IND vs SL: ಒಂದು ಪಂದ್ಯವನ್ನು ಆಡದೆ ಟೀಂ ಇಂಡಿಯಾದಿಂದ ಹೊರಬಿದ್ದ ಕುಲ್ದೀಪ್ ಯಾದವ್!
IND vs SL: ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಕುಲ್ದೀಪ್ ಯಾದವ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಅವರ ಜಾಗಕ್ಕೆ ಅಕ್ಷರ್ ಪಟೇಲ್ ಬಂದಿದ್ದಾರೆ.
ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ (India vs Sri Lanka Day Night Test) ಕುಲ್ದೀಪ್ ಯಾದವ್ (Kuldeep Yadav) ಅವರನ್ನು ತಂಡದಿಂದ ಕೈಬಿಡಲಾಗಿದೆ. ಅವರ ಜಾಗಕ್ಕೆ ಅಕ್ಷರ್ ಪಟೇಲ್ (Axar Patel) ಬಂದಿದ್ದಾರೆ. ಎರಡನೇ ಟೆಸ್ಟ್ ಪಂದ್ಯ ಮಾರ್ಚ್ 13 ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿದ್ದು, ಇದು ಹಗಲು-ರಾತ್ರಿ ಪಂದ್ಯವಾಗಿದೆ. ಅಕ್ಷರ್ ಪಟೇಲ್ ಇತ್ತೀಚೆಗೆ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಮೊಹಾಲಿಯಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್‌ನಲ್ಲಿ ಅವರು ಭಾರತ ತಂಡದ ಭಾಗವಾಗಿದ್ದರು. cricbuzz ವರದಿಗಳ ಪ್ರಕಾರ, 27 ವರ್ಷದ ಕುಲದೀಪ್ ಯಾದವ್ ಅವರನ್ನು ಅಕ್ಸರ್ ಪಟೇಲ್ ಅವರ ಬ್ಯಾಕಪ್ ಆಗಿ ಆಯ್ಕೆ ಮಾಡಲಾಗಿಲ್ಲ. ಆದರೆ ತಂಡಕ್ಕೆ ಮೂವರು ಎಡಗೈ ಸ್ಪಿನ್ನರ್‌ಗಳ ಅಗತ್ಯವಿಲ್ಲ ಎಂದು ತಂಡದ ಮ್ಯಾನೇಜ್‌ಮೆಂಟ್ ನಂಬಿದೆ. ರವೀಂದ್ರ ಜಡೇಜಾ ಕೂಡ ತಂಡದ ಭಾಗವಾಗಿದ್ದಾರೆ. ಇವರಲ್ಲದೆ ಸೌರಭ್ ಕುಮಾರ್, ಅಕ್ಷರ್ ಪಟೇಲ್ ಕೂಡ ಇದ್ದಾರೆ. ಇವರಲ್ಲದೆ ಆರ್ ಅಶ್ವಿನ್ ಮತ್ತು ಜಯಂತ್ ಯಾದವ್ ರೂಪದಲ್ಲಿ ಇಬ್ಬರು ಆಫ್ ಸ್ಪಿನ್ನರ್‌ಗಳಿದ್ದಾರೆ.
ಎರಡು ಟೆಸ್ಟ್‌ಗಳ ಸರಣಿಗಾಗಿ ಭಾರತ ತಂಡವನ್ನು ಫೆಬ್ರವರಿ 22 ರಂದು ಪ್ರಕಟಿಸಲಾಯಿತು. ನಂತರ ಅಕ್ಷರ್ ಪಟೇಲ್ ಇನ್ನೂ ರಿಹ್ಯಾಬ್‌ನಲ್ಲಿದ್ದಾರೆ ಮತ್ತು ಮೊದಲ ಟೆಸ್ಟ್‌ನಲ್ಲಿ ಆಯ್ಕೆಗೆ ಲಭ್ಯವಿರುವುದಿಲ್ಲ ಎಂದು ಬಿಸಿಸಿಐ ಆಗ ಹೇಳಿತ್ತು. ಅವರನ್ನು ಎರಡನೇ ಟೆಸ್ಟ್ ಪಂದ್ಯದ ಆಯ್ಕೆಗಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿಕೊಂಡಿತ್ತು. ಡಿಸೆಂಬರ್ 2021 ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮುಂಬೈ ಟೆಸ್ಟ್ ನಂತರ ಅಕ್ಷರ್ ಪಟೇಲ್ ಟೆಸ್ಟ್ನಿಂದ ದೂರವಿದ್ದಾರೆ. ಅಂದಿನಿಂದ, ವಿವಿಧ ಕಾರಣಗಳಿಂದ ಅವರಿಗೆ ಆಡಲು ಸಾಧ್ಯವಾಗಲಿಲ್ಲ.
ಮಾರ್ಚ್ 9ರ ನಂತರ ಟೀಂ ಇಂಡಿಯಾ ಬೆಂಗಳೂರಿಗೆ ತೆರಳಲಿದೆ ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ಮೂರು ದಿನಗಳ ಅಂತರದಲ್ಲಿ ಜಯ ಸಾಧಿಸಿದೆ. ಆದರೆ ಇದೀಗ ಭಾರತ ತಂಡ ಮಾರ್ಚ್ 9ರವರೆಗೆ ಮೊಹಾಲಿಯಲ್ಲಿಯೇ ಇರಲಿದ್ದು, ಬಳಿಕ ಬೆಂಗಳೂರಿಗೆ ತೆರಳಲಿದೆ. ಅದೇ ಸಮಯದಲ್ಲಿ, ಎನ್‌ಸಿಎ ಬ್ಯಾಟಿಂಗ್ ಕೋಚ್ ಅಪೂರ್ವ ದೇಸಾಯಿ, ತರಬೇತುದಾರ ಆನಂದ್ ಡೇಟ್ ಮತ್ತು ಫಿಸಿಯೋ ಪಾರ್ಥೋ ಅವರನ್ನು ಸಹ ಟೀಮ್ ಇಂಡಿಯಾದಿಂದ ಬಿಡುಗಡೆ ಮಾಡಲಾಗಿದೆ. ಆದರೆ ಸಾಯಿರಾಜ್ ಸ್ಪಿನ್ ಕೋಚ್ ಆಗಿ ತಂಡದಲ್ಲಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಭಾರತೀಯ ಆಟಗಾರರಿಗೆ ಸಹಾಯ ಮಾಡಲು ಎನ್‌ಸಿಎ ಸಿಬ್ಬಂದಿ ತೆರಳಿದ್ದರು. ಏಕೆಂದರೆ ಮುಖ್ಯ ಕೋಚ್ ಸೇರಿದಂತೆ ಉಳಿದ ಸಹಾಯಕ ಸಿಬ್ಬಂದಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ನಿರತರಾಗಿದ್ದರು. ಅಲ್ಲಿಯವರೆಗೆ ಎನ್‌ಸಿಎ ಸಿಬ್ಬಂದಿ ಮೊಹಾಲಿಯಲ್ಲಿ ಟೆಸ್ಟ್ ತಜ್ಞರಿಗೆ ತರಬೇತಿ ನೀಡಿದ್ದರು.
ಎರಡನೇ ಟೆಸ್ಟ್‌ಗೆ ಭಾರತ ಟೆಸ್ಟ್ ತಂಡ ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಿಯಾಂಕ್ ಪಾಂಚಾಲ್, ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶುಭಮನ್ ಗಿಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್, ರವೀಂದ್ರ ಜಡೇಜಾ, ಜಯಂತ್ ಯಾದವ್, ಆರ್ ಅಶ್ವಿನ್, ಆರ್ ಅಶ್ವಿನ್ ಅಕ್ಷರ್ ಪಟೇಲ್, ಸೌರಭ್ ಕುಮಾರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದ್, ಮೊಹಮ್ಮದ್ ಶಮಿ.
ಇದನ್ನೂ ಓದಿ:Rohit Sharma: ಟೀಂ ಇಂಡಿಯಾ ಜೆರ್ಸಿ ಬಣ್ಣದ ಐಷರಾಮಿ ಕಾರು ಖರೀದಿಸಿದ ರೋಹಿತ್; ಬೆಲೆ ಕೇಳಿದ್ರೆ ಪಕ್ಕ ಶಾಕ್ ಆಗ್ತೀರಾ?
Published On - 2:41 pm, Mon, 7 March 22