AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜಯ್​ ಲೀಲಾ ಬನ್ಸಾಲಿ ಜೊತೆ ಪ್ರಿಯಾಂಕಾ ಚೋಪ್ರಾ ಹೊಸ ಸಿನಿಮಾ?

ಒಂದಷ್ಟು ಕೆಲಸಗಳ ಸಲುವಾಗಿ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದಿಂದ ಮುಂಬೈಗೆ ಆಗಮಿಸಿದ್ದಾರೆ. ಅವರ ಪ್ರೊಡಕ್ಷನ್​ ಹೌಸ್​ ಕೂಡ ಇದೆ. ಅದರಲ್ಲಿ 3-4 ಪ್ರಾಜೆಕ್ಟ್​ಗಳನ್ನು ಸದ್ಯದಲ್ಲೇ ಆರಂಭಿಸಲಾಗುತ್ತಿದೆ. ಆ ಸಲುವಾಗಿ ಕೆಲವರ ಜೊತೆ ಪ್ರಿಯಾಂಕಾ ಚೋಪ್ರಾ ಮೀಟಿಂಗ್​ ನಡೆಸಿದ್ದಾರೆ. ಇದೇ ವೇಳೆ ಸಂಜಯ್​ ಲೀಲಾ ಬನ್ಸಾಲಿ ಜೊತೆಗೂ ಅವರು ಮಾತುಕತೆ ಮಾಡಿದ್ದಾರೆ ಎನ್ನಲಾಗಿದೆ.

ಸಂಜಯ್​ ಲೀಲಾ ಬನ್ಸಾಲಿ ಜೊತೆ ಪ್ರಿಯಾಂಕಾ ಚೋಪ್ರಾ ಹೊಸ ಸಿನಿಮಾ?
ಪ್ರಿಯಾಂಕಾ ಚೋಪ್ರಾ, ಸಂಜಯ್​ ಲೀಲಾ ಬನ್ಸಾಲಿ
ಮದನ್​ ಕುಮಾರ್​
|

Updated on: Mar 22, 2024 | 6:08 PM

Share

ಸದ್ಯಕ್ಕೆ ಅಮೆರಿಕದಲ್ಲೇ ಸೆಟ್ಲ್​ ಆಗಿರುವ ಪ್ರಿಯಾಂಕಾ ಚೋಪ್ರಾ ಅವರು ಮತ್ತೆ ಬಾಲಿವುಡ್​ (Bollywood) ಸಿನಿಮಾ ಮಾಡುವುದು ಯಾವಾಗ ಎಂದು ಅಭಿಮಾನಿಗಳು ಕಾದಿದ್ದಾರೆ. ಅಂಥವರಿಗೆಲ್ಲ ಒಂದು ಗುಡ್​ ನ್ಯೂಸ್​ ಕೇಳಿಬಂದಿದೆ. ಶೀಘ್ರದಲ್ಲೇ ಅವರು ಹಿಂದಿಯಲ್ಲಿ ಹೊಸ ಸಿನಿಮಾ ಬಗ್ಗೆ ಅನೌನ್ಸ್​ ಮಾಡುವ ಸಾಧ್ಯತೆ ದಟ್ಟವಾಗಿದೆ. ಕೆಲವೇ ದಿನಗಳ ಹಿಂದೆ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಭಾರತಕ್ಕೆ ಬಂದಿದ್ದು, ಹಲವು ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಅದೇ ರೀತಿ ಕೆಲವು ನಿರ್ದೇಶಕರನ್ನು ಕೂಡ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಆ ಪೈಕಿ ಸಂಜಯ್​ ಲೀಲಾ ಬನ್ಸಾಲಿ (Sanjay Leela Bhansali) ಜೊತೆ ಅವರು ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಸಂಜಯ್​ ಲೀಲಾ ಬನ್ಸಾಲಿ ಮತ್ತು ಪ್ರಿಯಾಂಕಾ ಚೋಪ್ರಾ ಅವರ ನಡುವೆ ಉತ್ತಮ ಒಡನಾಟ ಇದೆ. ಈ ಹಿಂದೆ ಅವರು ‘ರಾಮ್​ ಲೀಲಾ’, ‘ಬಾಜಿರಾವ್​ ಮಸ್ತಾನಿ’ ಸಿನಿಮಾಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಅಲ್ಲದೇ ಸಂಜಯ್​ ಲೀಲಾ ಬನ್ಸಾಲಿ ಅವರ ಕಸುಬುದಾರಿಕೆ ಮೇಲೆ ಪ್ರಿಯಾಂಕಾ ಚೋಪ್ರಾ ಅವರಿಗೆ ಸಖತ್​ ನಂಬಿಕೆ ಇದೆ. ಹಾಗಾಗಿ ಅವರ ಜೊತೆಗಿನ ಹೊಸ ಸಿನಿಮಾಗೆ ಸಹಿ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಿಯಾಂಕಾ ಚೋಪ್ರಾ ಮತ್ತು ಸಂಜಯ್​ ಲೀಲಾ ಬನ್ಸಾಲಿ ಅವರ ಕಾಂಬಿನೇಷನ್​ನಲ್ಲಿ ಬರಲಿರುವ ಈ ಹೊಸ ಸಿನಿಮಾದಲ್ಲಿ ಆ್ಯಕ್ಷನ್​-ಥ್ರಿಲ್ಲರ್​ ಕಥೆ ಇರಲಿದೆ. ಬೇರೆ ಬೇರೆ ಕಾಲಘಟ್ಟದಲ್ಲಿ ಈ ಸಿನಿಮಾದ ಕಥೆ ಸಾಗುತ್ತದೆ. ಕಾಲಘಟ್ಟ ಯಾವುದು ಹಾಗೂ ಪ್ರಿಯಾಂಕಾ ಅವರ ಕಾಸ್ಟ್ಯೂಮ್​ ಯಾವ ರೀತಿ ಇರಲಿದೆ ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತಿದೆಯಂತೆ. ಒಂದು ವೇಳೆ ಈ ಸಿನಿಮಾ ಸೆಟ್ಟೇರಿದ್ದೇ ಹೌದಾದರೆ ದೊಡ್ಡ ಮಟ್ಟದ ಹೈಪ್​ ಸೃಷ್ಟಿ ಮಾಡಲಿದೆ.

ಇದನ್ನೂ ಓದಿ: ಪತಿ ನಿಕ್ ಜೋನಸ್ ಜೊತೆ ಅಯೋಧ್ಯೆಗೆ ಭೇಟಿ ನೀಡಿದ ಪ್ರಿಯಾಂಕಾ ಚೋಪ್ರಾ

ಇಷ್ಟು ಮಾತ್ರವಲ್ಲದೇ ಇನ್ನೂ ಕೆಲವು ಕೆಲಸಗಳ ಸಲುವಾಗಿ ಪ್ರಿಯಾಂಕಾ ಚೋಪ್ರಾ ಅವರು ಮುಂಬೈಗೆ ಬಂದಿದ್ದಾರೆ. ಅವರದ್ದೇ ಪ್ರೊಡಕ್ಷನ್​ ಹೌಸ್​ ಇದೆ. ಅದರಲ್ಲಿ ಮೂರು-ನಾಲ್ಕು ಪ್ರಾಜೆಕ್ಟ್​ಗಳನ್ನು ಆರಂಭಿಸಲಾಗುತ್ತಿದೆ. ಆ ಸಲುವಾಗಿ ಕೆಲವರ ಜೊತೆ ಪ್ರಿಯಾಂಕಾ ಚೋಪ್ರಾ ಮೀಟಿಂಗ್​ ನಡೆಸಿದ್ದಾರೆ. ಈ ಎಲ್ಲ ಕೆಲಸಗಳನ್ನು ಮುಗಿಸಲು ಅವರು ಭಾರತಕ್ಕೆ ಬಂದಿದ್ದಾರೆ ಎಂದು ಆಪ್ತ ಮೂಲಗಳು ಹೇಳಿರುವುದಾಗಿ ‘ಪಿಂಕ್​ವಿಲ್ಲಾ’ ವರದಿ ಮಾಡಿದೆ.

ಇದನ್ನೂ ಓದಿ: ಅಂಬಾನಿ ಪ್ರೀ ವೆಡ್ಡಿಂಗ್ ಸಂಭ್ರಮಕ್ಕೆ ಪ್ರಿಯಾಂಕಾ ಚೋಪ್ರಾ ಬರಲಿಲ್ಲ ಏಕೆ?

ಅಮೆರಿಕದ ಪಾಪ್​ ಸಿಂಗರ್​ ನಿಕ್​ ಜೋನಸ್​​ ಅವರ ಜೊತೆ ಪ್ರಿಯಾಂಕಾ ಚೋಪ್ರಾ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಹಾಲಿವುಡ್​ ವಲಯದಲ್ಲಿ ಅವರು ಈಗ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಸ್​ ಆರೈಕೆಯಲ್ಲೂ ಅವರು ಬ್ಯುಸಿ ಆಗಿದ್ದಾರೆ. ತಮ್ಮ ದಿನಚರಿ ಬಗ್ಗೆ ಅಪ್​ಡೇಟ್​ ನೀಡಲು ಸೋಶಿಯಲ್​ ಮೀಡಿಯಾದಲ್ಲಿ ಪ್ರಿಯಾಂಕಾ ಚೋಪ್ರಾ ಆ್ಯಕ್ಟೀವ್​ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ