AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಫೈನಲ್ ಪಂದ್ಯಕ್ಕೆ ಭದ್ರತಾ ವ್ಯವಸ್ಥೆ ಹೇಗಿದೆ? ಟಿಕೆಟ್ ಬೆಲೆ ಎಷ್ಟು ಗೊತ್ತಾ?

IPL 2025 Final: ಐಪಿಎಲ್ 2025ರ ಫೈನಲ್ ಪಂದ್ಯ ಜೂನ್ 3ರಂದು ಅಹಮದಾಬಾದ್‌ನಲ್ಲಿ ಆರ್​ಸಿಬಿ ಮತ್ತು ಪಂಜಾಬ್ ನಡುವೆ ನಡೆಯಲಿದೆ. ಈ ಫೈನಲ್ ಪಂದ್ಯದ ಟಿಕೆಟ್‌ ಬೆಲೆ ಆಕಾಶಕ್ಕೇರಿದೆ. ವಿಮಾನ ಟಿಕೆಟ್‌ಗಳ ಬೆಲೆಯೂ ಹೆಚ್ಚಾಗಿದ್ದು, ದೆಹಲಿ, ಮುಂಬೈ, ಬೆಂಗಳೂರಿನಿಂದ ಅಹಮದಾಬಾದ್‌ಗೆ ಪ್ರಯಾಣಿಸಲು 25,000 ರೂಪಾಯಿಗಳವರೆಗೆ ವೆಚ್ಚವಾಗುತ್ತಿದೆ. 80,000ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ, ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.

IPL 2025: ಫೈನಲ್ ಪಂದ್ಯಕ್ಕೆ ಭದ್ರತಾ ವ್ಯವಸ್ಥೆ ಹೇಗಿದೆ? ಟಿಕೆಟ್ ಬೆಲೆ ಎಷ್ಟು ಗೊತ್ತಾ?
Ipl 2025
ಪೃಥ್ವಿಶಂಕರ
|

Updated on: Jun 02, 2025 | 9:00 PM

Share

ಐಪಿಎಲ್ 2025 (IPL 2025) ರ ಫೈನಲ್ ಪಂದ್ಯವು ಜೂನ್ 3 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ (RCB vs PBKS) ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡು ಜನಪ್ರಿಯ ತಂಡಗಳು ಫೈನಲ್​ಗೇರಿರುವ ಕಾರಣ ಇಡೀ ಕ್ರೀಡಾಂಗಣ ಪೂರ್ಣ ಭರ್ತಿಯಾಗುವುದು ಖಚಿತ. ಇದಕ್ಕೆ ಪೂರಕವಾಗಿ ಈ ಪಂದ್ಯದ ಟಿಕೆಟ್‌ ಬೆಲೆ ಕಾಳ ಸಂತೆಯಲ್ಲಿ ಭಾರಿ ಮೊತ್ತಕ್ಕೆ ಭಿಕರಿಯಾಗುತ್ತಿವೆ. ವರದಿಯ ಪ್ರಕಾರ, ಐಪಿಎಲ್ 2025 ಫೈನಲ್‌ನ ಅಗ್ಗದ ಟಿಕೆಟ್ 1500 ರೂ.ಗಳಾಗಿದ್ದರೆ, ಅತ್ಯಂತ ದುಬಾರಿ ಟಿಕೆಟ್ 30,000 ರೂ.ಗಳಾಗಿದೆ.

ಭದ್ರತಾ ವ್ಯವಸ್ಥೆ ಹೇಗಿದೆ?

ಐಪಿಎಲ್ 2025 ರ ಫೈನಲ್ ಪಂದ್ಯದ 80000 ಕ್ಕೂ ಹೆಚ್ಚು ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಮಾರಾಟವಾಗಿವೆ. ಇದರಲ್ಲಿ 25000 ಟಿಕೆಟ್‌ಗಳು ಉಚಿತವಾಗಿರುತ್ತವೆ. ಇವುಗಳನ್ನು ಕ್ರಿಕೆಟ್ ಮಂಡಳಿ ಸೇರಿದಂತೆ ಇತರ ಸಂಸ್ಥೆಗಳಿಗೆ ನೀಡಲಾಗುವುದು. ಇಷ್ಟೇ ಅಲ್ಲ, ಮಿಲಿಟರಿ ಸಿಬ್ಬಂದಿಗೂ ಸೀಟುಗಳನ್ನು ಕಾಯ್ದಿರಿಸಲಾಗಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿಯೂ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಗರಿಷ್ಠ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಲ್ಲದೆ, ಪಂದ್ಯವನ್ನು ವೀಕ್ಷಿಸುವ ಅಭಿಮಾನಿಗಳಿಗೆ ಅನಾನುಕೂಲತೆಯನ್ನು ತಪ್ಪಿಸಲು, ಜೂನ್ 3 ರಂದು, ಮೆಟ್ರೋ ಸೇವೆಗಳು ಸಾಮಾನ್ಯ ಸಮಯಕ್ಕಿಂತ ಹೆಚ್ಚು ಸಮಯ ಚಲಿಸುತ್ತವೆ, ಅಂದರೆ ರಾತ್ರಿ 12:30 ರವರೆಗೆ ಮೆಟ್ರೋ ಓಡಾಟ ಇರಲಿದೆ.

ದುಬಾರಿಯಾದ ವಿಮಾನ ಟಿಕೆಟ್ ಬೆಲೆ

ಇಂದು ಅಂದರೆ ಜೂನ್ 2 ರಂದು ದೆಹಲಿ, ಬೆಂಗಳೂರು, ಮುಂಬೈ, ಚಂಡೀಗಢದಿಂದ ಅಹಮದಾಬಾದ್‌ಗೆ ಬರುವ ವಿಮಾನಗಳ ದರ 25,000 ರೂ.ಗಳನ್ನು ತಲುಪಿದೆ. ಈ ದರ ಸಾಮಾನ್ಯ ದಿನಗಳಲ್ಲಿ 3500 ರೂ.ಗಳಿಂದ 5000 ರೂ.ಗಳವರೆಗೆ ಇರುತ್ತದೆ. ಇಷ್ಟೇ ಅಲ್ಲ, ಜೂನ್ 4 ರಂದು ಮುಂಬೈ, ದೆಹಲಿ, ಬೆಂಗಳೂರಿಗೆ ಬೆಳಗಿನ ವಿಮಾನ ಪ್ರಯಾಣದ ದರ ರೂ. 30,000 ಆಗಿದೆ. ಮಧ್ಯಾಹ್ನ 12 ಗಂಟೆಯೊಳಗೆ ಬೆಂಗಳೂರಿಗೆ ಒಟ್ಟು ಐದು ವಿಮಾನಗಳು ಹೊರಡಲಿದ್ದು, ಅವುಗಳಲ್ಲಿ ಎರಡು ವಿಮಾನಗಳಲ್ಲಿ ಮಾತ್ರ ಕೆಲವು ಸೀಟುಗಳು ಉಳಿದಿವೆ.

IPL 2025: ಸಮಾರೋಪ ಸಮಾರಂಭದಲ್ಲಿ ಯಾರೆಲ್ಲ ಪ್ರದರ್ಶನ ನೀಡಲಿದ್ದಾರೆ? ಇಲ್ಲಿದೆ ಸಂಪೂರ್ಣ ವಿವರ

ಜೂನ್ 3 ರಂದು ಇತಿಹಾಸ ಸೃಷ್ಟಿ

ಇಲ್ಲಿಯವರೆಗೆ ಪಂಜಾಬ್ ಕಿಂಗ್ಸ್ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಒಮ್ಮೆಯೂ ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ. 2025 ರ ಐಪಿಎಲ್ ಅನ್ನು ಯಾವ ತಂಡ ಗೆದ್ದರೂ ಅದು ಮೊದಲ ಬಾರಿಗೆ ಈ ಭವ್ಯವಾದ ಟೂರ್ನಮೆಂಟ್‌ನ ಟ್ರೋಫಿಯನ್ನು ಗೆಲ್ಲುತ್ತದೆ. ಮುಂಬರುವ ಪಂದ್ಯದಲ್ಲಿ ಎರಡೂ ತಂಡಗಳ ಆಟಗಾರರು ತಮ್ಮ ಶೇಕಡಾ 100 ರಷ್ಟು ಪ್ರದರ್ಶನ ನೀಡುವುದು ಈಗ ಬಹಳ ಮುಖ್ಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ