Sad news: ಶ್ರೀಲಂಕಾ ಟೆಸ್ಟ್ ತಂಡದ ಮೊದಲ ನಾಯಕ ಬಂಡುಲ ವರ್ನಾಪುರ ನಿಧನ; ವಿಶ್ವ ಕ್ರಿಕೆಟ್ ಸಂತಾಪ
Bandula Warnapura: ಶ್ರೀಲಂಕಾದ ಮೊದಲ ಟೆಸ್ಟ್ ನಾಯಕನಾಗುವುದರ ಜೊತೆಗೆ, ಶ್ರೀಲಂಕಾ ಪರವಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಚೆಂಡನ್ನು ಆಡಿದ ಮೊದಲ ಬ್ಯಾಟ್ಸ್ ಮನ್ ಎನಿಸಿಕೊಂಡರು. ಟೆಸ್ಟ್ ಕ್ರಿಕೆಟ್ನಲ್ಲಿ ಶ್ರೀಲಂಕಾಗೆ ಮೊದಲ ರನ್ ಕೂಡ ಬಂಡುಲ ವರ್ನಾಪುರ ಬ್ಯಾಟ್ನಿಂದ ಹೊರಬಂದಿತು.
ಶ್ರೀಲಂಕಾದ ಮೊದಲ ಟೆಸ್ಟ್ ನಾಯಕ ಬಂಡುಲ ವರ್ನಾಪುರ ಅಕ್ಟೋಬರ್ 18 ರಂದು ತಮ್ಮ 69 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಶ್ರೀಲಂಕಾ ಪರ ಒಟ್ಟು 16 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 4 ಟೆಸ್ಟ್‌ಗಳು ಮತ್ತು 12 ಏಕದಿನ ಪಂದ್ಯಗಳು ಸೇರಿವೆ. ಓಪನರ್ ಬ್ಯಾಟ್ಸ್ಮನ್ ಆಗಿದ್ದ ಬಂಡುಲ ವರ್ಣಪುರ ವಿಶ್ವಕಪ್ ಹಾದಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಿದ್ದರು. ಅವರು ತಮ್ಮ ಮೊದಲ ಅಂತರಾಷ್ಟ್ರೀಯ ಪಂದ್ಯವನ್ನು 1975 ರ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಓಲ್ಡ್ ಟ್ರಾಫೋರ್ಡ್‌ನಲ್ಲಿ ಆಡಿದರು. ಮುಂದಿನ ಪಂದ್ಯದಲ್ಲಿ, ಆಸ್ಟ್ರೇಲಿಯಾದ ಬಿರುಗಾಳಿಯ ಬೌಲಿಂಗ್ ಮುಂದೆ, ಅವರು 31 ಎಸೆತಗಳಲ್ಲಿ 39 ರನ್ ಗಳಿಸಿದರು. ಬಂಡುಲ ಮುಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡದ ನಾಯಕತ್ವ ವಹಿಸಿ 1979 ರ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಅದ್ಭುತ ಜಯ ಗಳಿಸಿದರು. 1981 ರಲ್ಲಿ ಪಾಕಿಸ್ತಾನದ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಬಂಡುಲ ತಮ್ಮ ವೈಯಕ್ತಿಕ (77) ಅತ್ಯಧಿಕ ಸ್ಕೋರ್ ಗಳಿಸಿದರು.
ಬಂಡುಲ ವರ್ನಾಪುರ ಸಾವಿಗೆ ವಿಶ್ವ ಕ್ರಿಕೆಟ್ ಸಂತಾಪದ ಸೂಚಿಸಿದೆ. ಶ್ರೀಲಂಕಾದ ಮಾಜಿ ಓಪನರ್ ಸನತ್ ಜಯಸೂರ್ಯ ಅವರು ಬಂಡುಲಾ ವೆರ್ನಾಪುರ ಸಾವಿಗೆ ಸಂತಾಪ ಸೂಚಿಸಿದ, ಇದು ತುಂಬಾ ದುಃಖದ ದಿನ. ಶ್ರೀಲಂಕಾದ ಮೊದಲ ಟೆಸ್ಟ್ ನಾಯಕ ಇಂದು ತಮ್ಮ ಕೊನೆಯ ಇನ್ನಿಂಗ್ಸ್ ಆಡಿದ್ದಾರೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದಿದ್ದಾರೆ.
ಮೊದಲ ಟೆಸ್ಟ್ ನಾಯಕ 1982 ರಲ್ಲಿ ಶ್ರೀಲಂಕಾ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಿದಾಗ, ಅದಕ್ಕೆ ವರ್ನಾಪುರ ನಾಯಕತ್ವ ವಹಿಸಿದ್ದರು. ಈ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಕೊಲಂಬೊದಲ್ಲಿ ಆಡಲಾಯಿತು. ಶ್ರೀಲಂಕಾದ ಮೊದಲ ಟೆಸ್ಟ್ ನಾಯಕನಾಗುವುದರ ಜೊತೆಗೆ, ಶ್ರೀಲಂಕಾ ಪರವಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಚೆಂಡನ್ನು ಆಡಿದ ಮೊದಲ ಬ್ಯಾಟ್ಸ್ ಮನ್ ಎನಿಸಿಕೊಂಡರು. ಟೆಸ್ಟ್ ಕ್ರಿಕೆಟ್ನಲ್ಲಿ ಶ್ರೀಲಂಕಾಗೆ ಮೊದಲ ರನ್ ಕೂಡ ಬಂಡುಲ ವರ್ನಾಪುರ ಬ್ಯಾಟ್ನಿಂದ ಹೊರಬಂದಿತು. ಈ ಟೆಸ್ಟ್ನಲ್ಲಿ ವರ್ನಾಪುರ ಮತ್ತೊಂದು ದಾಖಲೆ ಮಾಡಿರು. ಅದೆನೆಂದರೆ ಅವರು ಬ್ಯಾಟಿಂಗ್ ಆರಂಭಿಸುವುದರ ಜೊತೆಗೆ ಲಂಕಾ ತಂಡದ ಪರ ಬೌಲಿಂಗ್ ಕೂಡ ಆರಂಭಿಸಿದರು.
Published On - 2:46 pm, Mon, 18 October 21