RCB playoffs: ನೆಟ್ ರನ್​ ರೇಟ್ ಮೈನಸ್​ನಲ್ಲಿರುವ ಆರ್​ಸಿಬಿಗೆ ಪ್ಲೇ ಆಫ್​ಗೇರಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು?

| Updated By: Vinay Bhat

Updated on: Sep 30, 2021 | 7:57 AM

RR vs RCB, IPL 2021: ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಅಂಕ ಸಂಪಾದಿಸಿದೆ. ವಿರಾಟ್ ಕೊಹ್ಲಿ ಪಡೆಗೆ ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿವೆ.

RCB playoffs: ನೆಟ್ ರನ್​ ರೇಟ್ ಮೈನಸ್​ನಲ್ಲಿರುವ ಆರ್​ಸಿಬಿಗೆ ಪ್ಲೇ ಆಫ್​ಗೇರಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು?
Virat Kohli RR vs RCB
Follow us on

ದುಬೈನಲ್ಲಿ ಬುಧವಾರ ನಡೆದ ಐಪಿಎಲ್ 2021ರ (IPL 2021) 43ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ತಂಡ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell), ಯುಜ್ವೇಂದ್ರ ಚಹಾಲ್ (Yuzvendra Chahal) ಹೀಗೆ ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಮಿಂಚಿದ ವಿರಾಟ್ ಕೊಹ್ಲಿ (Virat Kohli) ಪಡೆ ಯುಎನಲ್ಲಿ ಸತತ ಎರಡನೇ ಗೆಲುವು ಕಂಡಿತು. ಆರ್​ಸಿಬಿ ಈ ಪಂದ್ಯ ಗೆದ್ದರೂ ಪಾಯಿಂಟ್ ಟೇಬಲ್​ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 11 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು, ನಾಲ್ಕರಲ್ಲಿ ಸೋತು 14 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಅಲ್ಲದೆ ಬೆಂಗಳೂರು ತಂಡದ ನೆಟ್ ರನ್ ರೇಟ್ ಕೂಡ ಮೈನಸ್​ 0.200 ನಲ್ಲಿಯೇ ಇದೆ. ಹಾಗಾದ್ರೆ ಕೊಹ್ಲಿ ಟೀಮ್ ಪ್ಲೇ ಆಫ್ (RCB Playoff)​ ಹಂತಕ್ಕೆ ಲಗ್ಗೆಯಿಡಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು?.

ಸದ್ಯ ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಾಯಿಂಟ್ ಟೇಬಲ್​ನಲ್ಲಿ ಮೊದಲ ಎರಡು ಸ್ಥಾನ ಪಡೆದುಕೊಂಡು ಪ್ಲೇ ಆಫ್ ಹಂತವನ್ನು ಬಹುತೇಕ ಖಚಿತ ಪಡಿಸಿಕೊಂಡಿದೆ. ಆರ್​ಸಿಬಿ ಮೂರನೇ ಸ್ಥಾನ ಪಡೆದರೆ ನಾಕೌಟ್ ಹಂತಕ್ಕೆ ತಲುಪಲಿದೆ. 4ನೇ ಸ್ಥಾನಕ್ಕೆ ಯಾವ ತಂಡ ಎಂಬುದು ಈಗ ಕುತೂಹಲ.

ಯಾಕಂದ್ರೆ ನಾಲ್ಕನೇ ಸ್ಥಾನಕ್ಕಾಗಿ ನಾಲ್ಕು ತಂಡಗಳ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಆ ಒಂದು ಸ್ಥಾನಕ್ಕಾಗಿ ಹೋರಾಟ ಶುರು ಮಾಡಿದೆ. ಕೆಕೆಆರ್ ಮತ್ತು ಮುಂಬೈ ತಲಾ 10 ಅಂಕ ಸಂಪಾದಿಸಿದ್ದರೆ, ಆರ್​ಆರ್​ ಮತ್ತು ಪಂಜಾಬ್ ತಲಾ 8 ಅಂಕವನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

ಇತ್ತ ಆರ್​ಸಿಬಿ 14 ಅಂಕ ಸಂಪಾದಿಸಿದೆ. ಕೊಹ್ಲಿ ಪಡೆಗೆ ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿವೆ. ಅಕ್ಟೋಬರ್ 3 ರಂದು ಪಂಜಾಬ್ ಕಿಂಗ್ಸ್ ವಿರುದ್ಧ, ಅ. 6ಕ್ಕೆ ಹೈದರಾಬಾದ್ ವಿರುದ್ಧ ಮತ್ತು ಅ. 8 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯವನ್ನು ಆಡಲಿದೆ. ಈ ಮೂರರಲ್ಲಿ ಆರ್​ಸಿಬಿ ಕೇವಲ ಒಂದು ಪಂದ್ಯವನ್ನು ಗೆದ್ದರೆ ತನ್ನ ಪ್ಲೇ ಆಫ್ ಹಾದಿಯನ್ನು ಖಚಿತ ಪಡಿಸಿಕೊಳ್ಳಲಿದೆ. ಎಲ್ಲಾದರೂ ಮೂರು ಪಂದ್ಯ ಸೋತರೆ ಇತರೆ ತಂಡಗಳ ಫಲಿತಾಂಶದ ಮೇಲೆ ಆರ್​ಸಿಬಿ ಭವಿಷ್ಯ ನಿರ್ಧಾರವಾಗಲಿದೆ.

ಒಟ್ಟಾರೆ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿ ಅಂತಿಮ ಹಂತಕ್ಕೆ ತಲುಪುತ್ತಿದ್ದು ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ಇನ್ನೂ ಈ ಸಂದರ್ಭದಲ್ಲಿ ಐಪಿಎಲ್‌ ಆಡಳಿತ ಮಂಡಳಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಒಂದೇ ಸಮಯದಲ್ಲಿ ಎರಡು ಪಂದ್ಯಗಳನ್ನು ನಡೆಸುವ ತೀರ್ಮಾನಕ್ಕೆ ಬಂದಿದೆ. ಲೀಗ್‌ ಹಂತದ ಕೊನೆಯ ದಿನದ ಎರಡು ಪಂದ್ಯಗಳನ್ನು ಒಂದೇ ಸಮಯದಲ್ಲಿ ನಡೆಸಲು ನಿರ್ಧರಿಸಲಾಗಿದೆ.

ವೇಳಾಪಟ್ಟಿಯ ಪ್ರಕಾರ ಅ. 8ರಂದು ಹೈದರಾಬಾದ್‌-ಮುಂಬೈ ನಡುವಿನ ಅಬುಧಾಬಿ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಬೇಕಿತ್ತು. ಬಳಿಕ ಆರ್‌ಸಿಬಿ-ಡೆಲ್ಲಿ ಮುಖಾಮುಖಿ ರಾತ್ರಿ 7.30ಕ್ಕೆ ನಡೆಯಬೇಕಿತ್ತು. ಆದರೆ ಈ ಎರಡೂ ಪಂದ್ಯಗಳನ್ನು ಒಂದೇ ಸಮಯದಲ್ಲಿ ಸಂಜೆ 7.30ಕ್ಕೆ ಆರಂಭಿಸಲು ತೀರ್ಮಾನಿಸಲಾಗಿದೆ.

IPL 2021, SRH vs CSK: ಚೆನ್ನೈ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಹೈದರಾಬಾದ್: ಧೋನಿ ಪಡೆ ಗೆದ್ದರೆ ಏನಾಗಲಿದೆ?

(Virat Kohli Team RCB Royal Challengers Bangalore Just one to win go for playoff after clash Between RR vs RCB IPl 2021)