T20 World Cup 2022: ಬ್ರಿಸ್ಬೇನ್ನಲ್ಲಿ ನಡೆದ ಮೊದಲ ಅಭ್ಯಾಸದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ (Team India) 6 ರನ್ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿಗಳೆಂದರೆ ಮೊಹಮ್ಮದ್ ಶಮಿ (Mohammed Shami) ಹಾಗೂ ವಿರಾಟ್ ಕೊಹ್ಲಿ (Virat Kohli). ಇಲ್ಲಿ ಶಮಿ ಬೌಲಿಂಗ್ ಮೂಲಕ ಮಿಂಚಿದರೆ, ಕಿಂಗ್ ಕೊಹ್ಲಿ ಅದ್ಭುತ ಫೀಲ್ಡಿಂಗ್ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದರು. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್ ಟೀಮ್ ಇಂಡಿಯಾ ಭರ್ಜರಿ ಆರಂಭ ಒದಗಿಸಿದ್ದರು. ಒಂದೆಡೆ ರೋಹಿತ್ ಶರ್ಮಾ ರನ್ ಖಾತೆ ತೆರೆಯುವ ಮೂಲಕ ಕೆಎಲ್ಆರ್ ಅಬ್ಬರಿಸಲಾರಂಭಿಸಿದರು. ಪರಿಣಾಮ ಮೊದಲ ವಿಕೆಟ್ಗೆ 78 ರನ್ಗಳ ಜೊತೆಯಾಟ ಮೂಡಿಬಂತು.
ಈ ಹಂತದಲ್ಲಿ ರೋಹಿತ್ ಶರ್ಮಾ (15) ಔಟಾದರೆ, ಆ ಬಳಿಕ ಬಂದ ವಿರಾಟ್ ಕೊಹ್ಲಿ (19) ಹೆಚ್ಚು ಹೊತ್ತು ನಿಲ್ಲಲಿಲ್ಲ. ಇನ್ನು ಹಾರ್ದಿಕ್ ಪಾಂಡ್ಯ ಕೂಡ 2 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದ್ದರು. ಮತ್ತೊಂದೆಡೆ ಕೆಎಲ್ ರಾಹುಲ್ 33 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್ನೊಂದಿಗೆ 57 ರನ್ ಬಾರಿಸಿ ಮಿಂಚಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ 33 ಎಸೆತಗಳಲ್ಲಿ 6 ಪೋರ್ ಹಾಗೂ 1 ಸಿಕ್ಸ್ನೊಂದಿಗೆ ಅರ್ಧಶತಕ ಬಾರಿಸಿದರು. ಪರಿಣಾಮ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿತು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾಗೆ ನಾಯಕ ಆರೋನ್ ಫಿಂಚ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಆರಂಭದಿಂದಲೇ ಟೀಮ್ ಇಂಡಿಯಾ ಬೌಲರುಗಳನ್ನು ದಂಡಿಸಲಾರಂಭಿಸಿದ ಫಿಂಚ್ ಆಸ್ಟ್ರೇಲಿಯಾ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಮತ್ತೊಂದು ತುದಿಯಿಂದ ಫಿಂಚ್ಗೆ ಉತ್ತಮ ಸಾಥ್ ದೊರಕಿರಲಿಲ್ಲ.
ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಸ್ಟೀವ್ ಸ್ಮಿತ್ (11), ಗ್ಲೆನ್ ಮ್ಯಾಕ್ಸ್ವೆಲ್ (23), ಮಾರ್ಕಸ್ ಸ್ಟೊಯಿನಿಸ್ (7) ಕೈ ಕೊಟ್ಟಿದ್ದರು. ಪರಿಣಾಮ ಕೊನೆಯ 2 ಓವರ್ಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು 16 ರನ್ಗಳ ಅವಶ್ಯಕತೆಯಿತ್ತು.
ಈ ವೇಳೆಯೂ ಆರೋನ್ ಫಿಂಚ್ ಕ್ರೀಸ್ನಲ್ಲಿದ್ದರು. ಹೀಗಾಗಿ ಆಸೀಸ್ ತಂಡ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ ಮೊದಲ ಎಸೆತದಲ್ಲೇ ಫಿಂಚ್ (79) ವಿಕೆಟ್ ಕಬಳಿಸುವ ಮೂಲಕ ಹರ್ಷಲ್ ಪಟೇಲ್ ಯಶಸ್ಸು ತಂದುಕೊಟ್ಟರು.
ಇದಾಗ್ಯೂ ಟಿಮ್ ಡೇವಿಡ್ ಕ್ರೀಸ್ನಲ್ಲಿದ್ದ ಕಾರಣ ಅಂತಿಮ ಓವರ್ಗಳ ವೇಳೆ ಬಿಗ್ ಹಿಟ್ ಅನ್ನು ನಿರೀಕ್ಷಿಸಲಾಗಿತ್ತು. ಆದರೆ ಈ ವೇಳೆ ವಿರಾಟ್ ಕೊಹ್ಲಿ ಮಾಡಿದ ಅತ್ಯಾಧ್ಬುತ ಫೀಲ್ಡಿಂಗ್ನಿಂದ ಟಿಮ್ ಡೇವಿಡ್ ಹೊರನಡೆಯಬೇಕಾಯಿತು. 19ನೇ ಓವರ್ನ 2ನೇ ಎಸೆತದಲ್ಲಿ ಜೋಶ್ ಇಂಗ್ಲಿಸ್ ಫ್ರಂಟ್ನಲ್ಲೇ ಬಾರಿಸಿ ಟಿಮ್ ಡೇವಿಡ್ಗೆ ಸ್ಟ್ರೈಕ್ ನೀಡುವ ಯತ್ನ ಮಾಡಿದ್ದರು. ಆದರೆ ಅಲ್ಲೇ ಫೀಲ್ಡಿಂಗ್ನಲ್ಲಿ ವಿರಾಟ್ ಕೊಹ್ಲಿ ಚಕ್ಕನೆ ಚೆಂಡನ್ನು ಹಿಡಿದು ವಿಕೆಟ್ ನೇರವಾಗಿ ಎಸೆಯುವ ಮೂಲಕ ಅದ್ಭುತ ರನೌಟ್ ಮಾಡಿದರು. ಈ ಮೂಲಕ ಟೀಮ್ ಇಂಡಿಯಾಗೆ ಮತ್ತೊಂದು ಯಶಸ್ಸು ತಂದುಕೊಟ್ಟರು.
Fielding Masterclass ? @imVkohli#ViratKohli #INDvsAUS pic.twitter.com/CMbrs0dIUD
— HemaPriya07 (@attitudegirl___) October 17, 2022
ಅಂತಿಮವಾಗಿ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು 11 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ದಾಳಿಗಿಳಿದ ಮೊಹಮ್ಮದ್ ಶಮಿ ಅವರ ಮೊದಲೆರಡು ಎಸೆತಗಳಲ್ಲಿ ಪ್ಯಾಟ್ ಕಮಿನ್ಸ್ ಎರೆಡೆರಡು ರನ್ ಓಡಿದರು. 3ನೇ ಎಸೆತದಲ್ಲಿ ಭರ್ಜರಿ ಹೊಡೆತ ಬಾರಿಸಿದ ಕಮಿನ್ಸ್ ಚೆಂಡು ಸಿಕ್ಸ್ ಆಗುವ ನಿರೀಕ್ಷೆಯಲ್ಲಿದ್ದರು.
ಆದರೆ ಲಾಂಗ್ ಆನ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ವಿರಾಟ್ ಕೊಹ್ಲಿ ಅತ್ಯಾದ್ಭುತವಾಗಿ ಜಿಗಿಯುವ ಮೂಲಕ ಒಂದೇ ಕೈಯಲ್ಲಿ ಚೆಂಡನ್ನು ಹಿಡಿದರು. ಈ ಅಧ್ಭುತ ಕ್ಯಾಚ್ ಫಲವಾಗಿ ಆಸ್ಟ್ರೇಲಿಯಾದ ಸಿಕ್ಸ್ ಕೈತಪ್ಪಿತು. ಅಷ್ಟೇ ಅಲ್ಲದೆ ಡೇಂಜರಸ್ ಪ್ಯಾಟ್ ಕಮಿನ್ಸ್ ಕೂಡ ಔಟಾದರು. ಇದೀಗ ವಿರಾಟ್ ಕೊಹ್ಲಿಯ ಈ ಅತ್ಯಾಧ್ಭುತ ಫೀಲ್ಡಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
fielding efforts??
What an effort in the field by Virat Kohli, he sets a very high standard when it comes to fitness and the results are evident in his fielding.
King Kohli for a resson?❤️?#T20WorldCup #ViratKohli? pic.twitter.com/PAmsPQfXj5
— bruse_banner (@vk_vd11) October 17, 2022
ಅಲ್ಲದೆ ಮೈದಾನದಲ್ಲಿ ಫೀಲ್ಡಿಂಗ್ ಮೂಲಕವೇ ಪರಾಕ್ರಮ ಮೆರೆದ ಕಿಂಗ್ ಕೊಹ್ಲಿಯ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.