Virat Kohli Retirement: ಶಾಕಿಂಗ್: ಇಂದು ಆರ್​ಸಿಬಿ ಟ್ರೋಫಿ ಗೆದ್ದರೆ ಐಪಿಎಲ್​ಗೂ ವಿರಾಟ್ ಕೊಹ್ಲಿ ನಿವೃತ್ತಿ?

RCB vs PBKS, IPL 2025 Final: ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಫೈನಲ್ ತಲುಪಿದೆ. ಇಂದು ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪ್ರಶಸ್ತಿಗಾಗಿ ಸೆಣೆಸಾಟ ನಡೆಲಿದೆ. ಈ ಬಾರಿ ಕೊಹ್ಲಿ ತಮ್ಮ ಮೊದಲ ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಸಾಧ್ಯತೆಯಿದೆ. ಈಗ ಐಪಿಎಲ್ ಗೆದ್ದ ನಂತರ ಕೊಹ್ಲಿ ಇದರಿಂದಲೂ ನಿವೃತ್ತರಾಗಬಹುದೇ ಎಂಬ ಪ್ರಶ್ನೆಯೂ ಉದ್ಭವಿಸಿದೆ.

Virat Kohli Retirement: ಶಾಕಿಂಗ್: ಇಂದು ಆರ್​ಸಿಬಿ ಟ್ರೋಫಿ ಗೆದ್ದರೆ ಐಪಿಎಲ್​ಗೂ ವಿರಾಟ್ ಕೊಹ್ಲಿ ನಿವೃತ್ತಿ?
Virat Kohli (18)

Updated on: Jun 03, 2025 | 10:08 AM

ಬೆಂಗಳೂರು (ಜೂ. 03): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ರನ್ ಮೆಷಿನ್ ವಿರಾಟ್ ಕೊಹ್ಲಿ (Virat Kohli) ಕಳೆದ ತಿಂಗಳು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದರು. ಅವರ ನಿರ್ಧಾರ ಇಡೀ ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿತು. ಯಾಕೆಂದರೆ ಅಳಿವಿನಂಚಿನಲ್ಲಿದ್ದ ಟೆಸ್ಟ್ ಕ್ರಿಕೆಟ್​ಗೆ ತಮ್ಮ ಸ್ಟೈಲಿಶ್ ಬ್ಯಾಟ್​ನಿಂದ ಜೀವ ತುಂಬಿದವರು ವಿರಾಟ್. ಕೊಹ್ಲಿ ಈಗಾಗಲೇ ಟೆಸ್ಟ್ ಜೊತೆಗೆ ಅಂತರಾಷ್ಟ್ರೀಯ ಟಿ20 ಸ್ವರೂಪದಿಂದ ನಿವೃತ್ತರಾಗಿದ್ದಾರೆ. ಸದ್ಯ ಭಾರತಕ್ಕಾಗಿ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಇವರು ಆಡಲಿದ್ದಾರೆ. ಅದೇ ಸಮಯದಲ್ಲಿ, ಕೊಹ್ಲಿ ಟೆಸ್ಟ್ ನಿವೃತ್ತಿಯ ನಂತರ ಈಗ ಐಪಿಎಲ್​ಗೂ ವಿದಾಯ ಹೇಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಫೈನಲ್ ತಲುಪಿದೆ. ಇಂದು ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪ್ರಶಸ್ತಿಗಾಗಿ ಸೆಣೆಸಾಟ ನಡೆಲಿದೆ. ಈ ಬಾರಿ ಕೊಹ್ಲಿ ತಮ್ಮ ಮೊದಲ ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಸಾಧ್ಯತೆಯಿದೆ. ಈಗ ಐಪಿಎಲ್ ಗೆದ್ದ ನಂತರ ಕೊಹ್ಲಿ ಇದರಿಂದಲೂ ನಿವೃತ್ತರಾಗಬಹುದೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಐಪಿಎಲ್ ಅಧ್ಯಕ್ಷ ಅರುಣ್ ಧುಮಿಲ್ ಕಿಂಗ್ ಕೊಹ್ಲಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.

ಕೊಹ್ಲಿ ಬಗ್ಗೆ ಅರುಣ್ ಧುಮಿಲ್ ಹೇಳಿದ್ದೇನು?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಧ್ಯಕ್ಷ ಅರುಣ್ ಧುಮಾಲ್, ವಿರಾಟ್ ಕೊಹ್ಲಿ ಅವರನ್ನು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಳಿಕೊಂಡಿದ್ದಾರೆ. ಈ ಹಿಂದೆ ಬಿಸಿಸಿಐ ಖಜಾಂಚಿಯಾಗಿದ್ದ ಧುಮಾಲ್, ಈಗ ಸಂಸ್ಥೆಯೊಂದಿಗೆ ಔಪಚಾರಿಕ ಸಂಬಂಧ ಹೊಂದಿಲ್ಲ ಆದರೆ ಐಪಿಎಲ್ ಅನ್ನು ಬಿಸಿಸಿಐ ನಿಯಂತ್ರಿಸುವುದರಿಂದ, ಅವರು ಇನ್ನೂ ಮಂಡಳಿಯ ಅಧಿಕಾರಿಯಾಗಿದ್ದಾರೆ.

ಇದನ್ನೂ ಓದಿ
ಅಯ್ಯರ್-ಪಾಟಿದಾರ್: ಐಪಿಎಲ್ ದಾಖಲೆಯ ಪುಟದಲ್ಲಿ ಇಂದು ಯಾರ ಹೆಸರು ಸೇರುತ್ತೆ?
ಮೊದಲ ಕಪ್​ಗೆ ಆರ್​ಸಿಬಿ-ಪಂಜಾಬ್ ನಡುವೆ ಕೊನೆಯ ಹೋರಾಟ
ಫೈನಲ್ ಪಂದ್ಯಕ್ಕೆ ಆರ್​ಸಿಬಿ- ಪಂಜಾಬ್ ಸಂಭಾವ್ಯ ಪ್ಲೇಯಿಂಗ್ 11
ಆರ್​ಸಿಬಿ- ಪಂಜಾಬ್ ಫೈನಲ್ ಪಂದ್ಯಕ್ಕೆ ಮಳೆಯ ಆತಂಕ..!

IPL 2025 Final: ಅಯ್ಯರ್ ಅಥವಾ ಪಾಟಿದಾರ್: ಐಪಿಎಲ್ ದಾಖಲೆಯ ಪುಟದಲ್ಲಿ ಇಂದು ಯಾರ ಹೆಸರು ಸೇರುತ್ತೆ?

“ಕೊಹ್ಲಿ ಟಿ20ಐ ಮತ್ತು ಟೆಸ್ಟ್‌ಗಳಿಂದ ನಿವೃತ್ತರಾದ ನಂತರ, ಕಿಂಗ್ ಮ್ಯಾಜಿಕ್ ನೋಡಲು ಜಗತ್ತಿಗೆ ಕೇವಲ ಏಕದಿನ ಮತ್ತು ಐಪಿಎಲ್ ಮಾತ್ರ ಉಳಿದಿದೆ. ಆದಾಗ್ಯೂ, ಜನರಲ್ಲಿ ಈಗ ಮತ್ತೊಂದು ಭಯ ಶುರುವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಗೆಲ್ಲಲು ಕೇವಲ ಒಂದು ಗೆಲುವಿನ ದೂರದಲ್ಲಿದೆ, ಹೀಗಿರುವಾಗ ಕೊಹ್ಲಿ ಐಪಿಎಲ್‌ಗೆ ವಿದಾಯ ಹೇಳಿದರೆ ಏನು? ಎಂಬುದು. ಆದರೆ, ನಾನು ಹಾಗೆ ಭಾವಿಸುವುದಿಲ್ಲ ಅಥವಾ ನಾನು ಅದನ್ನು ನಿರೀಕ್ಷಿಸುವುದಿಲ್ಲ. ಐಪಿಎಲ್​ಗೆ ಕೊಹ್ಲಿ ವಿದಾಯ ಹೇಳಲಾರರು’’ ಎಂದು ಹೇಳಿದ್ದಾರೆ.

ಮಂಗಳವಾರ ಆರ್‌ಸಿಬಿ ಐಪಿಎಲ್ ಗೆದ್ದರೆ, ಕೊಹ್ಲಿ ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತೇನೆ ಎಂದು ಧುಮಾಲ್ ಹೇಳಿದ್ದಾರೆ. ‘ವಿರಾಟ್ ಕ್ರಿಕೆಟ್‌ನ ಶ್ರೇಷ್ಠ ರಾಯಭಾರಿ. ಅವರು ತೋರಿಸಿರುವ ಬದ್ಧತೆಯನ್ನು ಜೊಕೊವಿಕ್ ಅಥವಾ ರೋಜರ್ ಫೆಡರರ್ ಟೆನಿಸ್‌ನಂತೆ ಕ್ರಿಕೆಟ್‌ಗೆ ತೋರಿಸಿದ್ದಾರೆ. ಆದ್ದರಿಂದ ಅವರು ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರಿಸಬೇಕೆಂದು ನಾನು ಬಯಸುತ್ತೇನೆ ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಾನು ಅವರನ್ನು ಒತ್ತಾಯಿಸುತ್ತೇನೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ