- Kannada News Photo gallery Cricket photos CSK becomes First IPL team to reach 10M followers on Twitter
ಅಭಿಮಾನಿಗಳಿಂದಲೇ ವಿಶೇಷ ದಾಖಲೆ ಬರೆದ CSK
Chennai Super Kings: ಚೆನ್ನೈ ಸೂಪರ್ ಕಿಂಗ್ಸ್ (CSK) ಟ್ವಿಟರ್‌ನಲ್ಲಿ 10 ಮಿಲಿಯನ್ ಫಾಲೋವರ್ಸ್ (1 ಕೋಟಿ) ಹೊಂದಿರುವ ಮೊದಲ IPL ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಟ್ವಿಟರ್ನ ಅತ್ಯಂತ ಜನಪ್ರಿಯ ಐಪಿಎಲ್ ತಂಡವಾಗಿ ಸಿಎಸ್ಕೆ ಹೊರಹೊಮ್ಮಿದೆ.
Updated on: Aug 17, 2023 | 10:58 PM

ಐಪಿಎಲ್ನ ಅತ್ಯಂತ ಯಶಸ್ವಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಂದಲೇ ವಿಶೇಷ ದಾಖಲೆ ಬರೆದಿದೆ. ಅದು ಕೂಡ ಅತೀ ಹೆಚ್ಚು ಹಿಂಬಾಲಕರನ್ನು ಪಡೆಯುವ ಮೂಲಕ ಎಂಬುದು ವಿಶೇಷ.

ಹೌದು, ಚೆನ್ನೈ ಸೂಪರ್ ಕಿಂಗ್ಸ್ (CSK) ಟ್ವಿಟರ್‌ನಲ್ಲಿ 10 ಮಿಲಿಯನ್ ಫಾಲೋವರ್ಸ್ (1 ಕೋಟಿ) ಹೊಂದಿರುವ ಮೊದಲ IPL ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಟ್ವಿಟರ್ನ ಅತ್ಯಂತ ಜನಪ್ರಿಯ ಐಪಿಎಲ್ ತಂಡವಾಗಿ ಸಿಎಸ್ಕೆ ಹೊರಹೊಮ್ಮಿದೆ.

ಈ ವಿಶೇಷ ಸಾಧನೆಯನ್ನು ಸಿಎಸ್ಕೆ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದು, 1 ಕೋಟಿಯ ಅಭಿಮಾನಿಗಳಿಗಾಗಿ ವಿಶೇಷ ವಿಡಿಯೋವನ್ನು ಅಪ್ಲೋಡ್ ಮಾಡಿದೆ.

ಇನ್ನು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವುದು ಮುಂಬೈ ಇಂಡಿಯನ್ಸ್. ಮುಂಬೈ ತಂಡದ ಅಧಿಕೃತ ಟ್ವಿಟರ್ ಖಾತೆಯಲ್ಲಿ 8.2 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಹಾಗೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆರ್ಸಿಬಿ ಟ್ವಿಟರ್ಅನ್ನು ಫಾಲೋ ಮಾಡುತ್ತಿರುವವರ ಒಟ್ಟು ಸಂಖ್ಯೆ 6.8 ಮಿಲಿಯನ್.

ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ (5.2 ಮಿಲಿಯನ್) ಮತ್ತು ಸನ್ ರೈಸರ್ಸ್ ಹೈದರಾಬಾದ್ (3.2 ಮಿಲಿಯನ್) ಟ್ವಿಟರ್ ಖಾತೆಗಳು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.

ಪಂಜಾಬ್ ಕಿಂಗ್ಸ್ (2.9 ಮಿಲಿಯನ್), ರಾಜಸ್ಥಾನ್ ರಾಯಲ್ಸ್ (2.7 ಮಿಲಿಯನ್), ಡೆಲ್ಲಿ ಕ್ಯಾಪಿಟಲ್ಸ್ (2.5 ಮಿಲಿಯನ್), ಲಕ್ನೋ ಸೂಪರ್ ಜೈಂಟ್ಸ್ (760.4K) ಮತ್ತು ಗುಜರಾತ್ ಟೈಟಾನ್ಸ್ (522.7K) ಟ್ವಿಟರ್ ಫಾಲೋವರ್ಸ್ ಅನ್ನು ಹೊಂದಿದೆ.
