RCB vs CSK: ಆರ್​ಸಿಬಿ ಗೆದ್ದ ತಕ್ಷಣ ಮೈದಾನದಲ್ಲೇ ಕಣ್ಣೀರಿಟ್ಟ ಕೊಹ್ಲಿ: ಅನುಷ್ಕಾ ಕಣ್ಣಲ್ಲೂ ಬಂತು ನೀರು

|

Updated on: May 19, 2024 | 8:12 AM

Virat Kohli Anushka Sharma Crying: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ರಣರೋಚಕ ಪಂದ್ಯದಲ್ಲಿ ಗೆದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಐಪಿಎಲ್ 2024ರ ಪ್ಲೇ ಆಫ್​ಗೆ ಲಗ್ಗೆಯಿಟ್ಟಿದೆ. ಆರ್​ಸಿಬಿ ಗೆದ್ದ ತಕ್ಷಣ ವಿರಾಟ್ ಕೊಹ್ಲಿ ಮೈದಾನದಲ್ಲೇ ಭಾವುಕಾರಿ ಕಣ್ಣೀರಿಟ್ಟರು. ಇದರ ವಿಡಿಯೋ ವೈರಲ್ ಆಗುತ್ತಿದೆ.

RCB vs CSK: ಆರ್​ಸಿಬಿ ಗೆದ್ದ ತಕ್ಷಣ ಮೈದಾನದಲ್ಲೇ ಕಣ್ಣೀರಿಟ್ಟ ಕೊಹ್ಲಿ: ಅನುಷ್ಕಾ ಕಣ್ಣಲ್ಲೂ ಬಂತು ನೀರು
Virat Kohli - Anushka Sharma Crying
Follow us on

ಐಪಿಎಲ್ 2024ರ ಪ್ಲೇಆಫ್‌ಗಳ ನಾಲ್ಕು ತಂಡಗಳನ್ನು ನಿರ್ಧರಿಸಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ಕೊನೆಯ ಗುಂಪಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸುವ ಮೂಲಕ ಪ್ಲೇಆಫ್ ಟಿಕೆಟ್ ಕಾಯ್ದಿರಿಸಿದೆ. ಪ್ಲೇಆಫ್ ತಲುಪಲು, ಆರ್​ಸಿಬಿ ಸಿಎಸ್​ಕೆ ವಿರುದ್ಧದ ಪಂದ್ಯವನ್ನು ಕನಿಷ್ಠ 18 ರನ್ ಅಥವಾ 11 ಎಸೆತಗಳಿಂದ ಗೆಲ್ಲಬೇಕಿತ್ತು. ಈ ಪಂದ್ಯವನ್ನು ಆರ್‌ಸಿಬಿ 27 ರನ್‌ಗಳಿಂದ ಗೆದ್ದುಕೊಂಡಿತು. ಮೊದಲ 7 ಪಂದ್ಯಗಳ ಬಳಿಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಆರ್​ಸಿಬಿ ಈರೀತಿ ಕಮ್​ಬ್ಯಾಕ್ ಮಾಡುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಪ್ಲೇಆಫ್ ತಲುಪಿದ ಸಂದರ್ಭ ತಂಡದ ಆಟಗಾರರು ಅದ್ಧೂರಿಯಾಗಿ ಸಂಭ್ರಮಿಸಿದರು. ಅದರಲ್ಲೂ ವಿರಾಟ್ ಕೊಹ್ಲಿ ಭಾವುಕರಾದರು.

ಸಿಎಸ್‌ಕೆಗೆ ಅರ್ಹತೆ ಪಡೆಯಲು ಕೊನೆಯ ಓವರ್‌ನಲ್ಲಿ 17 ರನ್‌ಗಳು ಬೇಕಾಗಿದ್ದವು. ಇದು ಚೆನ್ನೈ ಪರ ಆಗುತ್ತೆ ಎಂದೇ ನಂಬಲಾಗಿತ್ತು. ಯಾಕೆಂದರೆ ಕ್ರೀಸ್​ನಲ್ಲಿದ್ದಿದ್ದು ಎಂಎಸ್ ಧೋನಿ. ಅದರಂತೆ ಧೋನಿ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರು. ಆದಾಗ್ಯೂ, ಅವರು ಎರಡನೇ ಎಸೆತದಲ್ಲಿ ಯಶ್ ದಯಾಲ್‌ ಬೌಲಿಂಗ್​ನಲ್ಲಿ ಧೋನಿ (13 ಎಸೆತಗಳಲ್ಲಿ 25 ರನ್ ) ನಿರ್ಗಮಿಸಿದರು. ದಯಾಳ್ ಅದ್ಭುತ ಕಮ್​ಬ್ಯಾಕ್ ಮಾಡಿದರು. ಆರ್​ಸಿಬಿ ಊಹಿಸಲಾದ ರೀತಿಯಲ್ಲಿ ಗೆಲುವು ಸಾಧಿಸಿತು. ಏತನ್ಮಧ್ಯೆ, ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆದ ನಂತರ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ವೈರಲ್ ಆಗಿದೆ.

ಪ್ಲೇ ಆಫ್​ಗೇರಿದ ಖುಷಿ: ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಡುಪ್ಲೆಸಿಸ್ ಏನು ಹೇಳಿದ್ರು ನೋಡಿ

ಗೆದ್ದ ತಕ್ಷಣ ವಿರಾಟ್ ಮೈದಾನದಲ್ಲಿ ಓಡಿ ಬಂದು ಆಟಗಾರರನ್ನು ತಬ್ಬಿಕೊಂಡು ಸಂಭ್ರಮಿಸಿದರು. ಬಳಿಕ ಒಬ್ಬರೇ ನಿಂತು ಕ್ಯಾಪ್ ತೆಗೆದು ಅಳುವುದು ಕಂಡುಬಂತು. ಇವರನ್ನು ನೋಡಿ ಅತ್ತ ಪ್ರೇಕ್ಷಕ ಗ್ಯಾಲರಿಯಲ್ಲಿ ಕೂತಿದ್ದ ಅನುಷ್ಕಾ ಶರ್ಮಾ ಕೂಡ ಕಣ್ಣೀರು ಹಾಕಿದರು. ಇಬ್ಬರ ಭಾವನೆಗಳೂ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಕಣ್ಣೀರಿಟ್ಟ ವಿಡಿಯೋ:

 

 

ಕೊನೆಯ ಓವರ್‌ನಲ್ಲಿ ಚೆನ್ನೈಗೆ ಪ್ಲೇ ಆಫ್ ಅರ್ಹತೆ ಪಡೆಯಲು 17 ರನ್‌ಗಳ ಅಗತ್ಯವಿತ್ತು. ಯಶ್ ದಯಾಳ್ ಅವರು ಮೊದಲ ಎಸೆತದಲ್ಲಿ ಸಿಕ್ಸರ್ ಕೊಟ್ಟರೆ, ಎರಡನೇ ಎಸೆತದಲ್ಲಿ ಧೋನಿಯನ್ನು ಔಟ್ ಮಾಡಿದರು. ಇದಾದ ನಂತರ ಶಾರ್ದೂಲ್ ಮತ್ತು ಜಡೇಜಾ ಅವರಿಗೆ ಮುಂದಿನ ನಾಲ್ಕು ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಲು ಸಾಧ್ಯವಾಯಿತಷ್ಟೆ. ಸಿಎಸ್​ಕೆ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ ಟೂರ್ನಿಯಿಂದ ನಿರ್ಗಮಿಸಿತು. ಆರ್​ಸಿಬಿ ಪರ ನಾಯಕ ಫಾಫ್ ಡುಪ್ಲೆಸಿಸ್ 54 ರನ್, ವಿರಾಟ್ ಕೊಹ್ಲಿ 47 ಹಾಗೂ ರಜತ್ ಪಾಟಿದರ್ 41 ರನ್ ಗಳಿಸಿದ ಪರಿಣಾಮ ಐದು ವಿಕೆಟ್‌ಗೆ 218 ರನ್ ಗಳಿಸಿತು.

ರಣರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!

ಆರ್‌ಸಿಬಿ ತಂಡ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಸದ್ಯ ಫಾಫ್ ಪಡೆ ಫೈನಲ್ ತಲುಪಲು ಎರಡು ಪಂದ್ಯಗಳನ್ನು ಆಡಬೇಕಾಗುತ್ತದೆ. ಎಲಿಮಿನೇಟರ್​ನಲ್ಲಿ ಆರ್​ಸಿಬಿ ಮೇ 22 ರಂದು ರಾಜಸ್ಥಾನ್ ರಾಯಲ್ಸ್ ಅಥವಾ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮತ್ತೊಂದು ಅಗ್ನಿಪರೀಕ್ಷೆಗೆ ಇಳಿಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ