IND vs SL: 100ನೇ ಟೆಸ್ಟ್​ ಪಂದ್ಯದಲ್ಲಿ ತನ್ನ ವಿಶೇಷ ಅಭಿಮಾನಿಗೆ ವಿಶೇಷ ಉಡುಗೂರೆ ಕೊಟ್ಟ ಕೊಹ್ಲಿ! ವಿಡಿಯೋ ನೋಡಿ

| Updated By: ಪೃಥ್ವಿಶಂಕರ

Updated on: Mar 07, 2022 | 4:10 PM

Virat Kohli: ಭಾನುವಾರ ಶ್ರೀಲಂಕಾ ವಿರುದ್ಧ 222 ರನ್‌ಗಳ ಜಯ ಸಾಧಿಸಿದ ಟೀಂ ಇಂಡಿಯಾ ಕ್ರೀಡಾಂಗಣದಿಂದ ನಿರ್ಗಮಿಸಿತ್ತು. ಆ ವೇಳೆ ಬಸ್ಸಿನತ್ತ ನಡೆಯುತ್ತಿದ್ದಾಗ ವಿರಾಟ್ ಧರ್ಮವೀರನನ್ನು ಕಂಡರು. ಆ ವೇಳೆ ವಿರಾಟ್ ತಮ್ಮ ಟೀಂ ಇಂಡಿಯಾದ ಜೆರ್ಸಿಯನ್ನು ಧರ್ಮವೀರ್​ಗೆ ಉಡುಗೊರೆಯಾಗಿ ನೀಡಿದ್ದರು.

IND vs SL: 100ನೇ ಟೆಸ್ಟ್​ ಪಂದ್ಯದಲ್ಲಿ ತನ್ನ ವಿಶೇಷ ಅಭಿಮಾನಿಗೆ ವಿಶೇಷ ಉಡುಗೂರೆ ಕೊಟ್ಟ ಕೊಹ್ಲಿ! ವಿಡಿಯೋ ನೋಡಿ
ತನ್ನ ವಿಶೇಷ ಅಭಿಮಾನಿಗೆ ವಿಶೇಷ ಉಡುಗೂರೆ ಕೊಟ್ಟ ವಿರಾಟ್
Follow us on

ಕಳೆದ ಕೆಲವು ದಿನಗಳಿಂದ ವಿರಾಟ್ ಕೊಹ್ಲಿ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಏಕೆಂದರೆ ವಿರಾಟ್ ಕೊಹ್ಲಿ (Virat Kohli) ತಮ್ಮ ಕ್ರಿಕೆಟ್ ಜೀವನದ 100ನೇ ಟೆಸ್ಟ್ ಪಂದ್ಯವನ್ನು ಮೊಹಾಲಿಯಲ್ಲಿ ಆಡಿದ್ದರು. ಕೊನೆಯ ಕ್ಷಣದಲ್ಲಿ ಕ್ರೀಡಾಂಗಣಕ್ಕೆ ಪ್ರೇಕ್ಷಕರು ಬರಲು ಬಿಸಿಸಿಐ (BCCI) ಅವಕಾಶ ನೀಡಿತು. ಆದ್ದರಿಂದ, ವಿರಾಟ್ ಅವರ 100 ನೇ ಟೆಸ್ಟ್ ಸಂದರ್ಭದಲ್ಲಿ ಕ್ರಿಕೆಟ್ ಅಭಿಮಾನಿಗಳು ಕೆಲವು ಮರೆಯಲಾಗದ ಕ್ಷಣಗಳನ್ನು ಅನುಭವಿಸಲು ಸಾಧ್ಯವಾಯಿತು. ಈ ಟೆಸ್ಟ್‌ನಲ್ಲಿ ವಿರಾಟ್ ಬ್ಯಾಟ್‌ನಿಂದ ಮಿಂಚಲಿಲ್ಲ. ವಿರಾಟ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 45 ರನ್ ಗಳಿಸಲಷ್ಟೇ ಶಕ್ತರಾದರು. ಈ ಟೆಸ್ಟ್​ನಲ್ಲಿ ಭಾರತಕ್ಕೆ ಇನ್ನಿಂಗ್ಸ್ ಗೆಲುವು ಸಿಕ್ಕಿದ್ದರಿಂದ್ದ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್‌ಗೆ ಬ್ಯಾಟಿಂಗ್‌ ಅವಕಾಶ ಸಿಗಲಿಲ್ಲ. ಈಡೀ ಪಂದ್ಯದಲ್ಲಿ ರವೀಂದ್ರ ಜಡೇಜಾ (Ravindra Jadeja) ಮಿಂಚಿದರು. ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ 175 ರನ್ ಗಳಿಸಿದಲ್ಲದೆ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದರು.

ಈ ಟೆಸ್ಟ್​ನಲ್ಲಿ ವಿರಾಟ್ ಹೆಚ್ಚು ಮಿಂಚಲಿಲ್ಲ. ಆದರೆ ಅವರು ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡಿದರು. ಮೈದಾನದಲ್ಲಿರುವಾಗ ತಂಡವನ್ನು ಹುರಿದುಂಬಿಸಲು ವಿರಾಟ್ ಪ್ರೇಕ್ಷಕರನ್ನು ಹುರಿದುಂಬಿಸುವಂತೆ ಕೇಳಿಕೊಳ್ಳುತ್ತಿದ್ದರು. ಹೀಗಾಗಿ ಕ್ರಿಕೆಟ್ ಅಭಿಮಾನಿಗಳು ಕೂಡ ಸಖತ್ ಉತ್ಸುಕರಾಗಿದ್ದರು. ಮೈದಾನದಲ್ಲಿ ಪ್ರೇಕ್ಷಕರಿಗೆ ಖುಷಿ ನೀಡಿದ ವಿರಾಟ್ ಈಗ ಮೈದಾನದ ಹೊರಗೆ ತಮ್ಮ ನಡೆಗಳಿಂದ ಎಲ್ಲರ ಮನ ಗೆದ್ದಿದ್ದಾರೆ. ಪಂದ್ಯದ ನಂತರ, ವಿರಾಟ್ ತನ್ನ ಅನಧಿಕೃತ 12 ನೇ ಭಾರತೀಯ ಆಟಗಾರನಿಗೆ ತನ್ನ ರಾಷ್ಟ್ರೀಯ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿ ಇಡೀ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಈ ಅನಧಿಕೃತ 12ನೇ ಆಟಗಾರ ಯಾರು?
ಧರ್ಮವೀರ್ ಪಾಲ್ ಕ್ರಿಕೆಟ್​ನ ದೊಡ್ಡ ಅಭಿಮಾನಿ. ಅವರು ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ. ಧರ್ಮವಾರಿ ಮೂಲತಃ ಅಂಗವಿಕಲರಾಗಿದ್ದು ಚಿಕ್ಕಂದರಲ್ಲೇ ಪೋಲಿಯೊಗೆ ತುತ್ತಾಗಿದ್ದರು. ಆದರೆ ಇದರ ಹೊರತಾಗಿಯೂ ಧರ್ಮವೀರ್ ಅವರ ಪಾರ್ಶ್ವವಾಯು ಅವರ ಕ್ರಿಕೆಟ್ ಪ್ರೀತಿಗೆ ಎಂದಿಗೂ ಅಡ್ಡಿಯಾಗಿಲ್ಲ. ಸುಧೀರ್ ಅವರಂತೆ ಭಾರತ ಕ್ರಿಕೆಟ್ ತಂಡವನ್ನು ಬೆಂಬಲಿಸಲು ಅವರು ಯಾವಾಗಲೂ ಕ್ರೀಡಾಂಗಣದಲ್ಲಿ ಇರುತ್ತಾರೆ. ಅದಕ್ಕಾಗಿಯೇ ಅವರನ್ನು ಭಾರತೀಯ ಕ್ರಿಕೆಟ್ ತಂಡದ ಅನಧಿಕೃತ 12 ನೇ ಆಟಗಾರ ಎಂದು ಪರಿಗಣಿಸಲಾಗಿದೆ. ಧರ್ಮವೀರ್ ಟೀಂ ಇಂಡಿಯಾದ ಹಲವು ಆಟಗಾರರನ್ನು ಬಲ್ಲರು. ಅವರು ಅವರನ್ನು ಭೇಟಿ ಕೂಡ ಮಾಡಿದ್ದಾರೆ.

ಧರ್ಮವೀರ್ ಮಧ್ಯಪ್ರದೇಶದವರಾಗಿದ್ದು ಮಧ್ಯಪ್ರದೇಶ ದಿವ್ಯಾಂಗ್ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ಅಖಿಲ ಭಾರತ ಕ್ರಿಕೆಟ್ ಸಂಸ್ಥೆಯು ದಿವ್ಯಾಂಗ್ ಕ್ರಿಕೆಟಿಗರಿಗೆ ಸ್ಪರ್ಧೆಗಳನ್ನು ಆಯೋಜಿಸುತ್ತದೆ. ಅದರಲ್ಲಿ ಧರ್ಮವೀರ್ ಮಧ್ಯಪ್ರದೇಶವನ್ನು ಪ್ರತಿನಿಧಿಸುತ್ತಾರೆ. ಹೀಗಾಗಿ ನಾನು ಬದುಕಲು ಕ್ರಿಕೆಟ್ ಕಾರಣ ಎನ್ನುತ್ತಾರೆ ಅವರು.

ಭಾನುವಾರ ಶ್ರೀಲಂಕಾ ವಿರುದ್ಧ 222 ರನ್‌ಗಳ ಜಯ ಸಾಧಿಸಿದ ಟೀಂ ಇಂಡಿಯಾ ಕ್ರೀಡಾಂಗಣದಿಂದ ನಿರ್ಗಮಿಸಿತ್ತು. ಆ ವೇಳೆ ಬಸ್ಸಿನತ್ತ ನಡೆಯುತ್ತಿದ್ದಾಗ ವಿರಾಟ್ ಧರ್ಮವೀರನನ್ನು ಕಂಡರು. ಆ ವೇಳೆ ವಿರಾಟ್ ತಮ್ಮ ಟೀಂ ಇಂಡಿಯಾದ ಜೆರ್ಸಿಯನ್ನು ಧರ್ಮವೀರ್​ಗೆ ಉಡುಗೊರೆಯಾಗಿ ನೀಡಿದ್ದರು. ವಿರಾಟ್ ಅವರು ಈ ಹೃದಯ ವೈಶಾಲ್ಯತೆ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.

ಇದನ್ನೂ ಓದಿ:Virat Kohli 100th Test: ವಿರಾಟ್ ರನ್ ಶಿಕಾರಿ; ಕೊಹ್ಲಿ ಬ್ಯಾಟ್​ನಿಂದ ಶತಕ ಬರದಿದ್ದರೂ ದಾಖಲೆಗಳಿಗೇನೂ ಭರವಿಲ್ಲ!