ICC Women’s World Cup 2022: ಭಾರತ ಮಹಿಳಾ ತಂಡ ಪ್ರಕಟ: ಬಿಸಿಸಿಐಯಿಂದ ಶಾಕಿಂಗ್ ಆಯ್ಕೆ, ಮಿಥಾಲಿ ರಾಜ್ ನಾಯಕಿ
Indian Womens squad for ICC Womens World Cup 2022: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022ಕ್ಕೆ ಭಾರತ ಮಹಿಳಾ ತಂಡವನ್ನು ಬಿಸಿಸಿಐ ಪ್ರಕಟ ಮಾಡಿದೆ. ಮಿಥಾಲಿ ರಾಜ್ ನಾಯಕಿಯಾಗಿದ್ದಾರೆ. ಹರ್ಮನ್ ಪ್ರೀತ್ ಕೌರ್ ಉಪ ನಾಯಕಿಯಾದರೆ, ಸ್ಟಾರ್ ಬ್ಯಾಟರ್ ಜಮಿಯಾ ರೊಡ್ರಿಗಸ್ ಮತ್ತು ಸ್ಟಾರ್ ಬೌಲರ್ ಶಿಖಾ ಪಾಂಡೆ ಅವರನ್ನು ಕೈಬಿಡಲಾಗಿದೆ.
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022ಕ್ಕೆ (ICC Womens World Cup 2022) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗುರುವಾರ ಭಾರತ ಮಹಿಳಾ ತಂಡದ 15 ಆಟಗಾರರ ಹೆಸರನ್ನು ಪ್ರಕಟ ಮಾಡಿದೆ. ಬಿಸಿಸಿಐಯಿಂದ ಕೆಲ ಅಚ್ಚರಿ ಆಯ್ಕೆ ನಡೆದಿದ್ದು, ಮಿಥಾಲಿ ರಾಜ್ (Mithali Raj) ನಾಯಕಿಯಾಗಿದ್ದಾರೆ. ಹರ್ಮನ್ ಪ್ರೀತ್ ಕೌರ್ (Harmanpreet Kaur) ಉಪ ನಾಯಕಿಯಾದರೆ, ಸ್ಟಾರ್ ಬ್ಯಾಟರ್ ಜಮಿಯಾ ರೊಡ್ರಿಗಸ್ ಮತ್ತು ಸ್ಟಾರ್ ಬೌಲರ್ ಶಿಖಾ ಪಾಂಡೆ ಅವರನ್ನು ಕೈಬಿಟ್ಟಿದ್ದು ಅಚ್ಚರಿ ಮೂಡಿಸಿದೆ. ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ಗೆ ಸ್ಥಾನ ನೀಡಲಾಗಿದೆ. ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಇದೇ ಮಾರ್ಚ್ 4 ರಿಂದ ಆರಂಭವಾಗಲಿದ್ದು ಏಪ್ರಿಲ್ 3 ರ ವರೆಗೆ ನ್ಯೂಜಿಲೆಂಡ್ನಲ್ಲಿ ನಡೆಯಲಿದೆ. ವಿಶ್ವಕಪ್ ತಂಡದ ಜೊತೆ ಬಿಸಿಸಿಐ ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೂ ತಂಡವನ್ನು ಪ್ರಕಟಿಸಿದೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ವಿಶ್ವಕಪ್ 2022ಕ್ಕೆ ಭಾರತ ತಂಡ:
ಮಿಥಾಲಿ ರಾಜ್ (ನಾಯಕಿ), ಹರ್ಮನ್ ಪ್ರೀತ್ ಕೌರ್ (ಉಪ ನಾಯಕಿ), ಸ್ಮೃತಿ ಮಂದಾನ, ಶಫಾಲಿ ವರ್ಮಾ, ಯಸ್ತಿಕಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣ, ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಾಕರ್, ಮೆಘನಾ ಸಿಂಗ್, ರೇಣುಕಾ ಸಿಂಗ್ ಥಾಕೂರ್, ತನಿಯಾ ಭಾಟಿಯ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ವಾಡ್, ಪೂನಂ.
ಸ್ಟ್ಯಾಂಡ್ಬೈ ಆಟಗಾರರು: ಎಸ್. ಮೇಘನಾ, ಏಖ್ತಾ ಬಿಸ್ತ್, ಸಿಮ್ರಾನ್ ದಿಲ್ ಬಹದ್ದೂರ್.
ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯಕ್ಕೆ ಭಾರತ ತಂಡ:
ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪ ನಾಯಕಿ), ಶಫಾಲಿ ವರ್ಮಾ, ಯಸ್ತಿಕಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣ, ಪೂಜಾ ವಸ್ತ್ರಾಕರ್, ಮೆಘನಾ ಸಿಂಗ್, ರೇಣುಕಾ ಸಿಂಗ್ ಥಾಕೂರ್, ತನಿಯಾ ಭಾಟಿಯ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ವಾಡ್, ಪೂನಂ, ಎಸ್. ಮೇಘನಾ, ಏಖ್ತಾ ಬಿಸ್ತ್, ಸಿಮ್ರಾನ್ ದಿಲ್ ಬಹದ್ದೂರ್.
? NEWS ?: India Women’s squad for ICC Women’s World Cup 2022 and New Zealand series announced. #TeamIndia #CWC22 #NZvIND
More Details ?https://t.co/qdI6A8NBSH pic.twitter.com/rOZ8X7yRbV
— BCCI Women (@BCCIWomen) January 6, 2022
ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಾರ್ಚ್ 6 ರಂದು ಎದುರಿಸಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಎದುರಾಗಲಿವೆ. 8 ತಂಡಗಳು ಸ್ಪರ್ಧಿಸುತ್ತಿರುವ ಟೂರ್ನಿಯಲ್ಲಿ 31 ಪಂದ್ಯಗಳು 31 ದಿನಗಳ ಕಾಲ ನಡೆಯಲಿವೆ. ಆಕ್ಲೆಂಡ್, ಕ್ರೈಸ್ಟ್‌ಚರ್ಚ್, ಡುನೆಡಿನ್, ಹ್ಯಾಮಿಲ್ಟನ್, ತೌರಂಗ ಹಾಗೂ ವೆಲ್ಲಿಂಗ್ಟನ್‌ನಲ್ಲಿ ಪಂದ್ಯಗಳು ನಡೆಯಲಿವೆ.
ಟೂರ್ನಿಗೆ ಈಗಾಗಲೇ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಹಾಗೂ ಭಾರತ ತಂಡಗಳು 2017-20ರ ನಿರ್ವಹಣೆ ಆಧಾರದ ಮೇಲೆ ನೇರ ಅರ್ಹತೆ ಗಿಟ್ಟಿಸಿಕೊಂಡಿವೆ. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ತಂಡಗಳು ರ‌್ಯಾಂಕಿಂಗ್ ಆಧಾರದ ಮೇಲೆ ಅರ್ಹತೆ ಗಿಟ್ಟಿಸಿಕೊಂಡಿವೆ. ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದ್ದು, ಲೀಗ್ ಹಂತದಲ್ಲಿ ಎಲ್ಲ 8 ತಂಡಗಳು ಪರಸ್ಪರ ಎದುರಾಗಲಿವೆ. ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೇರಲಿವೆ. ಏಪ್ರಿಲ್ 3ರಂದು ಫೈನಲ್ ಪಂದ್ಯ ನಡೆಯಲಿದೆ.
ಭಾರತದ ವೇಳಾಪಟ್ಟಿ
ಮಾ.6, ಭಾರತ vs ಪಾಕಿಸ್ತಾನ
ಮಾ.10, ಭಾರತ vs ನ್ಯೂಜಿಲೆಂಡ್
ಮಾ.12, ಭಾರತ vs ವೆಸ್ಟ್ ಇಂಡೀಸ್
ಮಾ.16, ಭಾರತ vs ಇಂಗ್ಲೆಂಡ್
ಮಾ.19, ಭಾರತ vs ಆಸ್ಟ್ರೇಲಿಯಾ
ಮಾ.22, ಭಾರತ vs ಬಾಂಗ್ಲಾದೇಶ
ಮಾ.27, ಭಾರತ vs ದಕ್ಷಿಣ ಆಫ್ರಿಕಾ
Published On - 10:53 am, Thu, 6 January 22