Virat Kohli: ಸ್ಲಿಪ್ನಲ್ಲಿ ವಿರಾಟ್ ಕೊಹ್ಲಿ ಹಿಡಿದ ಕ್ಯಾಚ್ ಕಂಡು ಸ್ತಬ್ಧವಾದ ಉಭಯ ತಂಡದ ಆಟಗಾರರು: ವಿಡಿಯೋ ನೋಡಿ
IND vs WI 1st ODI: ವೆಸ್ಟ್ ಇಂಡೀಸ್ ತಂಡವನ್ನು ಕೇವಲ 114 ರನ್ಗೆ ಆಲೌಟ್ ಮಾಡುವಲ್ಲಿ ಭಾರತದ ಫೀಲ್ಡರ್ಗಳ ಪಾತ್ರ ಕೂಡ ಮುಖ್ಯವಾಗಿತ್ತು. ಮುಖ್ಯವಾಗಿ ವಿರಾಟ್ ಕೊಹ್ಲಿ ಹಿಡಿದ ಒಂದು ಕ್ಯಾಚ್ ವಿಂಡೀಸ್ ಅನ್ನು ಮತ್ತಷ್ಟು ಕುಗ್ಗಿಸಿತು.
ಬಾರ್ಬಡೊಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ (India vs West Indies) ಭರ್ಜರಿ ಪ್ರದರ್ಶನ ತೋರಿ 5 ವಿಕೆಟ್ಗಳ ಅಮೋಘ ಜಯ ಸಾಧಿಸಿತು. ಕುಲ್ದೀಪ್ ಯಾದವ್ (Kuldeep Yadav) ಹಾಗೂ ರವೀಂದ್ರ ಜಡೇಜಾ ಸ್ಪಿನ್ ಬಿರುಗಾಳಿಗೆ ತತ್ತರಸಿದ ಕೆರಿಬಿಯನ್ ಪಡೆ ಅಲ್ಪ ಮೊತ್ತಕ್ಕೆ ಆಲೌಟ್ ಆಯಿತು. ಈ ಗೆಲುವಿನ ಮೂಲಕ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಕೆರಿಬಿಯನ್ ಪಡೆಯನ್ನು ಕೇವಲ 114 ರನ್ಗೆ ಆಲೌಟ್ ಮಾಡುವಲ್ಲಿ ಭಾರತದ ಫೀಲ್ಡರ್ಗಳು ಪ್ರಮುಖ ಪಾತ್ರ ವಹಿಸಿದರು. ಮುಖ್ಯವಾಗಿ ವಿರಾಟ್ ಕೊಹ್ಲಿ (Virat Kohli) ಹಿಡಿದ ಒಂದು ಕ್ಯಾಚ್ ವಿಂಡೀಸ್ ಅನ್ನು ಮತ್ತಷ್ಟು ಕುಗ್ಗಿಸಿತು.
ವೆಸ್ಟ್ ಇಂಡೀಸ್ ಅದಾಗಲೇ 96 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭ 18ನೇ ಓವರ್ನ ರವೀಂದ್ರ ಜಡೇಜಾ ಅವರ 4ನೇ ಎಸೆತದಲ್ಲಿ ಸ್ಪಿನ್ ಜಾದು ಅರಿಯಲು ವಿಫಲವಾದ ರೊಮರಿಯೊ ಶೆಫರ್ಡ್ ಸ್ಲಿಪ್ನಲ್ಲಿದ್ದ ವಿರಾಟ್ ಕೊಹ್ಲಿಗೆ ಕ್ಯಾಚಿತ್ತು ನಿರ್ಗಮಿಸಿದರು. ಸೆಕೆಂಡ್ ಸ್ಲಿಪ್ನಲ್ಲಿ ನಿತ್ತಿದ್ದ ಕೊಹ್ಲಿ ಒಂದೇ ಕೈಯಲ್ಲಿ ಡೈವ್ ಬಿದ್ದು ಅದ್ಭುತವಾಗಿ ಕ್ಯಾಚ್ ಹಿಡಿದರು. ಕೊಹ್ಲಿಯ ಈ ಮನಮೋಹಕ ಕ್ಯಾಚ್ ಕಂಡು ಎಲ್ಲ ಆಟಗಾರರು ಒಂದು ಕ್ಷಣ ದಂಗಾದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.
King Grab ?@imVkohli pulls off a stunner ?#INDvWIonFanCode #WIvIND pic.twitter.com/ozvuxgFTlm
— FanCode (@FanCode) July 27, 2023
IND vs WI: ಕೈಕೊಟ್ಟ ರೋಹಿತ್- ದ್ರಾವಿಡ್ ಪ್ಲಾನ್; ಬಯಲಾಯ್ತು ಯುವ ಟೀಂ ಇಂಡಿಯಾದ ಬಂಡವಾಳ
ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಲು ವೆಸ್ಟ್ ಇಂಡೀಸ್ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ನಾಯಕ ಶಾಯ್ ಹೋಪ್ ಕೆಲ ಹೊತ್ತು ಕ್ರೀಸ್ನಲ್ಲಿ ಇದ್ದಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ ಕೂಡ ನೆರವಾಗಲಿಲ್ಲ. ಹೋಪ್ 45 ಎಸೆತಗಳಲ್ಲಿ 43 ರನ್ ಬಾರಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ವಿಂಡೀಸ್ 23 ಓವರ್ಗಳಲ್ಲಿ ಕೇವಲ 114 ರನ್ಗಳಿಗೆ ಆಲೌಟ್ ಆಯಿತು. ಭಾರತ ಪರ ಕುಲ್ದೀಪ 4, ಜಡೇಜಾ 3, ಹಾರ್ದಿಕ, ಮುಖೇಶ್ ಹಾಗೂ ಥಾಕೂರ್ ತಲಾ 1 ವಿಕೆಟ್ ಪಡೆದರು.
ಸುಲಭ ಟಾರ್ಗೆಟ್ ಬೆನ್ನಟ್ಟಲು ಬಂದ ಭಾರತ ತನ್ನ ಬ್ಯಾಟಿಂಗ್ ಆರ್ಡರ್ನಲ್ಲಿ ಮಹತ್ವದ ಬದಲಾವಣೆ ಮಾಡಿತು. ಓಪನರ್ ಆಗಿ ರೋಹಿತ್ ಶರ್ಮಾ ಬಾರದೆ ಇಶಾನ್ ಕಿಶನ್ ಹಾಗೂ ಶುಭ್ಮನ್ ಗಿಲ್ ಕಣಕ್ಕಿಳಿದರು. ಕಿಶನ್ ಸ್ಫೋಟಕ ಬ್ಯಾಟಿಂಗ್ ನಡೆದ 46 ಎಸೆತಗಳಲ್ಲಿ 52 ರನ್ ಸಿಡಿಸಿದರೆ, ಗಿಲ್ 7 ರನ್ಗೆ ಔಟಾದರು. ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ 19 ರನ್ಗೆ ಸುಸ್ತಾದರು. ನಂತರ ಬಂದ ಹಾರ್ದಿಕ್ ಪಾಂಡ್ಯ 5 ರನ್ ಗಳಿಸಿ ರನೌಟ್ಗೆ ಬಲಿಯಾದರು.
ಶಾರ್ದೂಲ್ ಥಾಕೂರ್ 1 ರನ್ಗೆ ಔಟಾದರು. ಬಳಿಕ 7ನೇ ಕ್ರಮಾಂಕದಲ್ಲಿ ಬಂದ ರೋಹಿತ್ ಶರ್ಮಾ (ಅಜೇಯ 12), ರವೀಂದ್ರ ಜಡೇಜಾ (ಅಜೇಯ 16) 22.5 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿ ಗೆಲುವು ಸಾಧಿಸುವಂತೆ ಮಾಡಿದರು. ವೆಸ್ಟ್ ಇಂಡೀಸ್ ತಂಡದ ಪರ ಗುಡಕೇಶ್ ಮೋಟಿ 2 ವಿಕೆಟ್, ಜೇಡನ್ ಸೀಲ್ಸ್ ಹಾಗೂ ಯಾನಿಕ್ ಕ್ಯರಿಯಾ ತಲಾ 1 ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ