IND vs WI: ಸಚಿನ್ರ ವಿಶೇಷ ದಾಖಲೆ ಪಟ್ಟಿಗೆ ಸೇರ್ಪಡೆಯಾದ ವಿರಾಟ್ ಕೊಹ್ಲಿ, ಅಶ್ವಿನ್
India vs West Indies 1st Test: ಕ್ರಿಕೆಟ್ ಇತಿಹಾಸದಲ್ಲೇ ತಂದೆ ಹಾಗೂ ಮಗನ ವಿರುದ್ಧ ಪಂದ್ಯಗಳನ್ನಾಡಿದ ಭಾರತೀಯ ಎಂಬ ವಿಶೇಷ ದಾಖಲೆಯೊಂದು ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು.

India vs West Indies: ಡೊಮಿನಿಕಾದಲ್ಲಿ ನಡೆಯುತ್ತಿರುವ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿರಾಟ್ ಕೊಹ್ಲಿ (Virat Kohli) ಹಾಗೂ ರವಿಂಚದ್ರನ್ ಅಶ್ವಿನ್ (R Ashwin) ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ. ಆದರೆ ಈ ದಾಖಲೆಯ ಕಾರಣಕರ್ತರು ವೆಸ್ಟ್ ಇಂಡೀಸ್ ಆಟಗಾರ ತೇಜ್ನರೈನ್ ಚಂದ್ರಪಾಲ್ ಎಂಬುದು ಇಲ್ಲಿ ಮತ್ತೊಂದು ವಿಶೇಷ.
ಅಂದರೆ ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿದ ವೆಸ್ಟ್ ಇಂಡೀಸ್ ಪ್ಲೇಯಿಂಗ್ ಇಲೆವೆನ್ನಲ್ಲಿ ತೇಜ್ನರೈನ್ ಚಂದ್ರಪಾಲ್ ಸ್ಥಾನ ಪಡೆದಿದ್ದರು. ಇತ್ತ ತೇಜ್ನರೈನ್ ಚಂದ್ರಪಾಲ್ ಒಳಗೊಂಡಿರುವ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ತಂದೆ ಹಾಗೂ ಮಗನ ವಿರುದ್ಧ ಪಂದ್ಯಗಳನ್ನಾಡಿದ ವಿಶೇಷ ದಾಖಲೆಯೊಂದು ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಅಶ್ವಿನ್ ಪಾಲಾಯಿತು.
ಇದಕ್ಕೂ ಮುನ್ನ 2011 ರಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ವಿರಾಟ್ ಕೊಹ್ಲಿ ಎಡಗೈ ದಾಂಡಿಗ ಶಿವನರೈನ್ ಚಂದ್ರಪಾಲ್ ಒಳಗೊಂಡಿದ್ದ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿದಿದ್ದರು. ಇದೀಗ ಶಿವನರೈನ್ ಚಂದ್ರಪಾಲ್ ಅವರ ಮಗ ತೇಜ್ನರೈನ್ ಟೀಮ್ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ತಂದೆ ಹಾಗೂ ಮಗನ ವಿರುದ್ಧ ಪಂದ್ಯಗಳನ್ನಾಡಿದ ವಿಶೇಷ ಕೀರ್ತಿಗೆ ಕೊಹ್ಲಿ ಹಾಗೂ ಅಶ್ವಿನ್ ಪಾತ್ರರಾದರು.
ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ವಿಶೇಷ ದಾಖಲೆ:
ಕ್ರಿಕೆಟ್ ಇತಿಹಾಸದಲ್ಲೇ ತಂದೆ ಹಾಗೂ ಮಗನ ವಿರುದ್ಧ ಪಂದ್ಯಗಳನ್ನಾಡಿದ ಭಾರತೀಯ ಎಂಬ ವಿಶೇಷ ದಾಖಲೆಯೊಂದು ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಆಸ್ಟ್ರೇಲಿಯಾದ ಜೆಫ್ ಮಾರ್ಷ್ (ತಂದೆ) ಹಾಗೂ ಶಾನ್ ಮಾರ್ಷ್ (ಮಗ) ವಿರುದ್ಧ ಸಚಿನ್ ತೆಂಡೂಲ್ಕರ್ ಪಂದ್ಯಗಳನ್ನಾಡಿದ್ದರು. ಈ ಮೂಲಕ ತಂದೆ ಮಗನ ವಿರುದ್ಧ ಪಂದ್ಯಗಳನ್ನಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಗೆ ಮತ್ತೆ ಟೆಸ್ಟ್ ತಂಡದ ನಾಯಕತ್ವ?
ಇದೀಗ ವಿರಾಟ್ ಕೊಹ್ಲಿ ಹಾಗೂ ಅಶ್ವಿನ್, ತೇಜ್ನರೈನ್ ಚಂದ್ರಪಾಲ್ (ಮಗ) ಹಾಗೂ ಶಿವನರೈನ್ ಚಂದ್ರಪಾಲ್ (ತಂದೆ) ವಿರುದ್ಧ ಪಂದ್ಯಗಳನ್ನಾಡಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಅಪರೂಪದ ದಾಖಲೆಯ ಪಟ್ಟಿಗೆ ಕಿಂಗ್ ಕೊಹ್ಲಿ ಹಾಗೂ ಅಶ್ವಿನ್ ಸೇರ್ಪಡೆಯಾಗಿದ್ದಾರೆ.
