Virat Kohli Birthday: ಈಡನ್ ಗಾರ್ಡನ್ಸ್​ನಲ್ಲಿ ಕೊಹ್ಲಿ ಬರ್ತ್ ಡೇ ಸೆಲೆಬ್ರೇಷನ್ ದಿಢೀರ್ ರದ್ದು: ಕಾರಣ ಇಲ್ಲಿದೆ

|

Updated on: Nov 05, 2023 | 8:42 AM

India vs South Africa, ICC World Cup: ಕ್ರಿಕೆಟ್ ಅಸೋಸಿಯೇಷನ್ ​​ಆಫ್ ಬೆಂಗಾಲ್ (CAB) ಕೊಹ್ಲಿ ಹುಟ್ಟುಹಬ್ಬವನ್ನು ಆಚರಿಸಲು ವಿಶೇಷ ಯೋಜನೆಗಳನ್ನು ಹಾಕಿಕೊಂಡಿತ್ತು. ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗೆ 70,000 ಕೊಹ್ಲಿಯ ಮುಖವಾಡಗಳನ್ನು ನೀಡಲು ವ್ಯವಸ್ಥೆ ಮಾಡಿತ್ತು. ಆದರೆ ಇದೀಗ ಈ ಎಲ್ಲ ಪ್ಲಾನ್ ಅನ್ನು ರದ್ದುಗೊಳಿಸಲಾಗಿದೆ.

Virat Kohli Birthday: ಈಡನ್ ಗಾರ್ಡನ್ಸ್​ನಲ್ಲಿ ಕೊಹ್ಲಿ ಬರ್ತ್ ಡೇ ಸೆಲೆಬ್ರೇಷನ್ ದಿಢೀರ್ ರದ್ದು: ಕಾರಣ ಇಲ್ಲಿದೆ
Virat Kohli
Follow us on

ವಿರಾಟ್ ಕೊಹ್ಲಿ ಇಂದು (ನವೆಂಬರ್ 5) ತಮ್ಮ 35 ನೇ ಹುಟ್ಟುಹಬ್ಬವನ್ನು (Virat Kohli Birthday) ಆಚರಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ 2023 ರ ವಿಶ್ವಕಪ್‌ನ ಎಂಟನೇ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಈ ಹೈವೋಲ್ಟೇಜ್ ಪಂದ್ಯ ಆಯೋಜಿಸಲಾಗಿದೆ. ಇಂದಿನ ಪಂದ್ಯದಲ್ಲಿ ಕೊಹ್ಲಿ ಬ್ಯಾಟ್​ನಿಂದ 49ನೇ ಶತಕ ಬರುತ್ತಾ ಎಂಬುದು ನೋಡಬೇಕಿದೆ. ಇದರ ನಡುವೆ ಕೊಹ್ಲಿಯ ಈ ವಿಶೇಷ ದಿನವನ್ನು ಇನ್ನಷ್ಟು ಸ್ಪೆಷಲ್ ಮಾಡಲು ಹೊರಟ ಬೆಂಗಾಲ್ ಕ್ರಿಕೆಟ್​ಗೆ ಹಿನ್ನಡೆ ಆಗಿದೆ.

ಕ್ರಿಕೆಟ್ ಅಸೋಸಿಯೇಷನ್ ​​ಆಫ್ ಬೆಂಗಾಲ್ (CAB) ಕೊಹ್ಲಿ ಹುಟ್ಟುಹಬ್ಬವನ್ನು ಆಚರಿಸಲು ವಿಶೇಷ ಯೋಜನೆಗಳನ್ನು ಹಾಕಿಕೊಂಡಿತ್ತು. ಆದರೆ ಇದೀಗ ಈ ಎಲ್ಲ ಪ್ಲಾನ್ ಅನ್ನು ರದ್ದುಗೊಳಿಸಲಾಗಿದೆ. ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗೆ 70,000 ಕೊಹ್ಲಿಯ ಮುಖವಾಡಗಳನ್ನು ನೀಡಲು ವ್ಯವಸ್ಥೆ ಮಾಡಿತ್ತು. ಅದರೊಂದಿಗೆ ಪಟಾಕಿ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ವಿರಾಟ್ ಕೊಹ್ಲಿಗೆ ಕೇಕ್ ಕೂಡ ಇರುತ್ತಿತ್ತು. ಆದರೆ ಈ ಎಲ್ಲ ಕಾರ್ಯಕ್ರಮ ರದ್ದಾಗಿದೆ.

PAK vs NZ: ತವರು ನೆಲದಲ್ಲಿ ಪಾಕ್ ವಿರುದ್ಧ ದಾಖಲೆಯ ಶತಕ ಸಿಡಿಸಿದ ಕನ್ನಡಿಗ ರಚಿನ್ ರವೀಂದ್ರ..!

ಇದನ್ನೂ ಓದಿ
35ನೇ ವರ್ಷಕ್ಕೆ ಕಾಲಿಟ್ಟ ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ
ವಿಶ್ವಕಪ್​ನಲ್ಲಿಂದು ಭಾರತ-ದಕ್ಷಿಣ ಆಫ್ರಿಕಾ ನಡುವೆ ಹೈವೋಲ್ಟೇಜ್ ಪಂದ್ಯ
ಪಾಕ್ ವಿರುದ್ಧ ಕನ್ನಡಿಗನ ಪರಾಕ್ರಮ: ಹಳೆಯ ವಿಶ್ವ ದಾಖಲೆಗಳು ಧೂಳೀಪಟ
ಸಿಕ್ಸ್​ಗಳ ಸುರಿಮಳೆ: ಸ್ಪೋಟಕ ಸೆಂಚುರಿ ಸಿಡಿಸಿ ದಾಖಲೆ ಬರೆದ ಫಖರ್ ಝಮಾನ್

ಮೂಲಗಳ ಪ್ರಕಾರ, ಈ ಆಚರಣೆಯು ಐಸಿಸಿ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ಎಲ್ಲ ಕಾರ್ಯಕ್ರಮವನ್ನು ಕ್ರಿಕೆಟ್ ಅಸೋಸಿಯೇಷನ್ ​​ಆಫ್ ಬೆಂಗಾಲ್ ರದ್ದುಗೊಳಿಸಿದೆ ಎಂದು ಹೇಳಲಾಗಿದೆ. ಆದರೆ, ಅಭಿಮಾನಿಗಳು ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹಾಡಲಿದ್ದಾರೆ. ಕೇಕ್ ಕಟ್ಟಿಂಗ್ ತಂಡದ ಡ್ರೆಸ್ಸಿಂಗ್ ರೂಮ್​ನ ಒಳಗೆ ಮಾತ್ರ ನಡೆಯಲಿದೆಯಂತೆ.

ಸದ್ಯ ಭರ್ಜರಿ ಫಾರ್ಮ್​ನಲ್ಲಿರುವ ವಿರಾಟ್ 442 ರನ್‌ಗಳೊಂದಿಗೆ 2023ರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಆಫ್ರಿಕಾ ತಂಡದ ಕ್ವಿಂಟನ್ ಡಿ ಕಾಕ್ ಅಗ್ರ ಸ್ಥಾನದಲ್ಲಿದ್ದಾರೆ. ಇವರು ಏಳು ಪಂದ್ಯಗಳಿಂದ 545 ರನ್ ಗಳಿಸಿದ್ದಾರೆ. ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ನಡುವೆ ಪೈಪೋಟಿ ನಡೆಯಲಿದೆ. ಟೂರ್ನಿಯಲ್ಲಿ ಕೊಹ್ಲಿ ಸರಾಸರಿ 88.40 ಆಗಿದ್ದು, ಇದರಲ್ಲಿ ಒಂದು ಶತಕ ಸೇರಿದೆ.

ತಮ್ಮ ಜೀವನದ ಆರಂಭಿಕ ಕಾಲಘಟ್ಟದಲ್ಲಿ ಸಾಕಷ್ಟು ವೈಫಲ್ಯಗಳನ್ನು ಎದುರಿಸಿ ಇಂದು ವಿಶ್ವದ ಶ್ರೇಷ್ಠ ಕ್ರಿಕೆಟಿಗನಾಗಿ ಗುರುತಿಸಿಕೊಂಡಿರುವ ಕಿಂಗ್ ಕೊಹ್ಲಿಗೆ ಜನ್ಮದಿನದ ಪ್ರಯುಕ್ತ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇಂದು ವಿರಾಟ್ ಬ್ಯಾಟ್​ನಿಂದ ಶತಕ ಬಂದರೆ ಅದು ಸಚಿನ್ ಅವರ 49ನೇ ಶತಕಗಳ ದಾಖಲೆಯನ್ನು ಸರಿಗಟ್ಟಿದಂತಾಗುತ್ತದೆ. ಪ್ರತಿ ಪಂದ್ಯದಲ್ಲಿ ಒಂದಲ್ಲ ಒಂದು ದಾಖಲೆ ನಿರ್ಮಿಸುತ್ತ ಅನೇಕ ದಾಖಲೆಗಳ ಸರದಾರನಾಗಿರುವ ಕಿಂಗ್ ಕೊಹ್ಲಿಗೆ ಟಿವಿ9 ಕನ್ನಡ ವೆಬ್ ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ