ಕೋರ್ಟ್ ಕೇಸ್ನಲ್ಲಿ ಗೆದ್ದ ಕಪಿಲ್ ಶರ್ಮಾ; ಅರ್ಜಿ ಹಾಕಿದವನಿಗೆ ಕಿವಿಮಾತು ಹೇಳಿದ ಕೋರ್ಟ್
‘ದಿ ಕಪಿಲ್ ಶರ್ಮಾ ಶೋ’ನಲ್ಲಿ ಆಕ್ಷೇಪಾರ್ಹ ವಿಚಾರ ಹಾಗೂ ಮಹಿಳೆಯರಿಗೆ ಅಗೌರವ ಕೊಡುವ ರೀತಿಯಲ್ಲಿ ಇದೆ ಎಂದು ವ್ಯಕ್ತಿಯೋರ್ವ ಗ್ವಾಲಿಯರ್ ಹೈಕೋರ್ಟ್ನಲ್ಲಿ ಎರಡು ವರ್ಷಗಳ ಹಿಂದೆ ಕೇಸ್ ದಾಖಲು ಮಾಡಿದ್ದರು. ಪ್ರಕರಣ ಕಪಿಲ್ ಪರವಾಗಿದೆ.
ನಟ ಕಪಿಲ್ ಶರ್ಮಾ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಇದೆ. ಅವರ ಖ್ಯಾತಿ ಸದ್ಯಕ್ಕಂತೂ ಕಡಿಮೆ ಆಗುವಂಥದ್ದಲ್ಲ. ಕಪಿಲ್ ಶರ್ಮಾ ಅವರು ‘ದಿ ಕಪಿಲ್ ಶರ್ಮಾ ಶೋ’ (The Kapil Sharma Show) ನಡೆಸಿಕೊಟ್ಟಿದ್ದರು. ಈ ಶೋಗೆ ಕಾನೂನು ತೊಡಕು ಉಂಟಾಗಿತ್ತು. ಎರಡು ವರ್ಷಗಳ ಹಿಂದೆ ಶೋ ವಿರುದ್ಧ ಕೇಸ್ ಹಾಕಲಾಗಿತ್ತು. ಈ ಪ್ರಕರಣದಲ್ಲಿ ಕಪಿಲ್ ಶರ್ಮಾ ಅವರಿಗೆ ಗೆಲುವು ಸಿಕ್ಕಿದೆ. ಈ ಕೇಸ್ನ ಕೋರ್ಟ್ ರದ್ದು ಮಾಡಿದೆ.
‘ದಿ ಕಪಿಲ್ ಶರ್ಮಾ ಶೋ’ನಲ್ಲಿ ಆಕ್ಷೇಪಾರ್ಹ ವಿಚಾರ ಹಾಗೂ ಮಹಿಳೆಯರಿಗೆ ಅಗೌರವ ಕೊಡುವ ರೀತಿಯಲ್ಲಿ ಇದೆ ಎಂದು ವ್ಯಕ್ತಿಯೋರ್ವ ಗ್ವಾಲಿಯರ್ ಹೈಕೋರ್ಟ್ನಲ್ಲಿ ಎರಡು ವರ್ಷಗಳ ಹಿಂದೆ ಕೇಸ್ ದಾಖಲು ಮಾಡಿದ್ದರು. ಕಪಿಲ್ ಶರ್ಮಾ ಅವರು ನಡೆಸಿಕೊಟ್ಟ ಕೋರ್ಟ್ರೂಂನ ದೃಶ್ಯವೊಂದನ್ನು ತೋರಿಸಿ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಅರ್ಜಿದಾರರು ಕೋರಿದ್ದರು. ಆದರೆ, ಇದನ್ನು ಕಪಿಲ್ ಶರ್ಮಾ ಅವರು ವಿರೋಧಿಸಿದ್ದರು.
ಗ್ವಾಲಿಯರ್ ಕೋರ್ಟ್ ಈ ಪ್ರಕರಣವನ್ನು ರದ್ದು ಮಾಡಿದೆ. ‘ಕೋರ್ಟ್ನ ಸಮಯವನ್ನು ಸ್ವಂತ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಬಾರದು’ ಎಂದು ಖಡಕ್ ಆಗಿ ಹೇಳಿದೆ. ಇದರಿಂದ ಅರ್ಜಿದಾರರಿಗೆ ಹಿನ್ನಡೆ ಆಗಿದೆ. ಕಪಿಲ್ ಶರ್ಮಾ ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ’ ಶೋನಲ್ಲಿ ಭಾಗಿ ಆಗುತ್ತಿದ್ದಾರೆ. ಈ ಸೀರಿಸ್ನ ಟ್ರೇಲರ್ ಮಾರ್ಚ್ 23ರಂದು ರಿಲೀಸ್ ಆಗಲಿದೆ. ಈ ಶೋ ನೆಟ್ಫ್ಲಿಕ್ಸ್ನಲ್ಲಿ ಮಾರ್ಚ್ 29ರಿಂದ ಪ್ರಸಾರ ಆಗಲಿದೆ. ಈ ಶೋನಲ್ಲಿ ವಿಕ್ಕಿ ಗ್ರೋವರ್ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಸುನಿಲ್ ಗ್ರೋವರ್ಗೆ ಬೂಟ್ನಲ್ಲಿ ಹೊಡೆದಿದ್ದ ಕಪಿಲ್ ಶರ್ಮಾ
ಕಪಿಲ್ ಶರ್ಮಾ ಅವರು ಕಿರುತೆರೆ ಜೊತೆ ಸಿನಿಮಾ ಕೆಲಸಗಳಲ್ಲೂ ಬ್ಯುಸಿ ಇದ್ದಾರೆ. ಅವರು ಕರೀನಾ ಕಪೂರ್, ಟಬು ಹಾಗೂ ಕೃತಿ ಸನೋನ್ ನಟನೆಯ ‘ಕ್ರ್ಯೂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಹಿಂದಿ ನಿರ್ದೇಶಕ ರಾಜೇಶ್ ಕೃಷ್ಣನ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮಾರ್ಚ್ 29ರಂದು ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:45 pm, Sat, 23 March 24