T20 World cup: ಅಭ್ಯಾಸ ಪಂದ್ಯವನ್ನೂ ಕಡೆಗಣಿಸದ ಕೊಹ್ಲಿ: ಇಂಗ್ಲೆಂಡ್ ವಿರುದ್ಧದ ಮ್ಯಾಚ್​ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI

| Updated By: Vinay Bhat

Updated on: Oct 18, 2021 | 10:43 AM

India Probable Playing XI vs England Warm-Up Match: ಭಾರತ ಇಂದು ಟಿ20 ವಿಶ್ವಕಪ್​ನ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸುತ್ತಿದೆ. ಪ್ಯಾಕ್ಟೀಸ್ ಪಂದ್ಯವೆಂದು ಕಡೆಗಣಿಸದೆ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಅನ್ನೇ ಕಣಕ್ಕಿಳಿಸಲು ವಿರಾಟ್ ಕೊಹ್ಲಿ ತೀರ್ಮಾನಿಸಿದಂತಿದೆ.

T20 World cup: ಅಭ್ಯಾಸ ಪಂದ್ಯವನ್ನೂ ಕಡೆಗಣಿಸದ ಕೊಹ್ಲಿ: ಇಂಗ್ಲೆಂಡ್ ವಿರುದ್ಧದ ಮ್ಯಾಚ್​ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
ಭಾರತ ಹಾಗೂ ಇಂಗ್ಲೆಂಡ್ ನಡುವಣ ಅಭ್ಯಾಸ ಪಂದ್ಯದ ನೇರಪ್ರಸಾರವನ್ನು ಸ್ಟಾರ್ ಸ್ಫೋರ್ಸ್ಟ್ ನೆಟ್ವರ್ಕ್ ಮತ್ತು ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದಾಗಿದೆ.
Follow us on

ಈಗಾಗಲೇ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ (ICC T20 World Cup) ಚಾಲನೆ ಸಿಕ್ಕಿದ್ದು ಒಂದು ಕಡೆ ಮೊದಲ ಸುತ್ತಿನ ಪಂದ್ಯಗಳು ನಡೆಯುತ್ತಿದ್ದರೆ ಇತ್ತ ಅಭ್ಯಾಸ ಪಂದ್ಯಗಳು (Warm-Up Match) ಕೂಡ ಕುತೂಹಲ ಹೆಚ್ಚಿಸುತ್ತಿದೆ. ಇಂದು ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಇಂಗ್ಲೆಂಡ್ (India vs England) ವಿರುದ್ಧ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದೆ. ದುಬೈನ ಐಸಿಸಿ ಕ್ರಿಕೆಟ್ ಅಕಾಡೆಮಿ ಗ್ರೌಂಡ್​ನಲ್ಲಿ ಈ ಪಂದ್ಯ ನಡೆಯಲಿದ್ದು ಸಂಜೆ 7:30ಕ್ಕೆ ಶುರುವಾಗಲಿದೆ. ಅಭ್ಯಾಸ ಪಂದ್ಯವೆಂದು ಕಡೆಗಣಿಸದೆ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಲು ಕೊಹ್ಲಿ (Virat Kohli) ತಯಾರಾಗಿದ್ದಾರೆ. ಮಾಜಿ ನಾಯಕ ಎಂ. ಎಸ್ ಧೋನಿ (MS Dhoni) ಹೊಸ ಮಾರ್ಗದರ್ಶಕರಾಗಿ ತಂಡಕ್ಕೆ ಸ್ಪೂರ್ತಿ ತುಂಬುವ ಕೆಲಸ ಮಾಡುತ್ತಿದ್ದು, ಗ್ಲೇಮ್ ಪ್ಲಾನ್ ರೂಪಿಸುವುದು ಖಚಿತ. ಇತ್ತ ಇಂಗ್ಲೆಂಡ್ ತಂಡವನ್ನೂ ಕಡೆಗಣಿಸುವಂತಿಲ್ಲ. ಇಯಾನ್ ಮಾರ್ಗನ್ (Eion Morgan) ಪಡೆ ಭಾರತದಷ್ಟೆ ಬಲಿಷ್ಠದಿಂದ ಕೂಡಿದೆ.

ಟೀಮ್ ಇಂಡಿಯಾಕ್ಕೆ ಓಪನರ್​ಗಳದ್ದೇ ದೊಡ್ಡ ತಲೆನೋವಾಗಿದೆ. ಈ ಗೊಂದಲವನ್ನು ಅಭ್ಯಾಸ ಪಂದ್ಯದಲ್ಲೇ ಬಗೆಹರಿಸಬೇಕಿದೆ. ರೋಹಿತ್ ಶರ್ಮಾ ಜೊತೆ ಕಣಕ್ಕಿಳಿಯಲು ಕೆ. ಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಸಿದ್ಧರಾಗಿದ್ದಾರೆ. ಹೀಗಾಗಿ ಯಾರಿಗೆ ಸ್ಥಾನ ಎಂಬುದು ಕುತೂಹಲ ಕೆರಳಿಸಿದೆ. ಮೇಲ್ನೋಟಕ್ಕೆ ಐಪಿಎಲ್​ 2021ರಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದು ಭರ್ಜರಿ ಫಾರ್ಮ್​ನಲ್ಲಿರುವ ಕೆ. ಎಲ್ ರಾಹುಲ್​ಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ. ಆದರೆ, ಲೀಗ್​ನ ಕೊನೇಯ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಇಶಾನ್ ಕಿಶನ್​ರನ್ನ ಆಡಿಸಿದರೆ ಅಚ್ಚರಿ ಪಡಬೇಕಿಲ್ಲ.

ನಾಯಕ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. 4ನೇ ಕ್ರಮಾಂಕ ಸೂರ್ಯಕುಮಾರ್​ ಯಾದವ್​ಗೆ ನೀಡುವ ಸಂಭವವಿದೆ. ಅಥವಾ ಆರಂಭಿಕರಾಗಿ ರೋಹಿತ್-ರಾಹುಲ್ ಆಡಿದರೆ ನಾಲ್ಕನೇ ಕ್ರಮಾಂಕ ಇಶಾನ್ ಕಿಶನ್​ಗೂ ನೀಡಬಹುದು. 5ನೇ ಸ್ಥಾನದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್ ಆಡಲಿದ್ದಾರೆ. 6ನೇ ಕ್ರಮಾಂಕದಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆಡುವುದು ಖಚಿತ. ಅಂತೆಯೆ ನಂತರದಲ್ಲಿ ರವೀಂದ್ರ ಜಡೇಜಾರನ್ನು ಕಣಕ್ಕಿಳಿಸಬಹುದು.

ಇನ್ನು ಬೌಲಿಂಗ್ ವಿಭಾಗದಲ್ಲಿ ಭಾರತಕ್ಕೆ ಸಾಕಷ್ಟು ಆಯ್ಕೆಗಳಿವೆ. ಈ ಪೈಕಿ ಜಸ್​ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ಮೊದಲ ಆಯ್ಕೆಯಲ್ಲಿ ಸಿಗಲಿದ್ದಾರೆ. ಯಾರಿಗಾದರು ವಿಶ್ರಾಂತಿ ನೀಡಿದರೆ ಶಾರ್ದೂಲ್ ಥಾಕೂರ್ ಆಡುವ ಬಳಗದಲ್ಲಿ ಸ್ಥಾನ ಪಡೆಯಬಹುದು. ಸ್ಪಿನ್ ವಿಭಾಗದಲ್ಲಿ ರಾಹುಲ್ ಚಹಾರ್ ಅಥವಾ ವರುಣ್ ಚಕ್ರವರ್ತಿ ಪೈಕಿ ವರುಣ್​ಗೆ ಅವಕಾಶ ಬಹುತೇಕ ಖಚಿತವಾಗಿದೆ.

ಪಿಚ್ ಹೇಗಿದೆ?:

ಅಭ್ಯಾಸ ಪಂದ್ಯಕ್ಕೆ ಬಳಕೆ ಮಾಡುತ್ತಿರುವ ಐಸಿಸಿ ಅಕಾಡೆಮಿ ಕ್ರೀಡಾಂಗಣದಲ್ಲಿ ಸ್ಕಾಟ್ಲೆಂಡ್ ಮತ್ತು ನಮಿಬಿಯಾ ನಡುವೆ ಒಂದು ಪಂದ್ಯ ನಡೆದಿದೆ. ಭಾರತ-ಇಂಗ್ಲೆಂಡ್‌ ನಡುವಣ ಪಂದ್ಯಕ್ಕೂ ಮುನ್ನ ಈ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು ಕಾದಾಟ ನಡೆಸಲಿವೆ. ಬಳಕೆಯಾಗಿರುವ ಪಿಚ್‌ ಆದ ಕಾರಣಕ್ಕೆ ಇಲ್ಲಿ ಟಾಸ್‌ ಗೆದ್ದ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಳ್ಳಲಿದೆ. ಮೊದಲು ಬ್ಯಾಟ್‌ ಮಾಡಿದ ತಂಡ 150 ರನ್‌ಗಳಿಸಿದರೆ ಜಿದ್ದಾಜಿದ್ದಿನ ಪೈಪೋಟಿ ಮೂಡಿಬರಲಿದೆ. ರನ್‌ ಚೇಸ್‌ ಮಾಡುವ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚಿದೆ.

ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಭಾರತ ಸಂಭಾವ್ಯ ಪ್ಲೇಯಿಂಗ್ XI:

ರೋಹಿತ್‌ ಶರ್ಮಾ, ಕೆಎಲ್‌ ರಾಹುಲ್‌, ವಿರಾಟ್ ಕೊಹ್ಲಿ (ನಾಯಕ),  ಸೂರ್ಯಕುಮಾರ್‌ ಯಾದವ್‌,  ರಿಷಭ್ ಪಂತ್‌ (ವಿಕೆಟ್‌ಕೀಪರ್‌), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ, ವರುಣ್ ಚಕ್ರವರ್ತಿ.

IND vs ENG Warm-Up Match: ಇಂದು ಭಾರತ-ಇಂಗ್ಲೆಂಡ್ ಅಭ್ಯಾಸ ಪಂದ್ಯ: ಎಷ್ಟು ಗಂಟೆಗೆ ಪ್ರಾರಂಭ?, ಲೈವ್ ವೀಕ್ಷಿಸುವುದು ಹೇಗೆ?

ICC Mens T20 World Cup: ಟಿ20 ವಿಶ್ವಕಪ್​ನಲ್ಲಿಂದು ಎರಡು ಪಂದ್ಯ: ಐರ್ಲೆಡ್ vs ನೆದರ್ಲೆಂಡ್ಸ್​ ಮತ್ತು ಶ್ರೀಲಂಕಾ vs ನಬಿಯಾ

(Virat Kohli Team India will meet England today in warm-up match T20 World Cup Here Team India Probable Playing XI)