ್ಲಿ 3 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತ್ತು.

ಭಾರತ 279 ರನ್ ಗಳಿಸಿತ್ತು

ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಉತ್ತಮ ಆರಂಭ ಪಡೆದಿತ್ತು. ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ 2019 ರ ನಂತರ ಮೊದಲ ಬಾರಿಗೆ, ಆರಂಭಿಕ ವಿಕೆಟ್‌ಗೆ 100 ರನ್‌ಗಳ ಜೊತೆಯಾಟ ಕಂಡುಬಂದಿತು. ಶಫಾಲಿ ವರ್ಮಾ 57 ಎಸೆತಗಳಲ್ಲಿ 51 ರನ್ ಗಳಿಸಿದರೆ, ಸಬನೇನಿ 61 ರನ್ ಗಳಿಸಿದರು. ಇವರಲ್ಲದೆ ಆಲ್ ರೌಂಡರ್ ದೀಪ್ತಿ ಶರ್ಮಾ ಮಧ್ಯಮ ಕ್ರಮಾಂಕದಲ್ಲಿ 69 ರನ್ ಗಳ ಅಜೇಯ ಇನ್ನಿಂಗ್ಸ್ ಆಡಿದರು. ಈ 3 ಅರ್ಧಶತಕಗಳ ನೆರವಿನಿಂದ ಭಾರತ ತಂಡ 49.3 ಓವರ್‌ಗಳಲ್ಲಿ 279 ರನ್ ಗಳಿಸಿ ಆಲೌಟ್ ಆಯಿತು.

ನ್ಯೂಜಿಲೆಂಡ್ 3 ವಿಕೆಟ್‌ಗಳ ಜಯ ಸಾಧಿಸಿತು

ಭಾರತ ನೀಡಿದ 280 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಆರಂಭದಲ್ಲೇ ಹಿನ್ನಡೆ ಕಂಡಿತು. ಅನುಭವಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಕೇವಲ 14 ರನ್ ಗಳಿಸಿದ್ದಾಗ ಆರಂಭಿಕರಿಬ್ಬರಿಗೂ ಪೆವಿಲಿಯನ್ ಹಾದಿ ತೋರಿಸಿದರು. ಆದರೆ ಇದರ ನಂತರ ಕೆರ್ ಮತ್ತು ಆಮಿ ನಡುವೆ ಉತ್ತಮ ಜೊತೆಯಾಟ ಕಂಡುಬಂದಿತು, ಇದರಲ್ಲಿ ಪಂದ್ಯವು ಕಿವೀಸ್ ತಂಡದ ಕಡೆಗೆ ತಿರುಗಿತು. ಭಾರತ 171 ರನ್‌ಗಳಿಗೆ ನ್ಯೂಜಿಲೆಂಡ್‌ನ 6 ವಿಕೆಟ್‌ಗಳನ್ನು ಕಳೆದುಕೊಂಡಾಗ, ಸ್ವಲ್ಪ ಭರವಸೆ ಇದ್ದಂತೆ ತೋರಿತು. ಆದರೆ ಲಾರೆನ್ ಡೌನ್ ಅವರ ಅಜೇಯ 64 ರನ್‌ಗಳ ನೆರವಿನಿಂದ ನ್ಯೂಜಿಲೆಂಡ್ ಗೆಲುವನ್ನು ಸ್ವೀಕರಿಸುವ ಮೂಲಕ ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.

ಇದನ್ನೂ ಓದಿ:Ranji Trophy: ಐಪಿಎಲ್ ಹರಾಜಿನಲ್ಲಿ ಕೇವಲ 20 ಲಕ್ಷಕ್ಕೆ ಬಿಕರಿ; ರಣಜಿಯಲ್ಲಿ ಶತಕ ಸಿಡಿಸಿ ಮಿಂಚಿದ ಮುಂಬೈ ಬ್ಯಾಟರ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada