Virat Kohli: ನಾಯಕತ್ವ ತ್ಯಜಿಸಲು ಇದುವೇ ಕಾರಣ ಎಂದ ವಿರಾಟ್ ಕೊಹ್ಲಿ
T20 World Cup 2021: ಪ್ರಸ್ತುತ ಟಿ20 ಕ್ರಿಕೆಟ್ನ ಟಾಪ್ ರನ್ ಸ್ಕೋರರ್ ಆಗಿರುವ ವಿರಾಟ್ ಕೊಹ್ಲಿ, ಮತ್ತೆ ಹಳೆಯ ಫಾರ್ಮ್ಗೆ ಮರಳುವ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಟಿ20ಯಲ್ಲಿ ಕೊಹ್ಲಿ ಅಬ್ಬರ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
ಭಾರತ ಟಿ20 ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ (Virat Kohli) ವಿದಾಯ ಹೇಳಿದ್ದಾರೆ. ಹೀಗೆ ದಿಢೀರಣೆ ರಾಜೀನಾಮೆ ಘೋಷಿಸಲು ಕಾರಣವೇನು ಎಂಬುದನ್ನು ಮತ್ತೊಮ್ಮೆ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ನಮೀಬಿಯಾ ವಿರುದ್ದದ ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ಟೀಮ್ ಇಂಡಿಯಾವನ್ನು ಮುನ್ನಡೆಸಿರುವುದು ಹೆಮ್ಮೆಯ ವಿಷಯ. ಆದರೆ ಕೆಲವೊಂದು ವಿಷಯದಲ್ಲಿ ನಾವು ಸರಿಯಾದ ದೂರದೃಷ್ಟಿ ಹೊಂದಿರಬೇಕಾಗುತ್ತದೆ. ಅದರಂತೆ ಇದು ಸರಿಯಾದ ಸಮಯ ಎಂದು ನಾನು ಅಂದುಕೊಂಡಿದ್ದೀನಿ. ಏಕೆಂದರೆ ಕೆಲಸ ಹೊರೆಯಿಂದಾಗಿ ಬ್ಯಾಟಿಂಗ್ ಕಡೆ ಗಮನ ಕೊಡಲಾಗುತ್ತಿಲ್ಲ. ಆರೇಳು ವರ್ಷದಿಂದ ನನ್ನಲ್ಲಿ ಕೆಲಸದ ಒತ್ತಡ ಹೆಚ್ಚಾಗಿದೆ. ಇದೀಗ ಟೀಮ್ ಇಂಡಿಯಾ ಬಲಿಷ್ಠ ತಂಡವಾಗಿದೆ. ಇಂತಹ ಸಮಯದಲ್ಲಿ ನಾನು ನಾಯಕತ್ವಕ್ಕೆ ರಾಜೀನಾಮೆ ನೀಡಿದರೂ ಅದು ತಂಡದ ಮೇಲೆ ಪರಿಣಾಮ ಬೀರುವುದಿಲ್ಲ. ಹೀಗಾಗಿ ಇದುವೇ ಸರಿಯಾದ ಸಮಯ ಎಂದು ಭಾವಿಸಿದೆ.
ಅದರಂತೆ ನಾಯಕತ್ವ ರಾಜೀನಾಮೆ ನೀಡಿದ್ದೇನೆ. ಆ ಮೂಲಕ ಮುಂದಿನ ದಿನಗಳಲ್ಲಿ ಬ್ಯಾಟಿಂಗ್ನತ್ತ ಹೆಚ್ಚು ಗಮನಹರಿಸಲಿದ್ದೇನೆ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಇದೇ ವೇಳೆ ಮುಂದಿನ ದಿನಗಳಲ್ಲೂ ನಾನು ಆಕ್ರಮಣಕಾರಿ ಆಟವನ್ನೇ ಆಡಲಿದ್ದೇನೆ ಎಂದು ತಿಳಿಸಿದ ಕೊಹ್ಲಿ, ಯಾವಾಗ ನಾನು ಅಗ್ರೆಸಿವ್ ಆಟವನ್ನು ನಿಲ್ಲಿಸುತ್ತೇನೆ ಅಂದು ನಾನು ಕ್ರಿಕೆಟ್ ಆಡುವುದನ್ನು ಬಿಡುತ್ತೇನೆ ಎಂದರು. ಈ ಮೂಲಕ ನಾಯಕನಲ್ಲದಿದ್ದರೂ ಮುಂದಿನ ದಿನಗಳಲ್ಲಿ ಮೈದಾನದಲ್ಲಿ ತನ್ನ ಆಕ್ರಮಣಕಾರಿ ಆಟವನ್ನು ಅಭಿಮಾನಿಗಳು ನೋಡಬಹುದು ಎಂಬುದನ್ನು ಕೊಹ್ಲಿ ತಿಳಿಸಿದರು.
ಪ್ರಸ್ತುತ ಟಿ20 ಕ್ರಿಕೆಟ್ನ ಟಾಪ್ ರನ್ ಸ್ಕೋರರ್ ಆಗಿರುವ ವಿರಾಟ್ ಕೊಹ್ಲಿ, ಮತ್ತೆ ಹಳೆಯ ಫಾರ್ಮ್ಗೆ ಮರಳುವ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಟಿ20ಯಲ್ಲಿ ಕೊಹ್ಲಿ ಅಬ್ಬರ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ
ಇದನ್ನೂ ಓದಿ: India T20 squad: ಟೀಮ್ ಇಂಡಿಯಾಗೆ ಹೊಸ ನಾಯಕ: ಯುವ ಪಡೆಯನ್ನು ಪ್ರಕಟಿಸಿದ ಬಿಸಿಸಿಐ
(Virat Kohli explains why he quit India’s T20I captaincy)