Virat Kohli: ಮೊದಲ ಪಂದ್ಯಕ್ಕೆ ಗೈರಾಗ್ತಾರಾ ವಿರಾಟ್ ಕೊಹ್ಲಿ? ಇಲ್ಲಿದೆ ಉತ್ತರ
ICC World Cup 2023: ಭಾರತದಲ್ಲಿ ನಡೆಯಲಿರುವ 13ನೇ ಆವೃತ್ತಿಯ ಏಕದಿನ ವಿಶ್ವಕಪ್ ನಾಳೆಯಿಂದ (ಅಕ್ಟೋಬರ್ 5) ಶುರುವಾಗಲಿದೆ. 10 ತಂಡಗಳ ನಡುವಣ ಈ ಕ್ರಿಕೆಟ್ ಕದನದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.
ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾರತ-ಆಸ್ಟ್ರೇಲಿಯಾ ನಡುವಣ ಮೊದಲ ಪಂದ್ಯಕ್ಕೆ ಅಲಭ್ಯರಾಗುತ್ತಾರಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಡಲು ಮುಖ್ಯ ಕಾರಣ ಕಿಂಗ್ ಕೊಹ್ಲಿ ಅಭ್ಯಾಸ ಪಂದ್ಯಗಳಿಂದ ಹೊರಗುಳಿದಿದ್ದು. ತಿರುವನಂತಪುರದಲ್ಲಿ ನಡೆಯಬೇಕಿದ್ದ 2ನೇ ಅಭ್ಯಾಸ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ದಿಢೀರ್ ಆಗಿ ಮುಂಬೈಗೆ ಮರಳಿದ್ದರು.
ವೈಯುಕ್ತಿಕ ಕಾರಣಗಳಿಗಾಗಿ ತಂಡವನ್ನು ತೊರೆದಿದ್ದ ಕೊಹ್ಲಿ ಟೀಮ್ ಇಂಡಿಯಾದ ಫೋಟೋ ಶೂಟ್ನಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿಯೇ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಕೊಹ್ಲಿ ಅಲಭ್ಯರಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.
ಆದರೀಗ ಈ ಎಲ್ಲಾ ಗೊಂದಲಗಳಿಗೆ ಖುದ್ದು ವಿರಾಟ್ ಕೊಹ್ಲಿಯೇ ತೆರೆ ಎಳೆದಿದ್ದಾರೆ. ಬುಧವಾರ ಚೆನ್ನೈಗೆ ಬಂದಿಳಿದ ಟೀಮ್ ಇಂಡಿಯಾ ಬಳಗದಲ್ಲಿ ವಿರಾಟ್ ಕೊಹ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅಕ್ಟೋಬರ್ 8 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವುದನ್ನು ಖಚಿತಪಡಿಸಿದ್ದಾರೆ.
BREAKING 🚨
Indian team lands in Chennai for their ODI World Cup opener vs Australia.@CricSubhayan & @debasissen report.@ThumsUpOfficial #INDvsAUS #ViratKohli #ICCCricketWorldCup pic.twitter.com/NetfdyLhGp
— RevSportz (@RevSportz) October 4, 2023
2ನೇ ಮಗುವಿನ ನಿರೀಕ್ಷೆಯಲ್ಲಿ ಕಿಂಗ್ ಕೊಹ್ಲಿ?
ವಿರುಷ್ಕಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಇದೇ ಕಾರಣದಿಂದಾಗಿ ಕೊಹ್ಲಿ ಅರ್ಧದಲ್ಲೇ ತಂಡವನ್ನು ತೊರೆದಿದ್ದರು ಎನ್ನಲಾಗಿದೆ. ಇದೇ ಕಾರಣದಿಂದಾಗಿ ಅಕ್ಟೋಬರ್ 8 ರಂದು ನಡೆಯುವ ಪಂದ್ಯಕ್ಕೂ ಕೊಹ್ಲಿ ಅಲಭ್ಯರಾಗುವ ಸಾಧ್ಯತೆಯಿದೆ ಎನ್ನಲಾಗಿತ್ತು.
ಇದನ್ನೂ ಓದಿ: ವಿರಾಟ್ ಕೊಹ್ಲಿಯ ಆರ್ಭಟಕ್ಕೆ ಪಂಟರ್ ಪಾಂಟಿಂಗ್ ದಾಖಲೆ ಬ್ರೇಕ್
ಆದರೀಗ ಭಾರತ ತಂಡದ ವಿರಾಟ್ ಕೊಹ್ಲಿ ಚೆನ್ನೈಗೆ ಬಂದಿಳಿದಿದ್ದಾರೆ. ಈ ಮೂಲಕ ವಿಶ್ವಕಪ್ನ ಎಲ್ಲಾ ಪಂದ್ಯಗಳಲ್ಲೂ ಕಣಕ್ಕಿಳಿಯುವುದನ್ನು ಖಚಿತಪಡಿಸಿದ್ದಾರೆ.
ಭಾರತ ತಂಡದ ವೇಳಾಪಟ್ಟಿ ಹೀಗಿದೆ:
ದಿನಾಂಕ | ಪಂದ್ಯ | ಸ್ಥಳ |
---|---|---|
OCT 8 | ಭಾರತ vs ಆಸ್ಟ್ರೇಲಿಯಾ | ಚೆನ್ನೈ |
Oct 11 | ಭಾರತ vs ಅಫ್ಘಾನಿಸ್ತಾನ್ | ದೆಹಲಿ |
Oct 14 | ಭಾರತ vs ಪಾಕಿಸ್ತಾನ್ | ಅಹಮದಾಬಾದ್ |
Oct 19 | ಭಾರತ vs ಬಾಂಗ್ಲಾದೇಶ್ | ಪುಣೆ |
Oct 22 | ಭಾರತ vs ನ್ಯೂಝಿಲೆಂಡ್ | ಧರ್ಮಶಾಲಾ |
Oct 29 | ಭಾರತ vs ಇಂಗ್ಲೆಂಡ್ | ಲಕ್ನೋ |
Nov 2 | ಭಾರತ vs ಶ್ರೀಲಂಕಾ | ಮುಂಬೈ |
Nov 5 | ಭಾರತ vs ಸೌತ್ ಆಫ್ರಿಕಾ | ಕೊಲ್ಕತ್ತಾ |
Nov 12 | ಭಾರತ vs ನೆದರ್ಲೆಂಡ್ಸ್ | ಬೆಂಗಳೂರು |
ಏಕದಿನ ವಿಶ್ವಕಪ್ ಯಾವಾಗ ಶುರು?
ಭಾರತದಲ್ಲಿ ನಡೆಯಲಿರುವ 13ನೇ ಆವೃತ್ತಿಯ ಏಕದಿನ ವಿಶ್ವಕಪ್ ನಾಳೆಯಿಂದ (ಅಕ್ಟೋಬರ್ 5) ಶುರುವಾಗಲಿದೆ. 10 ತಂಡಗಳ ನಡುವಣ ಈ ಕ್ರಿಕೆಟ್ ಕದನದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನ ಚೆಪಾಕ್ ಮೈದಾನದಲ್ಲಿ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
Published On - 2:29 pm, Wed, 4 October 23