ವಿರಾಟ್ ಕೊಹ್ಲಿಯ (Virat Kohli) 200ನೇ ಐಪಿಎಲ್ (IPL 2021) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 9 ವಿಕೆಟ್ ಗಳಿಂದ ಹೀನಾಯ ಸೋಲು ಅನುಭವಿಸಿದೆ. ಅಬುಧಾಬಿಯ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ದದ ಪಂದ್ಯದಲ್ಲಿ ಕೊಹ್ಲಿ ಪಡೆ ಕೇವಲ 92 ರನ್ಗಳಿಗೆ ಆಲೌಟ್ ಆಯಿತು. ಇತ್ತ ಸುಲಭ ಗುರಿ ಪಡೆದ ಕೆಕೆಆರ್ ಕೇವಲ 10 ಓವರ್‌ಗಳಲ್ಲಿ ಗುರಿ ಮುಟ್ಟುವ ಮೂಲಕ ಭರ್ಜರಿ ಗೆಲುವು ದಾಖಲಿಸಿತು. ಕಾಕತಾಳೀಯ ಎಂಬಂತೆ ಆರ್ಸಿಬಿ (RCB) ತಂಡದ ಈ ಸೋಲು 13 ವರ್ಷಗಳ ಹಳೆಯ ಹೀನಾಯ ಸೋಲನ್ನು ನೆನಪಿಸುವಂತಿದೆ. ಏಕೆಂದರೆ ಆರ್ಸಿಬಿ ತಂಡದ ಎರಡು ಅತ್ಯಂತ ಹೀನಾಯ ಸೋಲು ಕಂಡು ಬಂದಿದ್ದು ಕೆಕೆಆರ್ ವಿರುದ್ದ. ಆ ಎರಡು ಪಂದ್ಯಗಳು ಕೂಡ ಕೊಹ್ಲಿ ಪಾಲಿಗೆ ಮಹತ್ವದ್ದಾಗಿತ್ತು ಎಂಬುದು ಇಲ್ಲಿ ವಿಶೇಷ.
ಹೌದು, 2008 ರಲ್ಲಿ ಚೊಚ್ಚಲ ಐಪಿಎಲ್ನ ಮೊದಲ ಪಂದ್ಯದಲ್ಲಿ ಆರ್ಸಿಬಿ ಹಾಗೂ ಕೆಕೆಆರ್ ಮುಖಾಮುಖಿಯಾಗಿತ್ತು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆರ್ಸಿಬಿ ಪರ ಪದಾರ್ಪಣೆ ಮಾಡಿದ್ದರು. ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್ ಬ್ರೆಂಡನ್ ಮೆಕಲಂ ಅವರ ಅಜೇಯ 158 ರನ್ಗಳ ಶತಕದೊಂದಿಗೆ 222 ರನ್ ಬಾರಿಸಿತ್ತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್ಸಿಬಿ ಕೇವಲ 82 ರನ್ಗಳಿಗೆ ಆಲೌಟ್ ಆಗಿ ಹೀನಾಯ ಸೋಲನುಭವಿಸಿತು. ಅಂದರೆ ಅಂದು ಆರ್ಸಿಬಿ ಸೋತಿದ್ದು 140 ರನ್ಗಳ ಬೃಹತ್ ಅಂತರದಿಂದ. ಇದು ರನ್ಗಳ ಅಂತರದ ಆರ್ಸಿಬಿ ತಂಡದ ಹೀನಾಯ ಸೋಲು ಎಂಬ ದಾಖಲೆ ಉಳಿಸಿಕೊಂಡಿದೆ. ಇನ್ನು ಐಪಿಎಲ್ನ ಚೊಚ್ಚಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗಳಿಸಿದ್ದು ಕೇವಲ 1 ರನ್ ಮಾತ್ರ.
ಇದೀಗ ಕೆಕೆಆರ್ ವಿರುದ್ದ ಕಣಕ್ಕಿಳಿಯುವ ಮೂಲಕ ವಿರಾಟ್ ಕೊಹ್ಲಿ 200 ಪಂದ್ಯಗಳನ್ನು ಪೂರೈಸಿದ್ದಾರೆ. ತಮ್ಮ ಮಹತ್ವದ ಪಂದ್ಯದಲ್ಲಿ ಕೇವಲ 5 ರನ್ಗೆ ವಿಕೆಟ್ ಒಪ್ಪಿಸಿದ್ದಾರೆ. ಇನ್ನು 92 ರನ್ಗಳಿಗೆ ಆರ್ಸಿಬಿಯನ್ನು ಆಲೌಟ್ ಮಾಡಿ ಕೆಕೆಆರ್ 10 ಓವರ್ನಲ್ಲಿ 1 ವಿಕೆಟ್ ನಷ್ಟಕ್ಕೆ ಗುರಿಮುಟ್ಟಿದೆ. ಈ ಮೂಲಕ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಅಷ್ಟೇ ಅಲ್ಲದೆ 60 ಎಸೆತಗಳು ಬಾಕಿಯಿರುವಾಗಲೇ ಆರ್ಸಿಬಿ ತಂಡವನ್ನು ಬಗ್ಗು ಬಡಿಯುವ ಮೂಲಕ ಕೆಕೆಆರ್ ಗೆಲುವು ದಾಖಲಿಸಿರುವುದು ವಿಶೇಷ. ಏಕೆಂದರೆ ಬಾಲ್ಗಳ ಅಂತರದಲ್ಲಿ ಇದು ಆರ್ಸಿಬಿ ಪಾಲಿನ ಅತ್ಯಂತ ಹೀನಾಯ ಸೋಲು. ಅಂದರೆ ಕಾಕತಾಳೀಯ ಎಂಬಂತೆ ಕೊಹ್ಲಿಯ ಪಾಲಿನ ಮಹತ್ವದ ಎರಡು ಪಂದ್ಯಗಳಲ್ಲೇ ಆರ್ಸಿಬಿ ಐಪಿಎಲ್ನ ಅತ್ಯಂತ ಹೀನಾಯ ಸೋಲನ್ನು ಅನುಭವಿಸಿರುವುದು ಇಲ್ಲಿ ವಿಶೇಷ.
ಇದನ್ನೂ ಓದಿ: Virat Kohli: ನಮಗೆ ಸೋಲುಣಿಸಿದ ಆತನೇ ನಮ್ಮ ಪ್ರಮುಖ ಅಸ್ತ್ರ..!
ಇದನ್ನೂ ಓದಿ: Virat Kohli: ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ
ಇದನ್ನೂ ಓದಿ: 90 ಕಿ.ಮೀ ಮೈಲೇಜ್ ನೀಡುವ ಕಡಿಮೆ ಬೆಲೆಯ ಬೈಕ್ಗಳ ಪಟ್ಟಿ ಇಲ್ಲಿದೆ
ಇದನ್ನೂ ಓದಿ: IPL 2021: ಪ್ಲೇ ಆಫ್ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ ಗೌತಮ್ ಗಂಭೀರ್
(Virat Kohli IPL debut KKR biggest win and Kohli 200 match RCB biggest defeat)