AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 15 ವರ್ಷ ಪೂರೈಸಿದ ವಿರಾಟ್: ಅಂದಿನ ಈ ದಿನ ಕೊಹ್ಲಿ ಗಳಿಸಿದ ರನ್ ಎಷ್ಟು?

Virat Kohli Completes 15 Years In International Cricket: ಚೊಚ್ಚಲ ಏಕದಿನ ಪಂದ್ಯದಲ್ಲಿ ವಿರಾಟ್ ಅಂತಹ ವಿಶೇಷ ಪ್ರದರ್ಶನ ತೋರದ ಕಾರಣ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಆದರೆ, ನಂತರ ನಡೆದಿದ್ದು ಇತಿಹಾಸ. ಹಂತಹಂತವಾಗಿ ಫಾರ್ಮ್​ ಕಂಡುಕೊಂಡ ಕೊಹ್ಲಿ ಕೇವಲ ಭಾರತ ಮಾತ್ರವಲ್ಲ, ವಿಶ್ವದ ಕ್ರಿಕೆಟ್ ಪ್ರೇಮಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು.

Virat Kohli: ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 15 ವರ್ಷ ಪೂರೈಸಿದ ವಿರಾಟ್: ಅಂದಿನ ಈ ದಿನ ಕೊಹ್ಲಿ ಗಳಿಸಿದ ರನ್ ಎಷ್ಟು?
Virat Kohli
Vinay Bhat
|

Updated on: Aug 18, 2023 | 10:43 AM

Share

ಭಾರತದ ಸ್ಟಾರ್ ಕ್ರಿಕೆಟಿಗ, ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಇಂದಿಗೆ 15 ವರ್ಷಗಳನ್ನು ಪೂರೈಸಿದ್ದಾರೆ. 2008, ಆಗಸ್ಟ್ 18 ರಂದು ಇದೇ ದಿನ ವಿರಾಟ್ ಅಂತರರಾಷ್ಟ್ರೀಯ ಕ್ರಿಕೆಟ್‌ ಲೋಕಕ್ಕೆ ಕಾಲಿಟ್ಟಿದ್ದರು. ವಿರಾಟ್ ತಮ್ಮ ಮೊದಲ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಡಂಬುಲ್ಲಾ ಮೈದಾನದಲ್ಲಿ ಆಡಿದ್ದರು. ಆಗ ಈ ಹುಡುಗ ಕ್ರಿಕೆಟ್‌ ಲೋಕವನ್ನು ಆಳಿ ದೊಡ್ಡ ಸ್ಟಾರ್ ಆಗುತ್ತಾನೆ ಎಂದು ಯಾರೂ ಭಾವಿಸಿರಲಿಲ್ಲ.

ಚೊಚ್ಚಲ ಏಕದಿನ ಪಂದ್ಯದಲ್ಲಿ ವಿರಾಟ್ ಅಂತಹ ವಿಶೇಷ ಪ್ರದರ್ಶನ ತೋರದ ಕಾರಣ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಆದರೆ, ನಂತರ ನಡೆದಿದ್ದು ಇತಿಹಾಸ. ಹಂತಹಂತವಾಗಿ ಫಾರ್ಮ್​ ಕಂಡುಕೊಂಡ ಕೊಹ್ಲಿ ಕೇವಲ ಭಾರತ ಮಾತ್ರವಲ್ಲ, ವಿಶ್ವದ ಕ್ರಿಕೆಟ್ ಪ್ರೇಮಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು. ಕ್ರಿಕೆಟ್​ ಲೋಕವನ್ನು ಅಕ್ಷರಶಃ ಆಳುತ್ತಿರುವ ಕೊಹ್ಲಿ ಇಂದು ಸಾಧನೆಯ ಶಿಖರವೇರಿದ್ದಾರೆ.

ಇದನ್ನೂ ಓದಿ
Image
ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI ಹೇಗಿರಲಿದೆ?: ಇಲ್ಲಿದೆ ನೋಡಿ
Image
ಭಾರತ-ಐರ್ಲೆಂಡ್ ಮೊದಲ ಟಿ20 ಪಂದ್ಯ ನಡೆಯಲಿರುವ ಡಬ್ಲಿನ್ ಪಿಚ್ ಹೇಗಿದೆ?: ಯಾರಿಗೆ ಸಹಕಾರಿ?
Image
ಇಂದು ಭಾರತ-ಐರ್ಲೆಂಡ್ ಮೊದಲ ಟಿ20 ಫೈಟ್: ಬುಮ್ರಾ ಮೇಲೆ ಎಲ್ಲರ ಕಣ್ಣು
Image
ಅಭಿಮಾನಿಗಳಿಂದಲೇ ವಿಶೇಷ ದಾಖಲೆ ಬರೆದ CSK

ಮೊದಲ ಪಂದ್ಯದಲ್ಲಿ ಗೌತಮ್ ಗಂಭೀರ್ ಜೊತೆ ಓಪನಿಂಗ್ ಮಾಡಿದ್ದ ಕೊಹ್ಲಿ, ಆಗ ಕೇವಲ 12 ರನ್ ಗಳಿಸಿ ಔಟಾದರು. ಆ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳಿಂದ ಸೋತಿತ್ತು. ಅಂದು ಏಕದಿನ ಕ್ರಿಕೆಟ್​ನಲ್ಲಿ 12 ರನ್​ಗಳಿಂದ ಆರಂಭವಾದ ವಿರಾಟ್ ಕೊಹ್ಲಿ ಪಯಣ ಇಂದು 25,000 ರನ್ ಗಡಿ ದಾಟಿದೆ. ಈ ಬಾರಿ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದ್ದು ಕೊಹ್ಲಿಯ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ.

ವಿರಾಟ್ ಕೊಹ್ಲಿ ಪದಾರ್ಪಣೆ ಪಂದ್ಯದ ವಿಡಿಯೋ:

ವಿರಾಟ್ ಕೊಹ್ಲಿ 2008 ರಿಂದ ಒಟ್ಟು 275 ODI ಪಂದ್ಯಗಳನ್ನು ಆಡಿದ್ದಾರೆ. 57.32 ರ ಸರಾಸರಿಯಲ್ಲಿ 12898 ರನ್ ಗಳಿಸಿದ್ದಾರೆ. ಇದರಲ್ಲಿ 46 ಶತಕಗಳನ್ನು ಒಳಗೊಂಡಿದೆ. ಬೌಲಿಂಗ್​ನಲ್ಲೂ ವಿರಾಟ್ 4 ವಿಕೆಟ್ ಪಡೆದಿದ್ದಾರೆ. ಟೆಸ್ಟ್​ನಲ್ಲಿ ಆಡಿದ 111 ಪಂದ್ಯಗಳಲ್ಲಿ 8676 ರನ್ ಗಳಿಸಿದ್ದು, 29 ಶತಕ, ಏಳು ದ್ವಿಶತಕ ಮತ್ತು 29 ಅರ್ಧಶತಕ ಸಿಡಿಸಿದ್ದಾರೆ. 254 ಗರಿಷ್ಠ ಸ್ಕೋರ್ ಆಗಿದೆ. 115 ಅಂತರರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿದ್ದು 4008 ರನ್ ಬಾರಿಸಿದ್ದಾರೆ. ಇದರಲ್ಲಿ 37 ಅರ್ಧಶತಕ ಮತ್ತು 1 ಶತಕ ಬಂದಿದೆ.

ವಿರಾಟ್ ಟೀಮ್ ಇಂಡಿಯಾದಲ್ಲಿ ಆರಂಭಿಕರಾಗಿ ವೃತ್ತಿ ಜೀವನ ಆರಂಭಿಸಿದರು. ಆದರೆ ಈಗ 3ನೇ ಸ್ಥಾನದಲ್ಲಿ ಆಡುತ್ತಿದ್ದಾರೆ. ಅದು ತಂಡದಲ್ಲಿ ಅವರ ಸೆಟ್ ಸ್ಥಾನ. ವಿರಾಟ್ ಇದುವರೆಗೆ 76 ಅಂತರರಾಷ್ಟ್ರೀಯ ಶತಕಗಳನ್ನು ಗಳಿಸಿದ್ದಾರೆ. ಕಳೆದ 14 ವರ್ಷಗಳಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಯೂ ಕೊಹ್ಲಿಯದ್ದಾಗಿದೆ.

ಏಕದಿನ ವಿಶ್ವಕಪ್​ನಲ್ಲಿ ಸೆಮಿಫೈನಲ್​ಗೇರುವ 4 ತಂಡಗಳನ್ನು ಹೆಸರಿಸಿದ ಎಬಿಡಿ

ನಾಯಕನಾಗಿ, ವಿರಾಟ್ ಕೊಹ್ಲಿ ಟೆಸ್ಟ್‌ನಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. 68 ಟೆಸ್ಟ್‌ಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, 40 ಗೆದ್ದರೆ, 17 ರಲ್ಲಿ ಸೋಲು ಮತ್ತು 11 ಡ್ರಾ ಆಗಿದೆ. ಇದು ಶೇಕಡಾ 58.82 ಗೆಲುವಿನ ಶೇಕಡಾವಾರು ಎಂದು ಹೇಳಬಹುದು. ಭಾರತ ಟೆಸ್ಟ್ ತಂಡವನ್ನು ಕಟ್ಟುವಲ್ಲಿ ಮುಖ್ಯ ಪಾತ್ರವಹಿಸಿದ ಇವರು, ಇಂಗ್ಲೆಂಡ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಸ್ಮರಣೀಯ ಟೆಸ್ಟ್ ಪಂದ್ಯ/ಸರಣಿ ಗೆಲ್ಲಲು ಸಹಾಯ ಮಾಡದರು. ಅಲ್ಲದೆ ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್ ರಂತಹ ಆಟಗಾರರು ಪರಿಚಯಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​