ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಗೆ ಇನ್ನೇನು ಕೆಲವೇ ದಿನಗಳಷ್ಟೆ ಬಾಕಿ ಉಳಿದಿವೆ. ಮಾರ್ಚ್ 26 ರಂದು ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ 2022ಕ್ಕೆ (IPL 2022) ಅದ್ದೂರಿ ಚಾಲನೆ ಸಿಗಲಿದೆ. ಈಗಾಗಲೇ ಎಲ್ಲ ಫ್ರಾಂಚೈಸಿ ಭರ್ಜರಿ ತಯಾರಿ ನಡೆಸುತ್ತಿದ್ದರೆ ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಯಕನ ಘೋಷಣೆ ಮಾಡುವ ತವಕದಲ್ಲಿದೆ. ಇದೇ ಮಾರ್ಚ್ 12 ಶನಿವಾರದಂದು ಆರ್ಸಿಬಿ ಫ್ರಾಂಚೈಸಿ ನೂತನ ಸಾರಥಿಯ ಹೆಸರು ಪ್ರಕಟ ಮಾಡಲಿದೆ. ಈ ಬಗ್ಗೆ ಆರ್ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಎರಡು ದಿನಗಳ ಹಿಂದೆ ಮಾಹಿತಿ ನೀಡಿತ್ತು. ಆರ್ಸಿಬಿ ತಂಡವು 12 ಮಾರ್ಚ್ 2022 ರಂದು ಸಂಜೆ 4 ಗಂಟೆಗೆ ಹೊಸ ನಾಯಕನನ್ನು ಘೋಷಿಸುವುದಾಗಿ ತಿಳಿಸಿದೆ. ಹೀಗಿರುವಾಗ ವಿರಾಟ್ ಕೊಹ್ಲಿ (Virat Kohli) ಮಾತನಾಡಿರುವ ವಿಡಿಯೋ ಒಂದನ್ನು ಆರ್ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಸರ್ಪ್ರೈಸ್ ನೀಡಿದೆ.
“ಕೆಲವು ಅಪ್ಡೇಟ್ಗಳು ಸದ್ಯದಲ್ಲೇ ಎಲ್ಲರಿಗೂ ತಿಳಿಯಲಿದೆ. ಮತ್ತೊಂದು ಕುತೂಹಲದ ಐಪಿಎಲ್ ಅನ್ನು ಎದುರು ನೋಡುತ್ತಿದ್ದೇನೆ. ಎಲ್ಲದಕ್ಕಿಂತ ಮುಖ್ಯವಾಗಿ….,” ಎಂದು ಹೇಳಿ ಅರ್ಧದಲ್ಲೇ ನಿಲ್ಲಿಸಿ ಅಭಿಮಾನಿಗಳ ತಲೆಗೆ ಹುಳಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುವ ಜೊತೆಗೆ ಕುತೂಹಲ ಮೂಡಿಸಿದೆ. ಕೊಹ್ಲಿ ಏನನ್ನು ಹೇಳಲು ಹೊರಟು ಅರ್ಧದಲ್ಲೇ ನಿಲ್ಲಿಸಿದರು ಎಂದು ಅಭಿಮಾನಿಗಳು ಯೋಚಿಸುತ್ತಿದ್ದಾರೆ.
“Renewed Energy. Excited for the IPL season. There’s an important news…” – Virat Kohli has a message for all of you RCB fans! ?
Location: Museum Cross Road, Church Street, Bengaluru
Date: 12.03.2022
Time: 12pm to 8pm#PlayBold #WeAreChallengers pic.twitter.com/o26eA2bOq3— Royal Challengers Bangalore (@RCBTweets) March 10, 2022
ಈ ಎಲ್ಲ ಗೊಂದಲಗಳಿಗೆ ಮಾರ್ಚ್ 12 ರಂದು ತೆರೆಬೀಳಲಿದೆ. ಈ ದಿನ ಆರ್ಸಿಬಿ ನೂತನ ನಾಯಕನ ಘೋಷಣೆ ಆಗಲಿದೆ. ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಮ್ಯೂಸಿಯಂ ಕ್ರಾಸ್ ರೋಡ್‌ನಲ್ಲಿ ಫ್ರಾಂಚೈಸಿ ತಂಡ ತನ್ನ 14 ವರ್ಷಗಳನ್ನು ಆಚರಿಸಲಿದೆ. ಹೊಸ ನಾಯಕನ ಹೊರತಾಗಿ ಹೊಸ ಜೆರ್ಸಿ ಕೂಡ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರ್ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಮರುನಾಮಕರಣ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಕಾರ್ಯಕ್ರಮ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ.
ಈಗಾಗಲೇ 2022 ಐಪಿಎಲ್ಗಾಗಿ ಎಲ್ಲಾ ತಂಡಗಳು ತಮ್ಮ ನಾಯಕರುಗಳನ್ನು ಬಹಿರಂಗಪಡಿಸಿದೆ. ಒಟ್ಟು 8 ಫ್ರಾಂಚೈಸಿಗಳು ಭಾರತೀಯರನ್ನೇ ನಾಯಕನಾಗಿ ಆಯ್ಕೆ ಮಾಡಿವೆ. ಆದರೆ ಆರ್ಸಿಬಿ ಮಾತ್ರ ಕೊಹ್ಲಿಯಿಂದ ತೆರವಾಗಿರುವ ಸ್ಥಾನಕ್ಕೆ ಇನ್ನೂ ಅಂತಿಮ ಹೆಸರನ್ನು ಪ್ರಕಟಿಸಿಲ್ಲ. ಆದರೆ ಇದಕ್ಕೆಲ್ಲಾ ಮಾರ್ಚ್ 12ರಂದು ಉತ್ತರ ಸಿಗಲಿದೆ ಎಂದು ಫ್ರಾಂಚೈಸಿ ತಿಳಿಸಿದೆ. ಮೂಲಗಳ ಪ್ರಕಾರ, ದಕ್ಷಿಣ ಅಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ರನ್ನು ನಾಯಕನಾಗಿ ನೇಮಕ ಮಾಡಬಹುದು ಎನ್ನಲಾಗುತ್ತಿದೆ. ನಾಯಕತ್ವ ಸ್ಥಾನಕ್ಕೆ ಮ್ಯಾಕ್ಸ್ವೆಲ್ ನೆಚ್ಚಿನ ಆಯ್ಕೆಯಾಗಿದ್ದರೂ ಕೂಡಾ ಫ್ರಾಂಚೈಸಿ ಡುಪ್ಲೆಸಿಸ್ ಮೇಲೆ ಹೆಚ್ಚಿನ ವಿಶ್ವಾಸ ಇರಿಸಿದೆ ಎನ್ನಲಾಗಿದೆ. ಇವರಲ್ಲದೆ ತಂಡದಲ್ಲಿ ದಿನೇಶ್ ಕಾರ್ತಿಕ್ ಹೆಸರು ಕೂಡ ಕೇಳಿಬರುತ್ತಿದೆ.
ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮಾರ್ಚ್ 26ರ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿದೆ. 65 ದಿನಗಳ ಅವಧಿಯಲ್ಲಿ ಒಟ್ಟು 70 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್ ಪಂದ್ಯಗಳನ್ನು ಆಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾರ್ಚ್ 27 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಶುರು ಮಾಡಲಿದೆ.
IND vs SL: ಪಿಂಕ್ ಬಾಲ್ ಟೆಸ್ಟ್ನಿಂದ ಸ್ಟಾರ್ ಪ್ಲೇಯರ್ ಔಟ್: ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ
Cheteshwar Pujara: ಟೀಮ್ ಇಂಡಿಯಾದಲ್ಲಿಲ್ಲ ಅವಕಾಶ: ಇಂಗ್ಲೆಂಡ್ ದೇಶಿ ಟೂರ್ನಿಯತ್ತ ಮುಖಮಾಡಿದ ಚೇತೇಶ್ವರ್ ಪೂಜಾರ