Happy birthday Kapil Dev: 63ನೇ ವರ್ಷಕ್ಕೆ ಕಾಲಿಟ್ಟ ಕಪಿಲ್ ದೇವ್: ಭಾರತದ ವಿಶ್ವಕಪ್ ಹೀರೋ ಬಗ್ಗೆ ನಿಮಗೆಷ್ಟು ಗೊತ್ತು?
Kapil Dev Birthday: ಕಪಿಲ್ ದೇವ್ ಜನ್ಮ ದಿನಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸೇರಿದಂತೆ ಹಲವು ಆಟಗಾರರು, ಅಭಿಮಾನಿಗಳು ಮತ್ತು ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರುತ್ತಿದ್ದಾರೆ.
ಭಾರತೀಯ ಕ್ರಿಕೆಟ್ ತಂಡಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ, ಟೀಮ್ ಇಂಡಿಯಾದ (Team India) ಶ್ರೇಷ್ಠ ಆಲ್ರೌಂಡರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಹರಿಯಾಣ ಹರಿಕೇನ್ ಖ್ಯಾತಿಯ ಕಪಿಲ್ ದೇವ್ಗೆ (Kapil Dev Birthday) ಇಂದು ಹುಟ್ಟುಹಬ್ಬದ ಸಂಭ್ರಮ. ವಿಶ್ವಕಪ್ ಹೀರೋ ಇದೀಗ 63ನೇ ವಸಂತಕ್ಕೆ ಪದಾರ್ಪಣೆ ಮಾಡಿದ್ದಾರೆ. ಕಪಿಲ್ ಜನ್ಮ ದಿನಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸೇರಿದಂತೆ ಹಲವು ಆಟಗಾರರು, ಅಭಿಮಾನಿಗಳು ಮತ್ತು ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರುತ್ತಿದ್ದಾರೆ. ಜನವರಿ 6,1959 ರಂದು ಚಂಡೀಗಢದಲ್ಲಿ ಜನಿಸಿದ ಕಪಿಲ್ ದೇವ್ ತಮ್ಮ 19ನೇ ವಯಸ್ಸಿನಲ್ಲಿ ಭಾರತದ 25ನೇ ಕ್ರಿಕೆಟರ್ ಆಗಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅದರಲ್ಲೂ ಪಾಕಿಸ್ತಾನದ ವಿರುದ್ಧವೇ ಮೊದಲ ಏಕದಿನ ಪಂದ್ಯ ಆಡಿರುವುದು ವಿಶೇಷ.
ಅಂದು ದಿಗ್ಗಜ ಕ್ರಿಕೆಟಿಗರನ್ನ ಹೊಂದಿದ್ದ ವೆಸ್ಟ್ ಇಂಡೀಸ್ ತಂಡವನ್ನು ವಿಶ್ವಕಪ್ನಲ್ಲಿ ಫೈನಲ್ನಲ್ಲಿ ಸೋಲಿಸಿದ್ದು ಸ್ಮರಣೀಯ. ಇದರ ಕ್ರೆಡಿಟ್ ಕಪಿಲ್ ದೇವ್ಗೆ ಸಲ್ಲುತ್ತದೆ. ವಿಂಡೀಸ್ ಕ್ರಿಕೆಟ್‌ನಲ್ಲಿ ಅಧಿಪತ್ಯ ಸಾಧಿಸಿದ್ಧ ಕಾಲ ಅದು. ಇಷ್ಟೇ ಅಲ್ಲ ವಿಂಡೀಸ್ ಸತತ 2 ಬಾರಿ ವಿಶ್ವಕಪ್ ಗೆದ್ದು ಇತಿಹಾಸ ರಚಿಸಿತ್ತು. ಆದರೆ ಭಾರತ ಕ್ರಿಕೆಟ್‌ನಲ್ಲಿ ಅಂಬೆಗಾಲಿಡುತ್ತಿತ್ತು. 1983ರಲ್ಲಿ ಕಪಿಲ್ ದೇವ್ ನಾಯಕತ್ವದ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ತಂಡವನ್ನ ಮಣಿಸಿ ಚೊಚ್ಚಲ ವಿಶ್ವಕಪ್ ಗೆದ್ದು ಸಂಭ್ರಮಿಸಿತು.
Happy Birthday to our 1983 World Cup winning captain and an ever present inspiration for all⭐?
Wishing this cricketing legend the same joy and smile that he always gave us ???#OneFamily #MumbaiIndians @therealkapildev @ICC pic.twitter.com/Lm4Ke6eII7
— Mumbai Indians (@mipaltan) January 6, 2022
1983ರ ವಿಶ್ವಕಪ್ ಟೂರ್ನಿಯ ಪ್ರಮುಖ ರೂವಾರಿ ನಾಯಕ ಕಪಿಲ್ ದೇವ್. ತಮ್ಮ ಅಲ್ರೌಂಡರ್ ಪದರ್ಶನ ಹಾಗೂ ತಂಡದ ಸಂಘಟಿತ ಪ್ರದರ್ಶನದಿಂದ ಭಾರತ ಕ್ರಿಕೆಟ್ ತಂಡ ಇತಿಹಾಸ ರಚಿಸಿತು. ಇತ್ತೀಚೆಗಷ್ಟೆ ಈ ಬಗ್ಗೆ ಬಾಲಿವುಡ್ನಲ್ಲಿ “1983” ಹೆಸರಿನ ಸಿನಿಮಾ ಕೂಡ ಬಿಡುಗಡೆ ಆಯಿತು. ಇದು ಬಾಕ್ಸ್ ಆಫೀಸ್ನಲ್ಲಿ ಕೊಳ್ಳೆ ಹೊಡೆಯುತ್ತಿದೆ.
1978ರಲ್ಲಿ ಪಾಕಿಸ್ತಾನ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕಪಿಲ್ ದೇವ್ ಭಾರತ ಕಂಡ ಅತ್ಯದ್ಬುತ ಆಟಗಾರ. ಕಪಿಲ್ ದೇವ್ ಭಾರತ ತಂಡವನ್ನು ಬೆಳೆಸಿದ್ದು ಮಾತ್ರವಲ್ಲದೇ ವೈಯಕ್ತಿಕವಾಗಿಯೂ ಒಬ್ಬ ಅದ್ಭುತ ಆಲ್ರೌಂಡರ್ ಆಗಿದ್ದರು. ಇವರು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿದ್ದರು. ಹಾಗಾಗಿ ಅವರು ವಿಶ್ವ ಶ್ರೇಷ್ಠ ಆಲ್ರೌಂಡರ್ಗಳ ಪಟ್ಟಿಯಲ್ಲಿ ಇನ್ನೂ ಮೊದಲ ಸ್ಥಾನದಲ್ಲೇ ಇದ್ದಾರೆ.
ಕಪಿಲ್ ದೇವ್ ಭಾರತದ ಪರ 131 ಟೆಸ್ಟ್ ಪಂದ್ಯಗಳನ್ನಾಡಿದ್ದು, 5,248 ರನ್ ಹಾಗೂ 434 ವಿಕೆಟ್, 225 ಏಕದಿನ ಪಂದ್ಯಗಳಿಂದ 3,783 ರನ್ ಹಾಗೂ 253 ವಿಕೆಟ್ ಪಡೆದಿದ್ದರು. 1994 ರಿಂದ 2000ರವರೆಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ದಾಖಲೆ ಕಪಿಲ್ ದೇವ್ ಹೆಸರಿಲ್ಲೇ ಇತ್ತು. ವೆಸ್ಟ್ ಇಂಡೀಸ್‌ನ ಕರ್ಟ್ಲಿ ವಾಲ್ಷ್ 2000ರಲ್ಲಿ ಈ ದಾಖಲೆ ಮುರಿದಿದ್ದರು. ಇವರು ಇಂಜುರಿಯಲ್ಲದೆ 131 ಟೆಸ್ಟ್ ಪಂದ್ಯಗಳನ್ನು ಆಡಿದ್ದರು ಎಂಬುದು ಅಚ್ಚರಿ ಮೂಡಿಸುತ್ತೆ.
Pro Kabaddi: ಪ್ರೊ ಕಬಡ್ಡಿಯಲ್ಲಿ ಮತ್ತೊಂದು ರೋಚಕ ಕದನ: 36-35 ಅಂಕಗಳಿಂದ ಗೆದ್ದ ದಬಂಗ್ ಡೆಲ್ಲಿ
(Kapil Dev Birthday Indian cricket great Kapil Dev is celebrating his 63rd birthday today)