ಬರೋಬ್ಬರಿ 3,542 ಕೋಟಿ ರೂ! ಕಿಂಗ್​​ ಖಾನ್​ನ ಹಿಂದಿಕ್ಕಿದ ಕಿಂಗ್ ಕೊಹ್ಲಿ

ಭಾರತೀಯ ಮಾರುಕಟ್ಟೆಯಲ್ಲಿ ಸೆಲೆಬ್ರಿಟಿಗಳ ಪ್ರಭಾವ ಕೇವಲ ಸಿನಿಮಾ ಮತ್ತು ಕ್ರೀಡಾಂಗಣಕ್ಕೆ ಸೀಮಿತವಾಗಿಲ್ಲ. ಅವರು ಪ್ರಮುಖ ವಾಣಿಜ್ಯ ಬ್ರಾಂಡ್‌ಗಳ ಯಶಸ್ಸನ್ನು ನಿರ್ಧರಿಸುವ ಶಕ್ತಿಯಾಗಿದ್ದಾರೆ. ಇದೇ ಮೊದಲ ಬಾರಿಗೆ, ಜಾಗತಿಕ ಬ್ರಾಂಡ್ ಕನ್ಸಲ್ಟೆನ್ಸಿ ಸಂಸ್ಥೆ 'ಇಂಟರ್‌ಬ್ರಾಂಡ್' ಮತ್ತು ಪ್ರಖ್ಯಾತ ಉದ್ಯಮ ನಿಯತಕಾಲಿಕೆ 'ಫಾರ್ಚೂನ್ ಇಂಡಿಯಾ' ಜಂಟಿಯಾಗಿ ಆರ್ಥಿಕ ಮಾನದಂಡಗಳ ಅಡಿಯಲ್ಲಿ ಭಾರತದ ಅತ್ಯಮೂಲ್ಯ ಸೆಲೆಬ್ರಿಟಿಗಳ ಪಟ್ಟಿಯನ್ನು ಸಿದ್ಧಪಡಿಸಿವೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಟಾಪ್-10 ಸೆಲೆಬ್ರಿಟಿಗಳ ಲಿಸ್ಟ್​ ಇಲ್ಲಿದೆ.

ಬರೋಬ್ಬರಿ 3,542 ಕೋಟಿ ರೂ! ಕಿಂಗ್​​ ಖಾನ್​ನ ಹಿಂದಿಕ್ಕಿದ ಕಿಂಗ್ ಕೊಹ್ಲಿ
Shah Rukh Khan - Virat Kohli
Image Credit source: Google

Updated on: Jun 09, 2026 | 8:25 AM

ಕ್ರಿಕೆಟ್ ಮೈದಾನದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುವ ವಿರಾಟ್ ಕೊಹ್ಲಿ, ಈಗ ವಾಣಿಜ್ಯ ಮತ್ತು ಜಾಹೀರಾತು ಜಗತ್ತಿನಲ್ಲೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದ್ದಾರೆ. ಪ್ರಖ್ಯಾತ ಬಿಸಿನೆಸ್ ಮ್ಯಾಗಝೀನ್ ಫಾರ್ಚೂನ್ ಇಂಡಿಯಾ (Fortune India) ಮತ್ತು ಜಾಗತಿಕ ಬ್ರಾಂಡ್ ಕನ್ಸಲ್ಟೆನ್ಸಿ ಸಂಸ್ಥೆ ಇಂಟರ್‌ಬ್ರಾಂಡ್ (Interbrand) ಜಂಟಿಯಾಗಿ ಪ್ರಕಟಿಸಿರುವ ಭಾರತದ ಅತೀ ಮೌಲ್ಯಯುತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕೊಹ್ಲಿ ₹3,542 ಕೋಟಿ ($427 ಮಿಲಿಯನ್) ಬ್ರಾಂಡ್ ಮೌಲ್ಯದೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮೌಲ್ಯವನ್ನು ಅವರ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ಅಥವಾ ಕೇವಲ ಗಳಿಕೆಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಆದರೆ ಫಾರ್ಚೂನ್ ಇಂಡಿಯಾ ಮತ್ತು ಇಂಟರ್‌ಬ್ರಾಂಡ್ ವಿಶಿಷ್ಟವಾದ ಆರ್ಥಿಕ ಮಾನದಂಡಗಳನ್ನು ಬಳಸಿದೆ.

ವ್ಯಕ್ತಿಯೊಬ್ಬರ ವಿಶಿಷ್ಟತೆ, ನಂಬಿಕೆ, ಗ್ರಾಹಕರೊಂದಿಗಿನ ಒಡನಾಟ, ಸ್ಥಿರತೆ ಮತ್ತು ಸಾಮಾಜಿಕ ಜವಾಬ್ದಾರಿಯ ಆಧಾರದ ಮೇಲೆ ಈ ಮೌಲ್ಯವನ್ನು ನಿರ್ಧರಿಸಲಾಗಿದೆ. ಈ ಎಲ್ಲಾ ವಿಭಾಗಗಳಲ್ಲಿ ವಿರಾಟ್ ಕೊಹ್ಲಿ ಭಾರತದ ಇತರೆಲ್ಲಾ ತಾರೆಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ.

ದ್ವಿತೀಯ ಸ್ಥಾನದಲ್ಲಿ ಕಿಂಗ್ ಖಾನ್:

ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನ ಪಡೆದರೆ. ಬಾಲಿವುಡ್‌ನ ಕಿಂಗ್ ಖಾನ್ ಖ್ಯಾತಿಯ ಶಾರುಖ್ ಖಾನ್ ಎರಡನೇ ಸ್ಥಾನದ್ದಲಿದ್ದಾರೆ.

ಹಾಗೆಯೇ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಇನ್ನು ಮಹೇಂದ್ರ ಸಿಂಗ್ ಧೋನಿ (4ನೇ ಸ್ಥಾನ) ಮತ್ತು ಸಚಿನ್ ತೆಂಡೂಲ್ಕರ್ (8ನೇ ಸ್ಥಾನ) ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಕಿಂಗ್ ಕೊಹ್ಲಿ ಸಾಮ್ರಾಜ್ಯ:

  •  ಜಾಗತಿಕ ಬ್ರಾಂಡ್‌ಗಳ ಒಪ್ಪಂದ: ಪೂಮಾ, ಆಡಿ, ಮತ್ತು ಎಂಆರ್‌ಎಫ್ ನಂತಹ ಜಾಗತಿಕ ಬ್ರಾಂಡ್‌ಗಳೊಂದಿಗೆ ವಿರಾಟ್ ಕೊಹ್ಲಿ ದೀರ್ಘಾವಧಿಯ ಒಪ್ಪಂದ ಹೊಂದಿದ್ದಾರೆ.
  • ಸೋಷಿಯಲ್ ಮೀಡಿಯಾ ಪವರ್: ಇನ್‌ಸ್ಟಾಗ್ರಾಮ್‌ನಲ್ಲಿ 270 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ಕೊಹ್ಲಿ, ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ವ್ಯಕ್ತಿ. ಅಲ್ಲದೆ ಇವರ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಅಥವಾ ರೀಲ್ಸ್ ಕೋಟ್ಯಂತರ ರೂಪಾಯಿ ಆದಾಯ ತಂದುಕೊಡುತ್ತದೆ.
  • ಫಿಟ್‌ನೆಸ್ ಐಕಾನ್: ಕೇವಲ ಕ್ರಿಕೆಟ್ ಮಾತ್ರವಲ್ಲದೆ, ದೇಶದಲ್ಲಿ ಫಿಟ್‌ನೆಸ್ ಕ್ರಾಂತಿ ಮೂಡಿಸಿರುವ ಐಕಾನ್ ಆಗಿಯೂ ವಿರಾಟ್ ಕೊಹ್ಲಿ ಗುರುತಿಸಿಕೊಂಡಿದ್ದಾರೆ.
  • ಉದ್ಯಮಿ: ಕೊಹ್ಲಿ ಕೇವಲ ಬ್ರಾಂಡ್ ರಾಯಭಾರಿಯಾಗಿ ಉಳಿದಿಲ್ಲ, ಬದಲಿಗೆ ಅವರೇ ಸ್ವತಃ ಒಬ್ಬ ಯಶಸ್ವಿ ಉದ್ಯಮಿಯಾಗಿದ್ದಾರೆ. ಒನ್8 (One8) ಬ್ರಾಂಡ್ ಅಡಿಯಲ್ಲಿ ರೆಸ್ಟೋರೆಂಟ್‌ಗಳು, ಅಪ್ಯಾರಲ್ಸ್ ಮತ್ತು ಪರ್ಫ್ಯೂಮ್ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಜೊತೆಗೆ ಬ್ಲೂ ಟ್ರೈಬ್ (Blue Tribe) ನಂತಹ ಸ್ಟಾರ್ಟ್‌ಅಪ್‌ಗಳಲ್ಲಿ ಮತ್ತು ಸ್ಪೋರ್ಟ್ಸ್ ಫ್ರಾಂಚೈಸಿಗಳಲ್ಲೂ (FC Goa) ಹೂಡಿಕೆ ಮಾಡಿದ್ದಾರೆ.

ಈ ಎಲ್ಲಾ ವಿಷಯಗಳು ವಿರಾಟ್ ಕೊಹ್ಲಿಯ ಬ್ರಾಂಡ್ ವ್ಯಾಲ್ಯೂವನ್ನು ಹೆಚ್ಚಿಸಿದೆ. ಈ ವ್ಯಾಲ್ಯೂಗಳೊಂದಿಗೆ ಇದೀಗ ಭಾರತದ ಅತೀ ಮೌಲ್ಯಯುತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

ಇದನ್ನೂ ಓದಿ:  ನೈಟ್ ಕ್ಲಬ್​ನಲ್ಲಿ ಗಲಾಟೆ: ಇಂಗ್ಲೆಂಡ್ ಆಟಗಾರರಿಬ್ಬರ ವಿರುದ್ಧ ತನಿಖೆ ಶುರು!

 ಫಾರ್ಚೂನ್ ಇಂಡಿಯಾ ಟಾಪ್-10 ಭಾರತದ ಅತೀ ಮೌಲ್ಯಯುತ ಸೆಲೆಬ್ರಿಟಿಗಳು:

  1. ವಿರಾಟ್ ಕೊಹ್ಲಿ (ಕ್ರಿಕೆಟ್)
  2. ಶಾರುಖ್ ಖಾನ್ (ಸಿನಿಮಾ)
  3. ಪ್ರಿಯಾಂಕಾ ಚೋಪ್ರಾ ಜೋನಾಸ್ (ಸಿನಿಮಾ)
  4. ಮಹೇಂದ್ರ ಸಿಂಗ್ ಧೋನಿ (ಕ್ರಿಕೆಟ್)
  5. ರಣವೀರ್ ಸಿಂಗ್ (ಸಿನಿಮಾ)
  6. ಆಲಿಯಾ ಭಟ್ (ಸಿನಿಮಾ)
  7. ದೀಪಿಕಾ ಪಡುಕೋಣೆ (ಸಿನಿಮಾ)
  8. ಸಚಿನ್ ತೆಂಡೂಲ್ಕರ್ (ಕ್ರಿಕೆಟ್)
  9. ಅಮಿತಾಭ್ ಬಚ್ಚನ್ (ಸಿನಿಮಾ)
  10. ಅಕ್ಷಯ್ ಕುಮಾರ್ (ಸಿನಿಮಾ)

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us