Virat Kohli: ಮೂರನೇ ಟೆಸ್ಟ್​ಗೆ ಕೊಹ್ಲಿ ಲಭ್ಯತೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಚೇತೇಶ್ವರ್ ಪೂಜಾರ

| Updated By: Vinay Bhat

Updated on: Jan 06, 2022 | 11:57 AM

Cheteshwar Pujara, South Africa vs India: ಭಾರತ - ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್​ನ ಮೂರನೇ ದಿನದಾಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ ಇಂಜುರಿ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ್ದಾರೆ. ಮೂರನೇ ಟೆಸ್ಟ್​ನಲ್ಲಿ ಆಡ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

Virat Kohli: ಮೂರನೇ ಟೆಸ್ಟ್​ಗೆ ಕೊಹ್ಲಿ ಲಭ್ಯತೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಚೇತೇಶ್ವರ್ ಪೂಜಾರ
Pujara and Virat Kohli IND vs SA
Follow us on

ಭಾರತ ಸದ್ಯ ದಕ್ಷಿಣ ಆಫ್ರಿಕಾ (India vs South Africa 2nd Test) ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದು ಸೋಲಿನ ಸುಳಿಯಲ್ಲಿದೆ. ಜೋಹಾನ್ಸ್​ಬರ್ಗ್​ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಗೆಲುವಿಗೆ ಆಫ್ರಿಕಾದ 8 ವಿಕೆಟ್​ಗಳು ಬೇಕಾಗಿವೆ. ಆದರೆ, ಹರಿಣಗಳಿಗೆ ಗೆಲ್ಲಲು ಕೇವಲ 122 ರನ್​ಗಳ ಅವಶ್ಯಕತೆ ಮಾತ್ರ ಇದೆ. ಹೀಗಾಗಿ ನಾಲ್ಕನೇ ದಿನದಾಟ ಕುತೂಹಲ ಕೆರಳಿಸಿದ್ದು, ವೇಗಿಗಳ ಮೇಲೆ ಭಾರತದ ಸೋಲು-ಗೆಲುವು ನಿಂತಿದೆ. ಎರಡನೇ ಟೆಸ್ಟ್​ಗೆ ತಂಡದ ಖಾಯಂ ನಾಯಕ ವಿರಾಟ್ ಕೊಹ್ಲಿ (Virat Kohli) ಅಲಭ್ಯರಿದ್ದಾರೆ. ಬೆನ್ನುಮೂಳೆಯ ಸೆಳೆತದ ಸಮಸ್ಯೆಯಿಂದ ಬಳಲುತ್ತಿರುವ ಕೊಹ್ಲಿ ವಿಶ್ರಾಂತಿಯಲ್ಲಿದ್ದಾರೆ. ಕೆಎಲ್ ರಾಹುಲ್ (KL Rahul) ಕ್ಯಾಪ್ಟನ್ ಜವಾಬ್ದಾರಿ ಹೊತ್ತಿದ್ದರೂ ಕೊಹ್ಲಿ ಅಲಭ್ಯತೆ ಎದ್ದು ಕಾಣುತ್ತಿದೆ. ಹೀಗಿರುವಾಗ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ (Cheteshwar Pujara) ಮುಂದಿನ ಮೂರನೇ ಟೆಸ್ಟ್​ಗೆ ಕೊಹ್ಲಿ ಲಭ್ಯತೆ ಬಗ್ಗೆ ಅಪ್ಡೇಟ್ ನೀಡಿದ್ದಾರೆ.

ಮೂರನೇ ದಿನದಾಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೂಜಾರ, ವಿರಾಟ್ ಕೊಹ್ಲಿ ಇಂಜುರಿ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ್ದಾರೆ. “ವಿರಾಟ್ ಕೊಹ್ಲಿ ಗುಣಮುಖರಾಗುತ್ತಿದ್ದಾರೆ. ಮೂರನೇ ಟೆಸ್ಟ್ ಆರಂಭದ ವೇಳೆಗೆ ಅವರು ಸಂಪೂರ್ಣ ಫಿಟ್ ಆಗುವ ಭರವಸೆ ನನಗಿದೆ” ಎಂದು ಪೂಜಾರ ಹೇಳಿದ್ದಾರೆ. ಕೊಹ್ಲಿ ಬ್ಯಾಟ್​ನಿಂದ ಸೆಂಚುರಿ ಬರಬಹುದು ಎಂಬ ಕಾರಣಕ್ಕೆ ಅಭಿಮಾನಿಗಳು ಇವರ ಆಗಮನಕ್ಕೆ ಕಾದುಕುಳಿತಿದ್ದಾರೆ. ಒಂದುವೇಳೆ ಕೊಹ್ಲಿ ಮೂರನೇ ಟೆಸ್ಟ್​ನಲ್ಲಿ ಕಣಕ್ಕಿಳಿದರೆ ಹನುಮಾ ವಿಹಾರಿ ಆಡುವ ಬಳಗದಿಂದ ಹಿಂದೆ ಸರಿಯಬೇಕಾಗುತ್ತದೆ. ಪೂಜಾರ ಅಥವಾ ರಹಾನೆ ಅವರನ್ನು ಕೈಬಿಡುವುದು ಅನುಮಾನ.

ಯಾಕಂದ್ರೆ ಸತತ ಕಳಪೆ ಆಡಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದ ಚೇತೇಶ್ವರ್‌ ಪೂಜಾರ ಮತ್ತು ಅಜಿಂಕ್ಯ ರಹಾನೆ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ತಂಡಕ್ಕೆ ಆಧಾರವಾದರು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. 3ನೇ ವಿಕೆಟಿಗೆ 144 ಎಸೆತಗಳಿಂದ 111 ರನ್‌ ಪೇರಿಸಿದರು. ಈ ಬಗ್ಗೆಯೂ ಪೂಜಾರ ಮಾತನಾಡಿದ್ದು, ನನಗೆ ಮತ್ತು ರಹಾನೆಗೆ ಫಾರ್ಮ್ ಎಂಬುದು ತಾತ್ಕಾಲಿಕ, ಅನುಭವ ಎಂಬುದು ಶಾಶ್ವತ ಎಂದು ಹೇಳಿದ್ದಾರೆ. “ನಾನು ಮತ್ತು ರಹಾನೆ ಆತ್ಮವಿಶ್ವಾಸವುಳ್ಳ ಆಟಗಾರರು. ನಾವಿಬ್ಬರು ಒಂದು ಪಂದ್ಯಕ್ಕಾಗಿ ಸಾಕಷ್ಟು ಶ್ರಮವಹಿಸುತ್ತೇವೆ. ಈ ಹಿಂದೆ ತಂಡಕ್ಕೆ ಆಧಾರವಾಗಿದ್ದೇವೆ. ಮ್ಯಾನೇಜ್ಮೆಂಟ್ ನಮ್ಮ ಮೇಲೆ ನಂಬಿಕೆ ಇಟ್ಟಿದೆ,” ಎಂದು ಹೇಳಿದ್ದಾರೆ.

ಏಕದಿನ ಸರಣಿಗೆ ಕೊಹ್ಲಿ ಡೌಟ್:

ಹೌದು, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ವಿರಾಟ್ ಕೊಹ್ಲಿ ಲಭ್ಯತೆ ಅನುಮಾನ ಎಂದು ಹೇಳಲಾಗಿದೆ. ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹಿಂದೆ ಸರಿಯಲು ಬಿಸಿಸಿಐ ಬಳಿ ಕೊಹ್ಲಿ ಮನವಿ ಮಾಡಿದ್ದಾರೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ. ಕುಟುಂಬದ ಜೊತೆ ಸಮಯ ಕಳೆಯಲು ನಿರ್ಧಾರ ಮಾಡಿರುವುದರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ನಾನು ಹಿಂದೆ ಸರಿಯುತ್ತಿದ್ದೇನೆ. ಇದಕ್ಕೆ ನಿಮ್ಮ ಅನುಮತಿಗಾಗಿ ಕಾಯುತ್ತಿದ್ದೇನೆ ಎಂದು ಕೊಹ್ಲಿ ಬಿಸಿಸಿಐ ಬಳಿ ಮನವಿ ಮಾಡಿದ್ದಾರಂತೆ.

ICC Women’s World Cup 2022: ಭಾರತ ಮಹಿಳಾ ತಂಡ ಪ್ರಕಟ: ಬಿಸಿಸಿಐಯಿಂದ ಶಾಕಿಂಗ್ ಆಯ್ಕೆ, ಮಿಥಾಲಿ ರಾಜ್ ನಾಯಕಿ

Happy birthday Kapil Dev: 63ನೇ ವರ್ಷಕ್ಕೆ ಕಾಲಿಟ್ಟ ಕಪಿಲ್ ದೇವ್: ಭಾರತದ ವಿಶ್ವಕಪ್ ಹೀರೋ ಬಗ್ಗೆ ನಿಮಗೆಷ್ಟು ಗೊತ್ತು?