AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಭಾರತ ಟಿ-20 ತಂಡದ ಉಪ ನಾಯಕನ ಪಟ್ಟಕ್ಕೆ ಮೂರು ಆಟಗಾರರ ಶಾರ್ಟ್​ ಲಿಸ್ಟ್ ರೆಡಿ

Rohit Sharma: ವಿರಾಟ್ ಕೊಹ್ಲಿ ನಾಯಕತ್ವದ ಬಳಿಕ ರೋಹಿತ್ ಶರ್ಮಾ ನಾಯಕನಾದರೆ ಉಪ ನಾಯಕನ ಪಟ್ಟ ಯಾರಿಗೆ ಎಂಬೂದು ಕುತೂಹಲ. ಮೂಲಗಳ ಪ್ರಕಾರ ಭಾರತ ಟಿ-20 ತಂಡದ ಉಪ ನಾಯಕನ ಸ್ಥಾನಕ್ಕೆ ಮೂವರು ಸ್ಟಾರ್ ಆಟಗಾರರ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆಯಂತೆ.

Virat Kohli: ಭಾರತ ಟಿ-20 ತಂಡದ ಉಪ ನಾಯಕನ ಪಟ್ಟಕ್ಕೆ ಮೂರು ಆಟಗಾರರ ಶಾರ್ಟ್​ ಲಿಸ್ಟ್ ರೆಡಿ
Virat Kohli Team India
TV9 Web
| Edited By: |

Updated on: Sep 17, 2021 | 8:54 AM

Share

ಕ್ರಿಕೆಟ್ (Cricket) ಜಗತ್ತಿನಲ್ಲಿ ಅಚ್ಚರಿ ಎಂಬಂತೆ ಗುರುವಾರ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಭಾರತ ಟಿ-20 ಕ್ರಿಕೆಟ್​ನಿಂದ ಟಿ-20 ವಿಶ್ವಕಪ್ (ICC T20 World Cup 2021) ಬಳಿಕ ನಾಯಕತ್ವ ತ್ಯಜಿಸುವುದಾಗಿ ಘೋಷಣೆ ಮಾಡಿದರು. ನಾಯಕತ್ವ ಬಿಟ್ಟುಕೊಟ್ಟು ಬ್ಯಾಟ್ಸ್​ಮನ್​ ಆಗಿ ಮುಂದುವರೆಯುವುದಾಗಿ ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ (Team India) ನಾಯಕನಾಗಿ ನನ್ನ ಪಯಣದಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಎಂದು ಕೊಹ್ಲಿ ಹೇಳಿದರು. ಕೊಹ್ಲಿ ಟಿ-20 ನಾಯಕತ್ವದಿಂದ ಕೆಳಗಿಳಿಯುವ ಸುದ್ದಿ ಹೊರಬಿದ್ದ ಬಿನ್ನಲ್ಲೇ ಚುಟುಕು ಕ್ರಿಕೆಟ್​ಗೆ ಟೀಮ್ ಇಂಡಿಯಾದ ಮುಂದಿನ ನಾಯಕ ಯಾರು? (Captain), ಉಪ ನಾಯಕ ಯಾರು (Vice Captain) ಎಂಬ ಪ್ರಶ್ನೆ ಎದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಂತು ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದೆ.

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಕೊಹ್ಲಿಯ ನಂತರ ಭಾರತ ಟಿ-20 ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸಲಿದ್ದಾರೆ. ಸದ್ಯ ವೈಟ್ ಬಾಲ್ ಕ್ರಿಕೆಟ್​ನ ಉಪ ನಾಯಕನಾಗಿರುವ ಹಿಟ್​ಮ್ಯಾನ್ ನಾಯಕತ್ವದ ಜವಾಬ್ದಾರಿ ಹೊರಲಿದ್ದಾರೆ. ಬಿಸಿಸಿಐ ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಲಿದೆ.

ರೋಹಿತ್ ನಾಯಕನಾದರೆ ಉಪ ನಾಯಕನ ಪಟ್ಟ ಯಾರಿಗೆ ಎಂಬೂದು ಕುತೂಹಲ. ಮೂಲಗಳ ಪ್ರಕಾರ ಭಾರತ ಟಿ-20 ತಂಡದ ಉಪ ನಾಯಕನ ಸ್ಥಾನಕ್ಕೆ ಮೂವರು ಸ್ಟಾರ್ ಆಟಗಾರರ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆಯಂತೆ.

ಕೆ. ಎಲ್ ರಾಹುಲ್: ರಾಹುಲ್​ಗೆ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅನುಭವವಿದೆ. ಅಲ್ಲದೆ ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧದ ಒಂದು ಟಿ-20 ಪಂದ್ಯದಲ್ಲಿ ಇವರು ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದ್ದರು. ಈ ಸಂದರ್ಭ ವಿರಾಟ್ ಕೊಹ್ಲಿ ವಿಶ್ರಾಂತಿಯಲ್ಲಿದ್ದರೆ, ರೋಹಿತ್ ಶರ್ಮಾ ಇಂಜುರಿಗೆ ತುತ್ತಾಗಿದ್ದರು. ಅಲ್ಲದೆ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಕ್ಯಾಪ್ಟನ್ ಆಗಿದ್ದಾರೆ.

ರಾಹುಲ್ ಪರ ಸುನಿಲ್ ಗವಾಸ್ಕರ್ ಕೂಡ ಮಾತನಾಡಿದ್ದು, ಭಾರತೀಯ ಕ್ರಿಕೆಟ್ ತಂಡದ ಭವಿಷ್ಯದ ನಾಯಕನನ್ನಾಗಿ ರೂಪುಗೊಳಿಸಲು ಬಿಸಿಸಿಐ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಉಪನಾಯಕನಾಗಿ ಕೆಎಲ್ ರಾಹುಲ್‌ರನ್ನು ನೇಮಿಸಬೇಕು. ಈ ಮೂಲಕ ಭವಿಷ್ಯದ ನಾಯಕನನ್ನಾಗಿ ಬೆಳೆಸಬೇಕಿದೆ ಎಂದು ಸುನಿಲ್ ಗವಾಸ್ಕರ್ ಸಲಹೆಯನ್ನು ನೀಡಿದ್ದಾರೆ.

ರಿಷಭ್ ಪಂತ್: ಪಂತ್​ಗೆ ಕೂಡ ನಾಯಕತ್ವದ ಜವಾಬ್ದಾರಿಯ ಅರಿವಿದೆ. ದೇಶೀಯ ಕ್ರಿಕೆಟ್​ನಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಿದರೆ, ಈ ಬಾರಿಯ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇವರ ನಾಯಕತ್ವದಡಿಯಲ್ಲಿ ಅಮೋಘ ಪ್ರದರ್ಶನ ನೀಡಿ ಪಾಯಿಂಟ್ ಟೇಬಲ್​ನಲ್ಲಿ ಮೊದಲ ಸ್ಥಾನದಲ್ಲಿದೆ. ಉಪ ನಾಯಕನ ಪಟ್ಟಕ್ಕೆ ಇವರು ಮೊದಲ ಆಯ್ಕೆ ಎನ್ನಲಾಗಿದೆ.

ಜಸ್​ಪ್ರೀತ್ ಬುಮ್ರಾ: ಬುಮ್ರಾ ಅವರಿಗೆ ನಾಯಕನಾಗಿ ಯಾವುದೇ ಮಾದರಿಯಲ್ಲೂ ಅನುಭವವಿಲ್ಲ. ಆದರೆ, ಭಾರತ ಮತ್ತು ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಅಲ್ಲದೆ ಲೀಡರ್​ಶಿಪ್ ಗ್ರೂಪ್​ನಲ್ಲಿ ಇವರು ಕೆಲಸ ಮಾಡಿದ್ದಾರೆ. ಹೀಗಾಗಿ ಇವರ ಹೆಸರು ಕೂಡ ಉಪ ನಾಯಕನ ರೇಸ್​ನಲ್ಲಿ ಕಾಣಿಸಿಕೊಂಡಿದೆ.

ಐಸಿಸಿ ಟಿ-20 ವಿಶ್ವಕಪ್ ನಂತರ 20 ಓವರ್​ಗಳ ತಂಡದ ನಾಯಕತ್ವ ತೊರೆಯುವುದಾಗಿ ನಾಯಕ ವಿರಾಟ್ ಕೊಹ್ಲಿ ಗುರುವಾರ ತಮ್ಮ ಇನ್​ಸ್ಟಾಗ್ರಾಮ್, ಟ್ವಿಟ್ಟರ್ ಮತ್ತು ಫೇಸ್​ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ಈ ಬಗ್ಗೆ ಸುದೀರ್ಘವಾದ ಪತ್ರ ಬರೆದಿರುವ ಕೊಹ್ಲಿ, ಟಿ-20 ನಾಯಕತ್ವವನ್ನು ತೊರೆದು ಬೇರೆಯವರಿಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೆ ಅಕ್ಟೋಬರ್- ನವೆಂಬರ್​ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ನಂತರ ಏಕದಿನ ಹಾಗೂ ಟಿ-20 ಪಂದ್ಯಗಳಿಗೆ ಟೀಮ್ ಇಂಡಿಯಾ ನಾಯಕತ್ವವನ್ನು ಕೊಹ್ಲಿ ತೊರೆಯಲಿದ್ದಾರೆ ಎಂಬ ವರದಿಯಾಗಿತ್ತು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಸದ್ಯ ಕೊಹ್ಲಿ ಈ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

India vs New Zealand: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಬೆನ್ನಲ್ಲೇ ಭಾರತದ ನ್ಯೂಜಿಲೆಂಡ್ ಪ್ರವಾಸವನ್ನೂ ರದ್ದುಗೊಳಿಸಿದ ಬಿಸಿಸಿಐ

Virat Kohli: ವಿರಾಟ್ ಕೊಹ್ಲಿ ಟಿ-20 ನಾಯಕತ್ವಕ್ಕೆ ವಿದಾಯ ಹೇಳಿದ ಬೆನ್ನಲ್ಲೇ ಸೌರವ್ ಗಂಗೂಲಿ ಏನಂದ್ರು?

(KL Rahul Rishabh Pant and Jasprit Bumrah are in the race to become India T20I Vice Captain)

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್