CSK vs RCB, IPL 2024: ರಚಿನ್ ರವೀಂದ್ರ ಔಟಾದಾಗ ಬೆರಳು ತೋರಿಸಿದ ಕೊಹ್ಲಿ: ಫ್ಯಾನ್ಸ್​ಗೆ ಬೇಸರ ತರಿಸಿದ ವಿರಾಟ್ ನಡೆ

|

Updated on: Mar 23, 2024 | 8:36 AM

Virat Kohli send off Rachin Ravindra: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ 2024ರ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೊಟ್ಟ ರಿಯಾಕ್ಷನ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ರಚಿನ್ ರವೀಂದ್ರ ಔಟಾದಾಗ ಕೊಹ್ಲಿ ಏನು ಮಾಡಿದ್ರು ನೋಡಿ.

CSK vs RCB, IPL 2024: ರಚಿನ್ ರವೀಂದ್ರ ಔಟಾದಾಗ ಬೆರಳು ತೋರಿಸಿದ ಕೊಹ್ಲಿ: ಫ್ಯಾನ್ಸ್​ಗೆ ಬೇಸರ ತರಿಸಿದ ವಿರಾಟ್ ನಡೆ
Virat Kohli Rachin Ravindra
Follow us on

ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಮೊದಲ ಪಂದ್ಯವು ಶುಕ್ರವಾರ (ಮಾರ್ಚ್ 22) ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) ನಡುವೆ ನಡೆಯಿತು. ಋತುವಿನ ಆರಂಭಿಕ ಪಂದ್ಯದಲ್ಲಿ, ರುತುರಾಜ್ ಪಡೆ ತಮ್ಮ ತವರು ಅಭಿಮಾನಿಗಳ ಮುಂದೆ ಆರು ವಿಕೆಟ್‌ಗಳಿಂದ ಫಾಫ್ ಪಡೆಯನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 173 ರನ್ ಗಳಿಸಿದರೆ, ಸಿಎಸ್‌ಕೆ 18.4 ಓವರ್‌ಗಳಲ್ಲಿ ಕೇವಲ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ ಈ ಟಾರ್ಗೆಟ್ ಅನ್ನು ಬೆನ್ನಟ್ಟಿತು. ಇದರ ನಡುವೆ ಈ ಪಂದ್ಯದಲ್ಲಿ ವಿಶೇಷ ಘಟನೆ ಸಂಭವಿಸಿದೆ. ಇದು ಅಭಿಮಾನಿಗಳಿಗೆ ಬೇಸರ ತರಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ಚೇಸ್ ಮಾಡುವ ಸಮಯದಲ್ಲಿ, ಯುವ ಬ್ಯಾಟರ್ ರಚಿನ್ ರವೀಂದ್ರ ಔಟಾದಾಗ ವಿರಾಟ್ ಕೊಹ್ಲಿ ಕೊಟ್ಟ ರಿಯಾಕ್ಷನ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಗಾಯಕ್ವಾಡ್ 15 ಎಸೆತಗಳಲ್ಲಿ 15 ರನ್ ಗಳಿಸಿದ ನಂತರ ರನ್ ವೇಗವನ್ನು ಮುಂದುವರಿಸಿದ ರಚಿನ್ ಕೇವಲ 15 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಸಿಡಿಸಿದರು. ಆದರೆ, ಕರ್ಣ್ ಶರ್ಮಾ ಬೌಲಿಂಗ್​ನಲ್ಲಿ ರಚಿನ್ ಸ್ಲಾಗ್ ಸ್ವೀಪ್ ಸರಿಯಾಗಿ ಕನೆಕ್ಟ್ ಆಗದೆ ರಜತ್ ಪಾಟಿದಾರ್‌ಗೆ ಕ್ಯಾಚ್ ನೀಡಿ ಔಟಾದರು.

ಸೋಲಿಗೆ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ನೀಡಿದ ಕಾರಣವೇನು ಗೊತ್ತೇ?: ಪೋಸ್ಟ್ ಮ್ಯಾಚ್ ಟಾಕ್ ಇಲ್ಲಿದೆ

ಸಿಎಸ್​ಕೆಯ ದೊಡ್ಡ ವಿಕೆಟ್ ಪತನಗೊಂಡಿದ್ದಕ್ಕೆ ಆರ್‌ಸಿಬಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿತು. ಆರ್​ಸಿಬಿ ಪ್ಲೇಯರ್ಸ್ ಹರ್ಷ ವ್ಯಕ್ತಪಡಿಸಿದರು. ಆದಾಗ್ಯೂ, ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ ಅವರು ರಚಿನ್‌ಗೆ ಎಕ್ಸ್-ರೇಟೆಡ್ ಸೆಂಡ್-ಆಫ್‌ನಲ್ಲಿ ತಮ್ಮ ಬೆರಳಿನಿಂದ ಸನ್ನೆ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಕೊಹ್ಲಿಯ ನಡೆಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.

ರಚಿನ್ ರವೀಂದ್ರ ಔಟಾದಾಗ ವಿರಾಟ್ ಕೊಹ್ಲಿ ಕೊಟ್ಟ ರಿಯಾಕ್ಷನ್ ವಿಡಿಯೋ ಇಲ್ಲಿದೆ:

 

ಆರ್​ಸಿಬಿ ಮುಂದಿನ ಪಂದ್ಯ ಯಾವಾಗ?: ಎದುರಾಳಿ ಯಾರು?, ಎಷ್ಟು ಗಂಟೆಗೆ?

ಗಾಯಕ್ವಾಡ್-ರಚಿನ್ ನಿರ್ಗಮನದ ಬಳಿಕ ಅಜಿಂಕ್ಯಾ ರಹಾನೆ (27) ಸಿಎಸ್​ಕೆಗೆ ಪುನರುಜ್ಜೀವ ನೀಡಿದರು. ಅಂತಿಮ ಹಂತದಲ್ಲಿ ಶಿವಂ ದುಬೆ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ ಕ್ರೀಸ್‌ಗೆ ಆಗಮಿಸಿ ಗೆಲುವವನ್ನು ಸುಲಭಗೊಳಿಸಿದರು. ಇದಕ್ಕೂ ಮುನ್ನ ಸಿಎಸ್​ಕೆ ಪರ ಮೊದಲ ಪಂದ್ಯ ಆಡಿದ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್, 29 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಪಡೆದು ಆರ್​ಸಿಬಿಯ ಬೆನ್ನೆಲುಬುಗಳನ್ನು ಮುರಿದರು. ಅವರು ಫಾಫ್ ಡು ಪ್ಲೆಸಿಸ್ (35), ರಜತ್ ಪಾಟಿದಾರ್ (0), ವಿರಾಟ್ ಕೊಹ್ಲಿ (21) ಮತ್ತು ಕ್ಯಾಮರೂನ್ ಗ್ರೀನ್ (28) ಅವರನ್ನು ಔಟ್ ಮಾಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ