AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs PBKS, IPL 2025 Final: ಒಂದು ತಂಡದ ಕನಸು ಇಂದು ನನಸು: ಮೊದಲ ಕಪ್​ಗೆ ಆರ್​ಸಿಬಿ-ಪಂಜಾಬ್ ನಡುವೆ ಕೊನೆಯ ಹೋರಾಟ

Royal Challengers Bengaluru vs Punjab Kings: ಈ ಇಡೀ ಋತುವಿನಲ್ಲಿ ಬೆಂಗಳೂರು ಮತ್ತು ಪಂಜಾಬ್ ಎರಡೂ ತಂಡಗಳ ಪ್ರದರ್ಶನ ಅದ್ಭುತವಾಗಿದೆ. ಆರ್‌ಸಿಬಿ ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಅನ್ನು ಸೋಲಿಸಿ ಫೈನಲ್‌ಗೆ ತಲುಪಿದರೆ, ಪಂಜಾಬ್ ಎರಡನೇ ಕ್ವಾಲಿಫೈಯರ್‌ನಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಸೋಲಿಸಿ ಫೈನಲ್‌ಗೆ ಟಿಕೆಟ್ ಪಡೆಯಿತು. ಶ್ರೇಯಸ್ ಪಡೆಗೆ ಇದೊಂದು ಸೇಡಿನ ಪಂದ್ಯ ಕೂಡ ಹೌದು.

RCB vs PBKS, IPL 2025 Final: ಒಂದು ತಂಡದ ಕನಸು ಇಂದು ನನಸು: ಮೊದಲ ಕಪ್​ಗೆ ಆರ್​ಸಿಬಿ-ಪಂಜಾಬ್ ನಡುವೆ ಕೊನೆಯ ಹೋರಾಟ
Pbks Vs Rcb Ipl 2025 Final
Vinay Bhat
|

Updated on: Jun 03, 2025 | 7:24 AM

Share

ಬೆಂಗಳೂರು (ಜೂ. 03): 2025 ರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಅಂತಿಮ ಫೈನಲ್ ಪಂದ್ಯವು ಇಂದು ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ (RCB vs PBKS) ನಡುವೆ ನಡೆಯಲಿದೆ. 2022 ರ ನಂತರ ಮೊದಲ ಬಾರಿಗೆ ಐಪಿಎಲ್​ನಲ್ಲಿ ಇಂದು ಹೊಸ ಚಾಂಪಿಯನ್ ಪಡೆಯಲಿದೆ. ಎಲ್ಲರೂ ಈ ಪ್ರಶಸ್ತಿ ಪಂದ್ಯಕ್ಕಾಗಿ ಉತ್ಸುಕರಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಈ ಎರಡೂ ತಂಡಗಳು 18 ವರ್ಷಗಳಿಂದ ತಮ್ಮ ಮೊದಲ ಐಪಿಎಲ್ ಟ್ರೋಫಿ ಎತ್ತಿ ಹಿಡಿಯಲು ಉತ್ಸುಕವಾಗಿದೆ. ಈ ಎರಡು ತಂಡಗಳ ಪೈಕಿ ಒಂದು ತಂಡದ ಕನಸು ಇಂದು ನನಸಾಗುವುದು ಖಚಿತ.

ಈ ಇಡೀ ಋತುವಿನಲ್ಲಿ ಬೆಂಗಳೂರು ಮತ್ತು ಪಂಜಾಬ್ ಎರಡೂ ತಂಡಗಳ ಪ್ರದರ್ಶನ ಅದ್ಭುತವಾಗಿದೆ. ಆರ್‌ಸಿಬಿ ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಅನ್ನು ಸೋಲಿಸಿ ಫೈನಲ್‌ಗೆ ತಲುಪಿದರೆ, ಪಂಜಾಬ್ ಎರಡನೇ ಕ್ವಾಲಿಫೈಯರ್‌ನಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಸೋಲಿಸಿ ಫೈನಲ್‌ಗೆ ಟಿಕೆಟ್ ಪಡೆಯಿತು. ಶ್ರೇಯಸ್ ಪಡೆಗೆ ಇದೊಂದು ಸೇಡಿನ ಪಂದ್ಯ ಕೂಡ ಹೌದು. ಹೀಗಾಗಿ ಎರಡೂ ತಂಡಗಳ ನಡುವೆ ರೋಮಾಂಚಕಾರಿ ಫೈನಲ್ ನಿರೀಕ್ಷಿಸಲಾಗಿದೆ.

ಬೆಂಗಳೂರು ಮತ್ತು ಪಂಜಾಬ್‌ನ ಹೆಡ್ ಟು ಹೆಡ್ ದಾಖಲೆ

ಐಪಿಎಲ್ ಇತಿಹಾಸದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಒಟ್ಟು 36 ಪಂದ್ಯಗಳು ನಡೆದಿವೆ, ಇದರಲ್ಲಿ ಆರ್‌ಸಿಬಿ 18 ಪಂದ್ಯಗಳನ್ನು ಗೆದ್ದಿದೆ ಮತ್ತು ಪಿಬಿಕೆಎಸ್ ಕೂಡ 18 ಪಂದ್ಯಗಳನ್ನು ಗೆದ್ದಿದೆ. ಎರಡೂ ತಂಡಗಳು ಸಮಾನ ಸಂಖ್ಯೆಯ ಪಂದ್ಯಗಳನ್ನು ಗೆದ್ದಿವೆ. ಅಂಕಿಅಂಶಗಳನ್ನು ನಂಬುವುದಾದರೆ, ಎರಡೂ ತಂಡಗಳ ನಡುವೆ ಯಾವಾಗಲೂ ತೀವ್ರ ಪೈಪೋಟಿ ನಡೆದಿದ್ದು, ಫೈನಲ್‌ನಲ್ಲಿ ಯಾರು ಗೆಲ್ಲಬಹುದು ಎಂದು ಹೇಳುವುದು ಅಸಾಧ್ಯ. ಆದಾಗ್ಯೂ, ಎರಡೂ ತಂಡಗಳ ನಡುವೆ ನಡೆದ ಕೊನೆಯ 5 ಪಂದ್ಯಗಳಲ್ಲಿ, ಆರ್‌ಸಿಬಿ ಮೇಲುಗೈ ಸಾಧಿಸಿದೆ. ಆರ್‌ಸಿಬಿ 5 ಪಂದ್ಯಗಳಲ್ಲಿ 4 ರಲ್ಲಿ ಗೆದ್ದಿದೆ.

ಇದನ್ನೂ ಓದಿ
Image
ಫೈನಲ್ ಪಂದ್ಯಕ್ಕೆ ಆರ್​ಸಿಬಿ- ಪಂಜಾಬ್ ಸಂಭಾವ್ಯ ಪ್ಲೇಯಿಂಗ್ 11
Image
ಆರ್​ಸಿಬಿ- ಪಂಜಾಬ್ ಫೈನಲ್ ಪಂದ್ಯಕ್ಕೆ ಮಳೆಯ ಆತಂಕ..!
Image
ಸ್ಟೇಡಿಯಂ ಮಾತ್ರವಲ್ಲ ವಿಮಾನ ಟಿಕೆಟ್ ಬೆಲೆಯಲ್ಲೂ ಭಾರಿ ಏರಿಕೆ..!
Image
ಐಪಿಎಲ್ ಸಮಾರೋಪ ಸಮಾರಂಭದ ಬಗ್ಗೆ ಪೂರ್ಣ ವಿವರ

IPL 2025 Prize Money: ನಾಳೆ ಆರ್​ಸಿಬಿ ಗೆದ್ದರೆ ಸಿಗುವ ಹಣ ಎಷ್ಟು ಕೋಟಿ ಗೊತ್ತೇ?: ಇಲ್ಲಿದೆ ನೋಡಿ

ಪಂಜಾಬ್ 11 ಮತ್ತು ಆರ್‌ಸಿಬಿ 9 ವರ್ಷಗಳ ನಂತರ ಫೈನಲ್ ತಲುಪಿತು

11 ವರ್ಷಗಳ ದೀರ್ಘ ಕಾಯುವಿಕೆಯ ನಂತರ ಪಂಜಾಬ್ ಕಿಂಗ್ಸ್ ಮತ್ತೊಮ್ಮೆ ಐಪಿಎಲ್ ಫೈನಲ್ ಪ್ರವೇಶಿಸಿದೆ. ಅವರು ಕೊನೆಯ ಬಾರಿಗೆ 2014 ರಲ್ಲಿ ಕೆಕೆಆರ್ ವಿರುದ್ಧ ಫೈನಲ್ ಆಡಿದ್ದರು. ಅಂದಹಾಗೆ ಪಂಜಾಬ್ ಎರಡನೇ ಬಾರಿಗೆ ಐಪಿಎಲ್ ಫೈನಲ್ ಆಡುತ್ತಿದೆ. ಮತ್ತೊಂದೆಡೆ, ಇದು ಆರ್‌ಸಿಬಿಯ ನಾಲ್ಕನೇ ಐಪಿಎಲ್ ಫೈನಲ್ ಆಗಿದೆ. ಬೆಂಗಳೂರು 9 ವರ್ಷಗಳ ಹಿಂದೆ 2016 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತನ್ನ ಕೊನೆಯ ಐಪಿಎಲ್ ಫೈನಲ್ ಆಡಿತು.

ಅಯ್ಯರ್​ಗೆ ಸತತ ಎರಡನೇ ಬಾರಿಗೆ ಐಪಿಎಲ್ ಗೆಲ್ಲುವ ಅವಕಾಶ

ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಆಟಗಾರ ಮತ್ತು ನಾಯಕನಾಗಿ ಸತತ ಎರಡನೇ ಬಾರಿಗೆ ಐಪಿಎಲ್ ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ. ಕಳೆದ ವರ್ಷ, ಅವರ ನಾಯಕತ್ವದಲ್ಲಿ, ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದರು. ಈ ವರ್ಷ, ಅವರು ಪಂಜಾಬ್ ಕಿಂಗ್ಸ್ ಜೊತೆ ಈ ಸಾಧನೆ ಮಾಡಬಹುದು. ಈ ಮೂಲಕ ದಾಖಲೆಯ ಪು ಸೇರಬಹುದು. ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದ್ದು, 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇದಕ್ಕೂ ಮುನ್ನ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ