Virat Kohli: ವಿರಾಟ್ ಕೊಹ್ಲಿ ಬಗ್ಗೆ ಹೊರಬಿತ್ತು ಮತ್ತೊಂದು ಶಾಕಿಂಗ್ ನ್ಯೂಸ್: ರೋಹಿತ್ ಶರ್ಮಾ ಬಗ್ಗೆ ಅಚ್ಚರಿಯ ಹೇಳಿಕೆ

| Updated By: Vinay Bhat

Updated on: Sep 17, 2021 | 11:57 AM

Rohit Sharma: ಇತ್ತೀಚೆಗಷ್ಟೆ ವಿರಾಟ್ ಕೊಹ್ಲಿ ಆಯ್ಕೆ ಸಮಿತಿ ಸದಸ್ಯರನ್ನು ಭೇಟಿಯಾಗಿ 34 ವರ್ಷವಾಗಿರುವ ರೋಹಿತ್ ಶರ್ಮಾ ಅವರನ್ನು ಏಕದಿನ ಕ್ರಿಕೆಟ್​ನ ಉಪ ನಾಯಕನ ಸ್ಥಾನದಿಂದ ಕೆಳಗಿಳಿಸಿ ಎಂದಿದ್ದಾರೆ.

Virat Kohli: ವಿರಾಟ್ ಕೊಹ್ಲಿ ಬಗ್ಗೆ ಹೊರಬಿತ್ತು ಮತ್ತೊಂದು ಶಾಕಿಂಗ್ ನ್ಯೂಸ್: ರೋಹಿತ್ ಶರ್ಮಾ ಬಗ್ಗೆ ಅಚ್ಚರಿಯ ಹೇಳಿಕೆ
Virat Kohli and Rohit Sharma
Follow us on

ಐಸಿಸಿ ಟಿ-20 ವಿಶ್ವಕಪ್ (ICC T20 World Cup) ಬಳಿಕ ಟೀಮ್ ಇಂಡಿಯಾ (Team India) ಟಿ-20 ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯುತ್ತೇನೆ ಎಂದು ವಿರಾಟ್ ಕೊಹ್ಲಿ (Virat Kohli) ಹೇಳಿದ್ದೇ ತಡ ಮುಂದಿನ ನಾಯಕ, ಉಪ ನಾಯಕ ಯಾರು ಎಂಬ ಚರ್ಚೆ ಜೋರಾಗಿದೆ. ಇದರ ನಡುವೆ ಕೊಹ್ಲಿ ಬಗ್ಗೆ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಸ್ವತಃ ವಿರಾಟ್ ಕೊಹ್ಲಿ ಅವರೇ ಬಿಸಿಸಿಐ ಆಯ್ಕೆ ಸಮಿತಿ ಬಳಿ ಹೋಗಿ ರೋಹಿತ್ ಶರ್ಮಾ (Rohit Sharma) ಅವರನ್ನು ಏಕದಿನ ಕ್ರಿಕೆಟ್​ನ (ODI Cricket) ಉಪ ನಾಯಕ ಪಟ್ಟದಿಂದ ಕೆಳಗಿಳಿಸಿ ಎಂದು ಮನವಿ ಮಾಡಿದ್ದಾರಂತೆ. ಅಲ್ಲದೆ ಈ ಸ್ಥಾನಕ್ಕೆ ಮತ್ತೊಬ್ಬ ಆಟಗಾರನ ಹೆಸರನ್ನೂ ಸೂಚಿಸಿದ್ದಾರಂತೆ. ಜೊತೆಗೆ ಟಿ-20 ತಂಡಕ್ಕೂ ಉಪ ನಾಯಕ ಈ ಆಟಗಾರ ಆದರೆ ಉತ್ತಮ ಎಂಬ ಅಭಿಪ್ರಾಯ ಹೊರಹಾಕಿದ್ದಾರಂತೆ. ಸದ್ಯ ಈ ಸುದ್ದಿ ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಹೌದು, ವರದಿ ಪ್ರಕಾರ, ಇತ್ತೀಚೆಗಷ್ಟೆ ವಿರಾಟ್ ಕೊಹ್ಲಿ ಆಯ್ಕೆ ಸಮಿತಿ ಸದಸ್ಯರನ್ನು ಭೇಟಿಯಾಗಿ 34 ವರ್ಷವಾಗಿರುವ ರೋಹಿತ್ ಶರ್ಮಾ ಅವರನ್ನು ಏಕದಿನ ಕ್ರಿಕೆಟ್​ನ ಉಪ ನಾಯಕನ ಸ್ಥಾನದಿಂದ ಕೆಳಗಿಳಿಸಿ ಎಂದಿದ್ದಾರೆ. ಜೊತೆಗೆ ಕೆ. ಎಲ್ ರಾಹುಲ್ ಅವರಿಗೆ ಈ ಜವಾಬ್ದಾರಿ ನೀಡಿ ಎಂದು ಕೇಳಿಕೊಂಡಿದ್ದಾರೆ. ಅಂತೆಯೆ ಟಿ-20 ಉಪ ನಾಯಕನ ಸ್ಥಾನವನ್ನು ರಿಷಭ್ ಪಂತ್ ಅವರ ಹೆಗಲಿಗೆ ಹಾಕಿ ಎಂದು ಮನವಿ ಮಾಡಿದ್ದಾರೆ.

ಇನ್ನೂ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್​ನಲ್ಲಿ ನಾಯಕನಾಗಿ ಕೆಲ ಸಮಯ ಮುಂದುವರೆಯಲು ಇಚ್ಚಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದ್ದು, ಏಕದಿನದ ನಾಯಕತ್ವವನ್ನು 2023 ವಿಶ್ವಕಪ್ ಬಳಿಕ ತ್ಯಜಿಸುವ ಯೋಚನೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಾರೆ ಟೀಮ್ ಇಂಡಿಯಾದಲ್ಲಿ ನಾಯಕತ್ವದ ಕಿಚ್ಚು ಹಂಚಿದ್ದು ದೊಡ್ಡ ಮಟ್ಟದಲ್ಲಿ ಉರಿಯುತ್ತಿದೆ. ಅಂತಿಮವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಯಾರಿಗೆ ಮಣೆಹಾಕಲಿದೆ ಎಂಬುದು ಕುತೂಹಲ ಕೆರಳಿಸಿದೆ. ಮೂಲಗಳ ಪ್ರಕಾರ ಈ ಎಲ್ಲ ಬೆಳವಣಿಗೆ ಕುರಿತು ಬಿಸಿಸಿಐ ಟಿ-20 ವಿಶ್ವಕಪ್ ಅಂತಿಮ ಆಗುವ ವೇಳೆಗೆ ಚರ್ಚೆ ನಡೆಸಿ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆಯಂತೆ.

ಐಸಿಸಿ ಟಿ-20 ವಿಶ್ವಕಪ್ ನಂತರ 20 ಓವರ್​ಗಳ ತಂಡದ ನಾಯಕತ್ವ ತೊರೆಯುವುದಾಗಿ ನಾಯಕ ವಿರಾಟ್ ಕೊಹ್ಲಿ ಗುರುವಾರ ತಮ್ಮ ಇನ್​ಸ್ಟಾಗ್ರಾಮ್, ಟ್ವಿಟ್ಟರ್ ಮತ್ತು ಫೇಸ್​ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಬಗ್ಗೆ ಸುದೀರ್ಘವಾದ ಪತ್ರ ಬರೆದಿರುವ ಕೊಹ್ಲಿ, ಟಿ-20 ನಾಯಕತ್ವವನ್ನು ತೊರೆದು ಬೇರೆಯವರಿಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದಾರೆ.

ಕೊಹ್ಲಿಯ ನಂತರ ಭಾರತ ಟಿ-20 ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸುವುದು ಬುತೇಕ ಖಚಿತವಾಗಿದೆ. ರೋಹಿತ್ ನಾಯಕನಾದರೆ ಉಪ ನಾಯಕನ ಪಟ್ಟ ಯಾರಿಗೆ ಎಂಬೂದು ಕುತೂಹಲ. ಮೂಲಗಳ ಪ್ರಕಾರ ಭಾರತ ಟಿ-20 ತಂಡದ ಉಪ ನಾಯಕನ ಸ್ಥಾನಕ್ಕೆ ಮೂವರು ಆಟಗಾರರ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆಯಂತೆ. ಇದರ ಪ್ರಕಾರ ಕೆ. ಎಲ್ ರಾಹುಲ್, ರಿಷಭ್ ಪಂತ್ ಮತ್ತು ಜಸ್​ಪ್ರೀತ್ ಬುಮ್ರಾ ಪೈಕಿ ಒಬ್ಬರು ಟಿ-20 ವಿಶ್ವಕಪ್ ಬಳಿಕ ಭಾರತ ಟಿ-20 ತಂಡದ ಉಪ ನಾಯಕನ ಜವಾಬ್ದಾರಿ ಹೊರಲಿದ್ದಾರೆ.

Virat Kohli: ಭಾರತ ಟಿ-20 ತಂಡದ ಉಪ ನಾಯಕನ ಪಟ್ಟಕ್ಕೆ ಮೂರು ಆಟಗಾರರ ಶಾರ್ಟ್​ ಲಿಸ್ಟ್ ರೆಡಿ

IPL 2021: ಬದಲಾವಣೆ ಮಾಡಲು ಹಿಂದೇಟು ಹಾಕಿದ ಡೆಲ್ಲಿ ಕ್ಯಾಪಿಟಲ್ಸ್: ಶ್ರೇಯಸ್ ಅಯ್ಯರ್​ಗೆ ದೊಡ್ಡ ಆಘಾತ

(Virat Kohli Went To Selection Committee Mooted Idea to Have Remove Rohit Sharma ODI Vice-Captain)