Rajvardhan Hangargekar: ವಯಸ್ಸಿನ ವಂಚನೆ ಆರೋಪ; ಸಿಎಸ್​ಕೆ ಆಟಗಾರನ ವಿರುದ್ಧ ಬಿಸಿಸಿಐಗೆ ದೂರು!

U-19 World Cup: ಶಾಲೆಯ ದಾಖಲೆಗಳ ಪ್ರಕಾರ, 1 ರಿಂದ 7 ನೇ ತರಗತಿಯವರೆಗೆ ಹಂಗೇರ್‌ಗೆಕರ್ ಅವರ ಜನ್ಮ ದಿನಾಂಕ ಜನವರಿ 10, 2001. ಆದರೆ, 8 ನೇ ತರಗತಿಗೆ ಹೊಸ ಪ್ರವೇಶವನ್ನು ನೀಡುವಾಗ, ಮುಖ್ಯೋಪಾಧ್ಯಾಯರು ಅನೌಪಚಾರಿಕವಾಗಿ ರಾಜ್ಯವರ್ಧನ್ ಅವರ ಜನ್ಮ ದಿನಾಂಕವನ್ನು 10 ನವೆಂಬರ್ 2002 ಕ್ಕೆ ಬದಲಾಯಿಸಿದ್ದಾರೆ.

Rajvardhan Hangargekar: ವಯಸ್ಸಿನ ವಂಚನೆ ಆರೋಪ; ಸಿಎಸ್​ಕೆ ಆಟಗಾರನ ವಿರುದ್ಧ ಬಿಸಿಸಿಐಗೆ ದೂರು!
ರಾಜವರ್ಧನ್ ಹಂಗರ್ಗೇಕರ್
Follow us
TV9 Web
| Updated By: ಪೃಥ್ವಿಶಂಕರ

Updated on: Feb 18, 2022 | 3:24 PM

ಇತ್ತೀಚೆಗಷ್ಟೇ ಟೀಂ ಇಂಡಿಯಾಗೆ ಅಂಡರ್-19 ವಿಶ್ವಕಪ್ ( Under-19 World Cup)ಗೆದ್ದುಕೊಟ್ಟಿದ್ದ ಆಟಗಾರ ವಯೋಮಾನ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ವೇಗದ ಬೌಲರ್ ರಾಜವರ್ಧನ್ ಹಂಗರ್ಗೇಕರ್ (Rajvardhan Hangargekar)ಅವರು ತಮ್ಮ ನಿಜವಾದ ವಯಸ್ಸನ್ನು ಮುಚ್ಚಿಟ್ಟು ಅಂಡರ್-19 ವಿಶ್ವಕಪ್ ಆಡಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಹಂಗರ್ಗೆಕರ್ ಅವರ ನಿಜವಾದ ವಯಸ್ಸು 21 ವರ್ಷಗಳು ಮತ್ತು ಇದರ ಹೊರತಾಗಿಯೂ ಅವರು ಅಂಡರ್-19 ವಿಶ್ವಕಪ್ ಆಡಿದರು. ಹಂಗರ್ಗೇಕರ್ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಜೊತೆಗೆ ಟೀಮ್ ಇಂಡಿಯಾ ಇಂಗ್ಲೆಂಡ್ ಅನ್ನು ಸೋಲಿಸುವ ಮೂಲಕ ವಿಶ್ವಕಪ್ ಗೆದ್ದಿತು. ಹಂಗೇಕರ್ ತಮ್ಮ ನಿಜವಾದ ವಯಸ್ಸನ್ನು ಮರಿಮಾಚಿ ವಂಚಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ಕ್ರೀಡಾ ಮತ್ತು ಯುವಜನ ಇಲಾಖೆ ಆಯುಕ್ತ ಓಂಪ್ರಕಾಶ್ ಬಕೋರಿಯಾ ಮಾಡಿದ್ದಾರೆ. ಈ ಐಎಎಸ್ ಅಧಿಕಾರಿ ಬಿಸಿಸಿಐಗೆ ಪತ್ರ ಬರೆದಿದ್ದು, ಅದರಲ್ಲಿ ಹಂಗೇಕರ್ ವಿರುದ್ಧ ಸಾಕ್ಷ್ಯವನ್ನೂ ಕಳುಹಿಸಿದ್ದಾರೆ.

ಸಾಮ್ನಾ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಓಂಪ್ರಕಾಶ್ ಬಕೋರಿಯಾ ಅವರು ಬಿಸಿಸಿಐಗೆ ಬರೆದ ಪತ್ರದಲ್ಲಿ ಧರಾಶಿವ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಾಹುಲ್ ಗುಪ್ತಾ ಅವರು ರಾಜವರ್ಧನ್ ಹಂಗೇರ್‌ಗೆಕರ್ ಅವರ ಜನ್ಮ ದಿನಾಂಕವನ್ನು ಖಚಿತಪಡಿಸಿದ್ದಾರೆ ಎಂದು ಹೇಳಿದ್ದಾರೆ. ಅವರ ಪ್ರಕಾರ, ರಾಜ್ಯವರ್ಧನ್ ಧರಶಿವ್‌ನ ಟೆರ್ನಾ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿ. ಶಾಲೆಯ ದಾಖಲೆಗಳ ಪ್ರಕಾರ, 1 ರಿಂದ 7 ನೇ ತರಗತಿಯವರೆಗೆ ಹಂಗೇರ್‌ಗೆಕರ್ ಅವರ ಜನ್ಮ ದಿನಾಂಕ ಜನವರಿ 10, 2001. ಆದರೆ, 8ನೇ ತರಗತಿಗೆ ಹೊಸ ಪ್ರವೇಶವನ್ನು ನೀಡುವಾಗ, ಮುಖ್ಯೋಪಾಧ್ಯಾಯರು ಅನೌಪಚಾರಿಕವಾಗಿ ರಾಜ್ಯವರ್ಧನ್ ಅವರ ಜನ್ಮ ದಿನಾಂಕವನ್ನು 10 ನವೆಂಬರ್ 2002 ಕ್ಕೆ ಬದಲಾಯಿಸಿದ್ದಾರೆ. ಜನವರಿ 14 ಮತ್ತು ಫೆಬ್ರವರಿ 5 ರ ನಡುವೆ ನಡೆದ ಅಂಡರ್-19 ಕ್ರಿಕೆಟ್ ವಿಶ್ವಕಪ್‌ ನಡೆಯುವ ವೇಳೆಗೆ ರಾಜ್ಯವರ್ಧನ್ ಹಂಗೇರ್‌ಗೆಕರ್ ಅವರ ವಯಸ್ಸು 21 ವರ್ಷಗಳು ಎಂಬುದು ಸಾಭೀತಾಗಿದೆ.

ಹಂಗೇಕರ್​ಗೆ ದೊಡ್ಡ ನಷ್ಟ

ಬಿಸಿಸಿಐ ತನಿಖೆಯಲ್ಲಿ ಹಂಗೇಕರ್ ತಪ್ಪಿತಸ್ಥರೆಂದು ಕಂಡುಬಂದರೆ, ಈ ಆಟಗಾರನನ್ನು ಕ್ರಿಕೆಟ್​ನಿಂದ ಸಹ ನಿಷೇಧಿಸಬಹುದು. 2017-18ರಲ್ಲಿ ವಿಶ್ವಕಪ್ ಗೆದ್ದ ತಂಡದ ಆರಂಭಿಕ ಆಟಗಾರ ಮಂಜೋತ್ ಕಲ್ರಾ ಕೂಡ ವಯಸ್ಸಿನ ವಿವಾದದಲ್ಲಿ ಸಿಲುಕಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರು. ಹೀಗಾದರೆ ಹಂಗೇಕರ್‌ಗೆ ದೊಡ್ಡ ಹಿನ್ನಡೆಯಾಗಲಿದೆ. ಅಷ್ಟೇ ಅಲ್ಲ, ಈ ಆಟಗಾರನ ಐಪಿಎಲ್ ಒಪ್ಪಂದವೂ ರದ್ದಾಗಬಹುದು.

ಚೆನ್ನೈ ಸೂಪರ್ ಕಿಂಗ್ಸ್ ಹಂಗರ್‌ಗೇಕರ್‌ರನ್ನು ಹೊರಹಾಕುತ್ತದೆಯೇ?

ಐಪಿಎಲ್ 2022ರ ಹರಾಜಿನಲ್ಲಿಯೂ ಹಂಗರ್‌ಗೇಕರ್ ದೊಡ್ಡ ಮೊತ್ತವನ್ನು ಪಡೆದಿದ್ದಾರೆ. ಹಂಗೇಕರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 1.5 ಕೋಟಿಗೆ ಖರೀದಿಸಿದೆ. ಮುಂಬೈ ಇಂಡಿಯನ್ಸ್ ಕೂಡ ಅವರನ್ನು ಖರೀದಿಸಲು ಬಿಡ್ ಮಾಡಿತು ಆದರೆ ಅಂತಿಮವಾಗಿ ಚೆನ್ನೈ ಗೆದ್ದಿತು. ಆದರೆ, ಈಗ ಈ ವಿವಾದದ ನಂತರ ಹಂಗೇಕರ್‌ಗೆ ಏನಾಗುತ್ತದೆ ಎಂಬುದು ಕಾದು ನೋಡಬೇಕಾದ ವಿಷಯ. ವಯಸ್ಸಿನ ವಂಚನೆ ಪ್ರಕರಣದಲ್ಲಿ ಬಿಸಿಸಿಐ ಆಗಾಗ ದೊಡ್ಡ ಕ್ರಮ ಕೈಗೊಳ್ಳುತ್ತದೆ.

ಇದನ್ನೂ ಓದಿ:Ranji Trophy: ಕಳಪೆ ಫಾರ್ಮ್​ನಿಂದ ಹೊರ ಬಂದ ರಹಾನೆ; ರಣಜಿ ಟ್ರೋಫಿಯಲ್ಲಿ ಶತಕ ಬಾರಿಸಿದ ಅಜಿಂಕ್ಯ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ