Anushka Sharma: ಆರ್​ಸಿಬಿ ಬೆಂಬಲಕ್ಕೆ ಬರಲಿದ್ದಾರೆ ಅನುಷ್ಕಾ ಶರ್ಮಾ; ಇಲ್ಲಿದೆ ಗುಡ್​ ನ್ಯೂಸ್

ಅನುಷ್ಕಾ ಶರ್ಮಾ ಶಿಕ್ಷಣ ಪಡೆದಿದ್ದು ಬೆಂಗಳೂರಿನಲ್ಲಿ. ಹೀಗಾಗಿ, ಆರ್​ಸಿಬಿ ಎಂದರೆ ಅವರಿಗೆ ವಿಶೇಷ ಪ್ರೀತಿ. ಹೀಗಾಗಿ, ಆರ್​ಸಿಬಿ ಮ್ಯಾಚ್ ಆದಾಗಲೆಲ್ಲ ಅವರು ಬಂದಿದ್ದೂ ಇದೆ. ಈ ಬಾರಿ ಅವರು ಸ್ಟೇಡಿಯಂಗೆ ಬರುವುದಿಲ್ಲ ಎಂದು ವರದಿ ಆಗಿತ್ತು. ಆದರೆ, ಇದು ಸುಳ್ಳು ಎನ್ನಲಾಗಿದೆ.

Anushka Sharma: ಆರ್​ಸಿಬಿ ಬೆಂಬಲಕ್ಕೆ ಬರಲಿದ್ದಾರೆ ಅನುಷ್ಕಾ ಶರ್ಮಾ; ಇಲ್ಲಿದೆ ಗುಡ್​ ನ್ಯೂಸ್
ಅನುಷ್ಕಾ
Follow us
ರಾಜೇಶ್ ದುಗ್ಗುಮನೆ
|

Updated on:Mar 23, 2024 | 7:36 AM

ನಟಿ ಅನುಷ್ಕಾ ಶರ್ಮಾ (Anushka Sharma) ಅವರು ಗಂಡು ಮಗುವಿಗೆ ಜನ್ಮ ನೀಡಿ ತಿಂಗಳ ಮೇಲಾಗಿದೆ. ಈ ಗುಡ್ ನ್ಯೂಸ್ ತಿಳಿದ ಬಳಿಕ ಫ್ಯಾನ್ಸ್ ಸಂಭ್ರಮಿಸಿದ್ದಾರೆ. ಆದರೆ, ಇತ್ತೀಚೆಗೆ ಅನುಷ್ಕಾ ಶರ್ಮಾ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅಷ್ಟೇ ಅಲ್ಲ ಮಗು ಜನಿಸುವುದಕ್ಕೂ ಮೊದಲೇ ಅನುಷ್ಕಾ ಹಾಗೂ ಅವರ ಪತಿ, ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ಲಂಡನ್​ಗೆ ತೆರಳಿದ್ದರು. ಅಲ್ಲಿಯೇ ಅವರು ಮಗುವಿಗೆ ಜನ್ಮ ನೀಡಿದ್ದರು. ಐಪಿಎಲ್ ಕಾರಣಕ್ಕೆ ವಿರಾಟ್ ಅವರು ಭಾರತಕ್ಕೆ ಮರಳಿದ್ದಾರೆ. ಅನುಷ್ಕಾ ಶರ್ಮಾ ಇನ್ನೂ ವಿದೇಶದಲ್ಲೇ ಇದ್ದಾರೆ. ಅವರು ಶೀಘ್ರವೇ ಭಾರತಕ್ಕೆ ಮರಳಲಿದ್ದಾರೆ. ಅಷ್ಟೇ ಅಲ್ಲ ಆರ್​ಸಿಬಿ ಹಾಗೂ ವಿರಾಟ್ ಕೊಹ್ಲಿ ಚಿಯರ್​ಅಪ್ ಮಾಡಲು ಸ್ಟೇಡಿಯಂಗೂ ಬರಲಿದ್ದಾರೆ.

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇವರು ಮದುವೆ ಆಗಿ ಆರು ವರ್ಷಗಳು ಕಳೆಯುತ್ತಾ ಬಂದಿದೆ. ಈ ಅವಧಿಯಲ್ಲಿ ಅನೇಕ ಬಾರಿ ಪತಿಗೆ ಚಿಯರ್​​ಅಪ್ ಮಾಡಲು ಸ್ಟೇಡಿಯಂಗೆ ಅವರು ಬಂದಿದ್ದು ಇದೆ. ಮತ್ತೊಂದು ವಿಶೇಷ ಎಂದರೆ ಅನುಷ್ಕಾ ಶರ್ಮಾ ಶಿಕ್ಷಣ ಪಡೆದಿದ್ದು ಬೆಂಗಳೂರಿನಲ್ಲಿ. ಹೀಗಾಗಿ, ಆರ್​ಸಿಬಿ ಎಂದರೆ ಅವರಿಗೆ ವಿಶೇಷ ಪ್ರೀತಿ. ಹೀಗಾಗಿ, ಆರ್​ಸಿಬಿ ಮ್ಯಾಚ್ ಆದಾಗಲೆಲ್ಲ ಅವರು ಬಂದಿದ್ದೂ ಇದೆ. ಈ ಬಾರಿ ಅವರು ಸ್ಟೇಡಿಯಂಗೆ ಬರುವುದಿಲ್ಲ ಎಂದು ವರದಿ ಆಗಿತ್ತು. ಆದರೆ, ಇದು ಸುಳ್ಳು ಎನ್ನಲಾಗಿದೆ.

ಅನುಷ್ಕಾ ಶರ್ಮಾ ಅವರಿಗೆ ವಿರಾಟ್ ಬಗ್ಗೆ ವಿಶೇಷ ಪ್ರೀತಿ ಇದೆ. ಸದ್ಯ ಮಗು ಜನಿಸಿ ಹೆಚ್ಚು ಸಮಯ ಕಳೆದಿಲ್ಲ. ಈ ಸಂದರ್ಭದಲ್ಲಿ ಮಗ ಅಕಾಯ್ ಜೊತೆ ಟ್ರಾವೆಲ್ ಮಾಡೋದು ನಿಜಕ್ಕೂ ರಿಸ್ಕ್. ಈ ಕಾರಣದಿಂದ ಅನುಷ್ಕಾ ಅವರು ಲಂಡನ್​ನಲ್ಲಿಯೇ ಇದ್ದಾರೆ. ಮಗಳು ವಮಿಕಾ ಕೂಡ ಅನುಷ್ಕಾ ಜೊತೆ ಇದ್ದಾಳೆ. ಅವರು ಭಾರತಕ್ಕೆ ಬರೋದನ್ನು ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ತಮ್ಮನ ಜತೆ ಬ್ರೇಕಪ್: ಈಗ ತೃಪ್ತಿ ಸುತ್ತಾಡುತ್ತಿರುವುದು ಯಾರ ಜೊತೆ?

ಅನುಷ್ಕಾ ಶರ್ಮಾ ಅವರು ಸಿನಿಮಾ ಕೆಲಸಗಳಿಂದ ದೂರವೇ ಇದ್ದಾರೆ. 2018ರ ‘ಜೀರೋ’ ಬಳಿಕ ಅವರ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಅವರು ಚಿತ್ರರಂಗದಿಂದ ದೂರ ಇದ್ದು ಸುಮಾರು ಆರು ವರ್ಷಗಳು ಕಳೆದಿವೆ. ಸದ್ಯಕ್ಕಂತೂ ಅವರು ನಟನೆಗೆ ಮರಳೋದು ಅನುಮಾನ ಎನ್ನಲಾಗುತ್ತಿದೆ. ‘ಚಕ್ದಾ ಎಕ್ಸ್​ಪ್ರೆಸ್​’ ಸಿನಿಮಾದ ಕೆಲಸಗಳು ನಡೆಯುತ್ತಿದ್ದು, ಇದರ ರಿಲೀಸ್​ಗಾಗಿ ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:35 am, Sat, 23 March 24

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ